ಧಾರವಾಡ | ಲಿಂಗಾಯತ ಧರ್ಮವನ್ನು ಬೇರೆ ಧಾರ್ಮಿಕ ಆಚರಣೆಗಳ ಜತೆಗೆ ಹೋಲಿಸಬಾರದು: ಚಿಂತಕ ಶಂಭು ಹೆಗಡಾಳ

Date:

ಧಾರವಾಡ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ವಿಚಾರ. ಸಮಾಜದಿಂದ ಸಂಘಟನೆಗೆ ಹಣಕಾಸಿನ‌ ಸಂಪನ್ಮೂಲಗಳ ಜತೆಗೆ ಜವಾಬ್ದಾರಿಯುತ ಮನಸ್ಸುಗಳು ಬೇಕಾಗುತ್ತದೆ ಎಂದು ಚಿಂತಕ ಶಂಭು ಹೆಗಡಾಳ ಹೇಳಿದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಾದ ಹುಬ್ಬಳ್ಳಿಯ ಜೆಎಲ್‌ಎಮ್‌ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಸಮಾಜಕ್ಕಾಗಿ ನನ್ನ ಸಮಯವನ್ನು ಕಿಂಚಿತ್ತಾದರೂ ಮೀಸಲಿಡಬೇಕು ಅಂದುಕೊಂಡಾಗ ನೋವುಗಳು ಸರ್ವೆಸಾಮಾನ್ಯ. ಆದರೆ ಸದೃಢ ಮನಸ್ಸು ಇದ್ದಾಗ ಸಂಘಟನೆ ಗಟ್ಟಿಯಾಗುತ್ತದೆ. ಧರ್ಮ ಎಂದಾಕ್ಷಣ ವ್ಯತ್ಯಾಸಗಳು ಕಾಣುತ್ತವೆ. ಲಿಂಗಾಯತ ಧರ್ಮವನ್ನು ಬೇರೆ ಧರ್ಮಗಳ ಧಾರ್ಮಿಕ ಆಚರಣೆಗಳ ಜೊತಗೆ ಹೋಲಿಕೆ ಮತ್ತು ವ್ಯಾತ್ಯಾಸಗಳನ್ನು ಹುಡುಕುವ ಕೆಲಸ ಆಗಬಾರದು. ನಮ್ಮ ಧರ್ಮದಲ್ಲಿ ವೈದಿಕಾಚರಣೆಗಳು ಹಾಸುಹೊಕ್ಕಾಗಿವೆಯೆಂದು ವೈದಿಕ ಧರ್ಮಾಚರಣೆಗಳನ್ನು ಎತ್ತಿ ಹಿಡಿಯುವುದನ್ನು ಬಿಟ್ಟು ನಮ್ಮ ಧರ್ಮದ ಆಚರಣೆಗಳನ್ನಷ್ಟೇ ಹೇಳಿಕೊಳ್ಳಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಸವತತ್ವದ ಮೂಲ ನಿಜ ಆಚರಣೆಗಳನ್ನು ಪಾಲಿಸಬೇಕೇ ಹೊರತು ಬೇರೆ ಆಚರಣೆಗಳ ಕುರಿತು ನಾವು ಟೀಕಿಸುವುದು ಸರಿಯಲ್ಲ. ನಮ್ಮ‌ ಧರ್ಮಕ್ಕಾಗಿ ಮತ್ತೊಂದು ಧರ್ಮವನ್ನು ಕಳನಾಯಕನ ಸ್ಥಾನದಲ್ಲಿ ನಿಲ್ಲಿಸಬಾರದು. ಸಂಘಟನಾ ಸಮಯದಲ್ಲಿ ಈ ರೀತಿಯ ವಿಷಯಗಳಲ್ಲಿ ಎಚ್ಚರವಹಿಸಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕಾಗುತ್ತದೆ. ಬಸವಾದಿ ಶರಣರು ಮತ್ತೊಂದು ವ್ಯವಸ್ಥೆಯನ್ನು ದೂಷಿಸಲಿಲ್ಲ. ಆದ್ಧರಿಂದ ನಾವು ವೈರತ್ವ ಕಟ್ಟಿಕೊಂಡು ಹೋದಾಗ ಸಂಘಟನೆ ಬೆಳೆಯುವುದಿಲ್ಲ. ಹೀಗಾಗಿ ಎಲ್ಲರನ್ನೂ ಪ್ರೇಮದಿಂದ ಬರಮಾಡಿಕೊಳ್ಳುವ ಮನಸ್ಸು ಇರಬೇಕು. ನಮ್ಮ‌ ಜನರೊಂದಿಗೆ ಅರಿವು ಮೂಡಿಸುವ ಕಾರ್ಯವಾಗಬೇಕೆ ಹೊರತು ಇನ್ನೊಬ್ಬರನ್ನು ದ್ವೇಷಿಸುವ ಕೆಲಸವಾಗಬಾರದು” ಎಂದು ತಿಳಿಸಿದರು.

