ಧಾರವಾಡ | ಸಿದ್ಧಪ್ಪ ಕಂಬಳಿ ಮೆಮೋರಿಯಲ್ ಮ್ಯೂಸಿಯಂ ಉದ್ಘಾಟನೆ

Date:

ಕರ್ನಾಟಕದ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದ, ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸರ್ ಸಿದ್ಧಪ್ಪ ಕಂಬಳಿ ಅವರ 141ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11ರಂದು ಹುಬ್ಬಳ್ಳಿಯ ಅಳಗುಂಡಿಗೆ ಓಣಿಯಲ್ಲಿ ನಡೆಸಿದರು.

ಸರ್ ಸಿದ್ಧಪ್ಪ ಕಂಬಳಿಯವರ ವೆಬಸೈಟ್ ಅನಾವರಣಗೊಳಿಸಿದ್ದು, ಕಾರ್ಯಕ್ರಮಕ್ಕೆ ಅನುಪಸ್ಥಿತಿಯಲ್ಲಿ ಕಳುಹಿಸಿದ್ದ ವಿಡಿಯೋದಲ್ಲಿ ಬಸವರಾಜ ಹೊರಟ್ಟಿ ಮಾತನಾಡಿ, ಸರ್ ಸಿದ್ಧಪ್ಪ ಕಂಬಳಿಯವರು ಕರ್ನಾಟಕದ ಏಕೀಕರಣಕ್ಕಾಗಿ ಅವಿರತ ದುಡಿದ ಮಹಾನ್ ನಾಯಕ. ಅಂತಹ ಮಹಾನ್ ನಾಯಕರ ಕುರಿತು ಇಂದಿಗೂ ಬಹುತೇಕರಿಗೆ ಗೊತ್ತಿಲ್ಲದೇ ಇರುವುದು ದುರಂತ. ಹಾಗಾಗಿ ಈ ಮೆಮೊರಿಯಲ್ ಮ್ಯೂಸಿಯಂ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಕಂಬಳಿಯವರದ್ದು ಪ್ರಾಮಾಣಿಕತೆಯುಳ್ಳ ಮನಸ್ಸು. ನೇರನುಡಿಯ ಕಂಬಳಿಯವರು ರಾಜಕೀಯದ ಧರ್ಮರಾಯ ಇದ್ದಂತೆ. ಸರ್ ಸಿದ್ಧಪ್ಪ ಕಂಬಳಿಯವರ ಅಗಾಧವಾದ ಸಾಧನೆಯಿಂದ ಅವರು ಯಾವತ್ತಿಗೂ ಅಜರಾಮರವಾಗಿದ್ದಾರೆ. ಅವರಿಗೆ ಸಿದ್ಧಾರೂಢರ ಪ್ರೇರಣೆ ಮತ್ತು ಪ್ರಭಾವವಾಗಿದ್ದು ಒಂದು ವಿಶೇಷತೆಯಾಗಿದೆ. ಸರ್ ಸಿದ್ದಪ್ಪ ಕಂಬಳಿಯವರ ಕುರಿತು ಹುಬ್ಬಳಿಯ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದು ಅವಶ್ಯಕವಿದೆ. ಸರ್ ಸಿದ್ಧಪ್ಪ ಕಂಬಳಿಯವರನ್ನು ಹೆಚ್ಚು ಜನಕ್ಕೆ ತಲುಪಿಸುವಲ್ಲಿ ನಾವು ವಿಫಲವಾಗಿದ್ದೇವೆ. ನಾವು ಚಂದ್ರಲೋಕಕ್ಕೆ ಹೋಗಿದ್ದನ್ನು ಹೆಚ್ಚೆಚ್ಚು ಮಾತನಾಡಿಕೊಳ್ಳುತ್ತೇವೆ. ಆದರೆ, ನಮ್ಮ ನಾಡು ಬೆಳಗಿದ ಮಹನೀಯರನ್ನು ಮರೆತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾಜಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಎಲ್ಲೋ ದೂರದಲ್ಲಿರುವವರನ್ನು ನಾವು ನೆನಪಿಸಿಕೊಳ್ಳುತ್ತ ಕೂರುತ್ತೇವೆ. ಹಿತ್ತಲ‌ಗಿಡ ಮದ್ದಲ್ಲ ಎಂಬಂತೆ ನಮ್ಮವರೆ, ನಮ್ಮ ನಾಡಿನಲ್ಲೇ ಬೆಳೆದು ನಮ್ಮ ನಾಡಿಗೆ ಅದ್ಭುತ ಕೊಡುಗೆ ನೀಡಿದ ಕಂಬಳಿ ಸಿದ್ಧಪ್ಪನವರ ಇತಿಹಾಸದ ಕುರಿತು ನಮಗೆ ಗೊತ್ತಿಲ್ಲದಿರುವುದು ದುರಂತದ ಸಂಗತಿ” ಎಂದರು.

ʼಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರುʼ ಎಂಬ ಅಂಬೇಡ್ಕರ್ ಅವರ ಮಾತನ್ನು ನೆನಪಿಸಿ, “ಅಂಬೇಡ್ಕರ್ ಅವರು ಸರ್ ಸಿದ್ದಪ್ಪ ಕಂಬಳಿಯವರ ಮೂಲಕ ಬಸವಣ್ಣನವರ ವಚನ ಸಾಹಿತ್ಯವನ್ನು ಓದುವಂತಾಯಿತು. ಅಂಬೇಡ್ಕರ್ ಮತ್ತು ಸರ್ ಸಿದ್ದಪ್ಪ ಕಂಬಳಿಯವರ ನಡುವೆ ಅವಿನಾಭಾವ ಸಂಬಂಧ ಒಡಮೂಡಿತ್ತು. ವಿಶೇಷವಾಗಿ ಹುಬ್ಬಳ್ಳಿಗೆ ಒಳ್ಳೆಯ ಹೆಸರು ಬರುವುದಕ್ಕೆ ಸರ್ ಸಿದ್ಧಪ್ಪ ಕಂಬಳಿಯವರು ಮೂಲಕಾರಣವೆಂದು ಹೇಳಿದರೂ ತಪ್ಪಾಗದು. ಧಾರವಾಡ ಭಾಗದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದ್ದರೆ ಅದರ ಶ್ರೇಯಸ್ಸು ಸರ್ ಸಿದ್ದಪ್ಪ ಕಂಬಳಿಯವರಿಗೆ ಸಲ್ಲಬೇಕು. ಧಾರವಾಡದಲ್ಲಿ ಕಂಬಳಿಯವರ ಕುರಿತಾಗಿ ದೊಡ್ಡ ಮಟ್ಟದ ಸಮಾವೇಶ ನಡೆಯುವಂತಾಗಲಿ. ನಾನು ಎಲ್ಲಿಗೆ ಕರೆದರೂ ಬರುತ್ತೇನೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳ್ಲಿ ಶಿಕ್ಷಕರು ವೈಚಾರಿಕತೆ ಪ್ರಜ್ಞೆ ಬೆಳೆಸಬೇಕು: ಸಾಹಿತಿ ಪುಣ್ಯವತಿ ವಿಸಾಜಿ

