ಯುವಕರು ಜಾಗೃತರಾಗಿ ಮತದಾನದ ಮಹತ್ವವನ್ನು ಇತರರಿಗೆ ತಿಳಿಸಬೇಕು. ಉತ್ತಮ ನಾಯಕನನ್ನು ಆಯ್ಕೆ ಮಾಡುವದರಲ್ಲಿ ಮುಂದಾಗಬೇಕು ಎಂದು ತಿಳಿಸಬೇಕು ಎಂದು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ, ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ‘ವಿಶಾಲ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಎಂ.ಬಿ. ದಳಪತಿ ಮಾತನಾಡಿದರು.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಶಿಬಿರಾರ್ಥಿಗಳು ಜಾತಾ ಮೂಲಕ ಅರಿವು ಮೂಡಿಸುತ್ತಿರುವುದು ಸಂತೋಷ. ಯುವಕರು ಜಾಗೃತರಾಗಿ ಮತದಾನದ ಮಹತ್ವವನ್ನು ಇತರರಿಗೆ ತಿಳಿಸಬೇಕು. ಉತ್ತಮ ನಾಯಕನನ್ನು ಆಯ್ಕೆ ಮಾಡುವದರಲ್ಲಿ ಮುಂದಾಗಬೇಕು ಎಂದು ತಿಳಿಸಬೇಕು ಎಂದರು.
ಮತ್ತೋರ್ವ ಅತಿಥಿಯಾದ ಅಂಜುಮನ ಇಸ್ಲಾಂ ಆಡಳಿತ ಮಂಡಳಿಯ ಸದಸ್ಯ ಕೈರುದ್ದಿನ್ ಶೇಖ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮತದಾನ ಅಗತ್ಯವಾಗಿದೆ ಎಂದು ಹೇಳಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ. ಜಯಾನಂದ ಹಟ್ಟಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಮತದಾನದ ಅರಿವನ್ನು ವಿಸ್ತರಿಸುವುದು ಪ್ರಸ್ತುತ ಕಾಲಕ್ಕೆ ಅತ್ಯಗತ್ಯ ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್ ಎಫ್ ಮಾಳನವರ ಮಾತನಾಡಿ, ಚುನಾವಣೆ ಸಂದರ್ಭದ ಶಿಸ್ತಿನ ಪಾಲನೆ ಹಾಗೂ ಮತದಾನ ಹಕ್ಕುಗಳ ಮಹತ್ವದ ಕುರಿತು ವಿವರಿಸುತ್ತಾ, ಇಂದಿನ ಜಾತಾ ಗ್ರಾಮಸ್ಥರಲ್ಲಿ ನಿಜವಾದ ಪ್ರಜಾಸತ್ತಾತ್ಮಕ ಅರಿವು ಮೂಡಿಸಲು ದಾರಿ ತೋರಿಸುತ್ತದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಬಿ. ನಾಲತವಾಡ ಮಾತನಾಡಿ, ಶಿಬಿರವನ್ನು ಏರ್ಪಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಯುವಜನರಲ್ಲಿನ ನಾಗರಿಕ ಜಾಗೃತಿಯಂತಹ ಕಾರ್ಯಕ್ರಮಗಳು ಸಮಾಜದ ಬೆಳವಣಿಗೆಗೆ ಆಧಾರವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರೋಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷೆ ಕಾಳವ್ವ ಬಡಿಗೇರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿಗಳಾದ ವಿ ಬಿ ಹಂದೂರ, ಶಿವಾನಂದ ಕನಾಜಿ, ಗ್ರಾಮದ ಹಿರಿಯರಾದ ರಾಮಣ್ಣ ಜಕ್ಕನವರ ವೇದಿಕೆಯ ಮೇಲಿದ್ದರು. ಪ್ರೊ. ಮುಬಾರಕ್ ಮುಲ್ಲಾ, ಪ್ರೊ. ಶೃತಿ ಯಾವಗಲಮಠ, ಪ್ರೊ. ರಶ್ಮಿ ಬೆಳವಡಿ, ಪ್ರೊ.ಕಾವ್ಯಾ ಪ್ರೊ.ಮಂಜುಳಾ ಹಟ್ಟಿ, ಮತ್ತು ಗ್ರಾಪಂ ಸಿಬ್ಬಂದಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನಾ ಧರಣಿ; ಹಲವು ನಾಯಕರ ಬಂಧನ
ಪ್ರೊ.ಉಲ್ಲಾಸ ದೂಡ್ಡಮನಿ ನಿರೂಪಿಸಿದರು. ಪ್ರೊ. ನಾಗರಾಜ್ ಕನಕಣಿ ಸ್ವಾಗತಿಸಿದರು. ಡಾ. ತಾಜುನ್ನಿಸಾ ಸೈಯದ್ ವಂದಿಸಿದರು. ಕರಡಿ ಮಜಲು, ಹೆಜ್ಜೆ ಮಜಲು ಹಾಗೂ ಶಿಂಗಾರಗೊಂಡ ಚಕ್ಕಡಿಯ (ರಥ) ಮೂಲಕ ಮತದಾನದ ಜಾಗೃತಿ ಮೂಡಿಸಿದರು. ಚಕ್ಕಡಿ ಮೆರವಣಿಗೆಯಲ್ಲಿ ಡಾ. ಎಂ. ಬಿ. ದಳಪತಿ ಹಾಗೂ ಇನ್ನಿತರ ಗಣ್ಯರಿದ್ದರು. ವಿದ್ಯಾರ್ಥಿಗಳು ಮತದಾನದ ಮಹತ್ವದ ಕುರಿತು ಘೋಷಣೆ ಕೂಗಿದರು.