“ನಾವು ಯಾರ ವಿರೋಧಿಗಳೂ ಅಲ್ಲ, ನಾವು ಯಾವ ವ್ಯವಸ್ಥೆಯ ವಿರೋಧಿಗಳಲ್ಲ. ನಮಗೆ ಅರಿವು ಮೂಡುವ ಮುನ್ನ ನಾವೂ ಮೌಢ್ಯತೆಯಲ್ಲಿ‌ ಮುಳುಗಿದ್ದವರೆ. ಸಂಘಟನೆ ಗಟ್ಟಿಗೊಳ್ಳಲು ಎಲ್ಲ ರೀತಿಯಿಂದ ನಮ್ಮ ಚಾರಿತ್ರ್ಯ ಶುದ್ಧವಾಗಿರಬೇಕು. ಪರರ ಸಂಕಷ್ಠಕ್ಕೆ ಸ್ಪಂದಿಸುವ ಗುಣವಿರಬೇಕು. ನಾವು ಬಾಗಿದ ತಲೆ ಮುಗಿದ ಕೈಯಾಗಿರಿಸಿಕೊಂದು ಹೋದಾಗ ಸಮಾಜದಲ್ಲಿ‌ ನಾವೂ ಪರಿಪೂರ್ಣತೆಯನ್ನು ಸಾಧಿಸುತ್ತೇವೆ. ನಂತರ ನಮ್ಮ ಪ್ರಭಾವದಿಂದ ಸಮಾಜವೂ ಬದಲಾವಣೆಯ ಹಾದಿಯನ್ನು‌ ಹಿಡಿಯುತ್ತದೆ. ನಾವು ವ್ಯಸನಮುಕ್ತರಾಗಬೇಕು, ತ್ಯಾಗಯುಕ್ತ ಜೀವನ ನಡೆಸಬೇಕು.‌ ಕೆಲವು ವರ್ಷಗಳ ನಂತರ ನಾವೂ ಪೂಜ್ಯರಾಗುತ್ತೇವೆ. ಇದಕ್ಕೆಲ್ಲ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಮತ್ತು ಒತ್ತಾಯವಾಗಿ ಯಾರ ಮೇಲೂ ಧರ್ಮಾಚರಣೆಗಳನ್ನು ಹೇರಬಾರದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ವೇದಗಳ ಕಾಲದಿಂದಲೂ ‘ಗಂಡು-ಹೆಣ್ಣು’ ಎಂಬ ಭೇದ ಇರಲಿಲ್ಲ: ಮಾಳವಿಕಾ

ಇದೇ ವೇಳೆ ಯುವ ಘಟಕದ ಅಧ್ಯಕ್ಷರಾಗಿ ಸಿ ಜಿ ಪಾಟಿಲ್ ಆಯ್ಕೆಯಾದರು. ಪದನಿಮಿತ್ತ ಸದಸ್ಯ ಬಸವಂತಪ್ಪ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿ, ಅರಿವು ಮತ್ತು ಆಚಾರದೊಂದಿಗೆ ಲಿಂಗಾಯತ ಧರ್ಮದ ಬೆಳವಣಿಗೆಗೆ ಅವಿರತ ದುಡಿಯೋಣ ಎಂದು ಹೇಳಿದರು.

ಅಧ್ಯಕ್ಷ ಎಂ ವಿ ಗೊಂಗಡಶೆಟ್ಟಿ ಪ್ರತಿಜ್ಞಾವಿಧಿಯನ್ನು ಹೇಳಿಕೊಟ್ಟರು. ಡಿ ಎ ಲಿಂಗಶೆಟ್ಟರ ಶರಣು ಸಮರ್ಪಣೆ ಸಲ್ಲಿಸಿದರು. ಶಿವರುದ್ರಗೌಡ ಪಾಟೀಲ್ ನೀರೂಪಣೆ ಮಾಡಿದರು. ಜೆಎಲ್ಎಂನ ಸರ್ವ ಪದಾಧಿಕಾರಿಗಳು, ಸದಸ್ಯರುಗಳು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...