ಕೆಎಲ್ಇ ಸಂಸ್ಥೆಯ ಅಶೋಕ ಶೆಟ್ಟರ್ ಮಾತನಾಡಿ, “ಸರ್ ಸಿದ್ಧಪ್ಪ ಕಂಬಳಿಯವರ ಸಹಾಯ ಮತ್ತು ಸಹಕಾರದಿಂದ ಕೆಎಲ್ಇ ಸಂಸ್ಥೆ ಇವತ್ತು ಬೃಹತಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಅವರನ್ನು ಮುಂದಿನ‌ ಪೀಳಿಗೆ ಸದಾ ನೆನಪಿಡುವ ಅವಶ್ಯವಿದೆ. ಕಂಬಳಿಯವರ ಹೆಸರು ಅಜರಾಮರವಾಗಿ ಉಳಿಯಬೇಕಾದರೆ ಹುಬ್ಬಳ್ಳಿಯ ಕಾನೂನು ಮಹಾವಿಶ್ವವಿದ್ಯಾಲಯಕ್ಕೆ ಸರ್ ಸಿದ್ಧಪ್ಪ ಕಂಬಳಿಯವರ ಹೆಸರಿಡಬೇಕು” ಎಂದು ಎಲ್ಲರ ಪರವಾಗಿ ಬೇಡಿಕೆಯನ್ನಿತ್ತರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, “ಸರ್ ಸಿದ್ದಪ್ಪ ಕಂಬಳಿಯವರಿಗೆ ಬಸವಣ್ಣನವರ ವಿಚಾರಗಳು ಬಹಳಷ್ಟು ಹತ್ತಿರವಾಗಿದ್ದವು. ಕಂಬಳಿ ಸಿದ್ದಪ್ಪನವರು ಜಾತ್ಯಾತೀತರಾಗಿ ಬದುಕಿದವರು. ಅವರೊಬ್ಬ ಅದ್ಭುತ ವೈಚಾರಿಕ ಚಿಂತಕರೂ ಅಗಿದ್ದರು. ಅಂತಹ ಮಹಾನ್ ಚೇತನವನ್ನು ಗುರುತಿಸದೆ ಮತ್ತೊಬ್ಬರ ಸಾಧನೆಯ ಬಗ್ಗೆ ಮಾತ್ರ ಹೇಳುತ್ತ ಕುಳಿತಿರುವುದು ವಿಷಾಧನೀಯ. ಸರ್ ಸಿದ್ದಪ್ಪ ಕಂಬಳಿಯವರು, ಸಿದ್ಧಾರೂಢರು, ಛತ್ರಪತಿ ಶಾಹೂ ಮಹಾರಾಜರು, ಬಾಬಾ‌ ಸಾಹೇಬ್ ಅಂಬೇಡ್ಕರ್ ಅವರು ನಮಗೆಲ್ಲ ಆದರ್ಶವಾಗಬೇಕು. ಗತಕಾಲದ ಆ ಇತಿಹಾಸವನ್ನು ತಿಳಿಯುವಲ್ಲಿ ನಾವೆಲ್ಲ ಮುಂದೆ ಹೆಜ್ಜೆ ಹಾಕಬೇಕಿದೆ. ಹುಬ್ಬಳ್ಳಿಯ ಕಾನೂನು ಯೂನಿವರ್ಸಿಟಿಗೆ ಸರ್ ಸಿದ್ದಪ್ಪ ಕಂಬಳಿಯವರ ಹೆಸರಿಡಲು ಪ್ರಾಮಾಣಿಕವಾಗಿ ಕಾರ್ಯೋನ್ಮುಖನಾಗುತ್ತೇನೆ” ಎಂದು ಆಶ್ವಾಸನೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ವಾರ್ತಾ ಇಲಾಖೆ ಸಹಾಯಕನಿಂದ ಪತ್ರಕರ್ತನ ಮೇಲೆ ಹಲ್ಲೆ; ಸಾರ್ವಜನಿಕರ ಆಕ್ರೋಶ

ವಾರ್ತಾ ಇಲಾಖೆಯ ಸಹಾಯಕ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಓರ್ವ ಪತ್ರಕರ್ತನೊಬ್ಬನ...

ಧಾರವಾಡ | ಕಲಾಜಾಥಾ ಪ್ರಚಾರ ಕಾರ್ಯಕ್ರಮಕ್ಕೆ ತಾಳ ಹಾಕಿ, ಗ್ಯಾರಂಟಿ ಯೋಜನೆಯ ಹಾಡು ಹಾಡಿ, ಸಂತೋಷ ಲಾಡ್ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚಗ್ಯಾರಂಟಿಗಳ ಸಮರ್ಥ ಜಾರಿಯಿಂದ ಸರ್ಕಾರ ಹೊಸ...

ಧಾರವಾಡ | ಸರ್ವಜ್ಞನ ತ್ರಿಪದಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುವ ಸಾಹಿತ್ಯ: ಶಾಕೀರ್ ಸನದಿ

ಸರ್ವಜ್ಞರು ತ್ರಿಪದಿ ಎಂಬ ಕಾವ್ಯರೂಪದ ಮೂಲಕ ಜನಪ್ರಿಯ ಆಗಿದ್ದಾರೆ. ತ್ರಿಪದಿ ಚಿಕ್ಕದಾಗಿದ್ದರೂ...