ಧಾರವಾಡ | ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ: 20 ವರ್ಷಗಳಿಂದ ಸ್ಮಶಾನ ಉಳಿವಿಗಾಗಿ ಹೋರಾಟ

Date:

ಊರಿನಲ್ಲಿ ಏನಿಲ್ಲದಿದ್ದರೂ ಮುಖ್ಯವಾಗಿ ಸ್ಮಶಾನ ಇರಲೇಬೇಕು. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಸ್ಮಶಾನವಿದ್ದರೂ ಶವ ಸಂಸ್ಕಾರ ಮಾಡುವುದಕ್ಕೆ ಜನರು ಪರದಾಡುವ ವಾತಾವರಣ ಸೃಷ್ಟಿಯಾಗಿದೆ. ಕಳೆದ 20 ವರ್ಷಗಳಿಂದ ಗ್ರಾಮದ ಮೂಗಬಸವೇಶ್ವರ ದೇವಸ್ಥಾನದ ಹತ್ತಿರವಿರುವ ರುದ್ರಭೂಮಿಯ ರಕ್ಷಣೆಗಾಗಿ ನಿರಂತರ ಹೋರಾಟ ನಡೆದಿದ್ದು, ಈ ಕುರಿತು ಇಂದಿಗೂ ನ್ಯಾಯ ಸಿಕ್ಕಿಲ್ಲವೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿದಾರರೊಬ್ಬರು ಹಿಂದೂಗಳಿಗೆ ಸೇರಿದ ಸ್ಮಶಾನದ ಒಟ್ಟು 4 ಎಕರೆ ಈ ಜಾಗೆಯನ್ನು ಖರೀದಿ ಮಾಡಿದ್ದಾರೆ. ಈ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಸ್ಮಶಾನಗಳಿವೆ ಎಂದು ದಾಖಲೆಗಳಿಂದ ತಿಳಿದುಬರುತ್ತದೆ. ಆದರೂ ಸ್ಮಶಾನಕ್ಕಾಗಿ ಇಂದಿಗೂ ಪರದಾಟ ಮುಂದುವರೆದಿದೆ.

“ಸುಮಾರು 20ರಿಂದ 25 ಸಾವಿರ ಜನಸಂಖ್ಯೆ ಹೊಂದಿರುವ ಮಿಶ್ರಿಕೋಟಿ ಗ್ರಾಮದಲ್ಲಿ ಪಂಚವಟಿ ಎಂಬ ಹೆಸರಿನ ಮೇಲೆ 5 ಎಕರೆ 4 ಗುಂಟೆ ಜಾಗೆಯು ಗ್ರಾಮದ ಎಲ್ಲ ಸಮುದಾಯಗಳಿಗೆ ಸೇರಿದ್ದೆಂದು ದಾಖಲೆ ಇರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಆದರೆ ಈ ಭೂಮಿಯನ್ನು ಮುಸ್ಲಿಂ ಸಮುದಾಯದವರು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಹಿಂದೂ ಸಮುದಾಯದವರ ತಕರಾರೂ ಇಲ್ಲ. ಗ್ರಾಮದ ಹೊರ ವಲಯದ ರಸ್ತೆ ಬದಿಯಲ್ಲಿರುವ 4 ಎಕರೆ ಜಾಗದಲ್ಲಿ ಹಲವು ವರ್ಷಗಳಿಂದ ಹಿಂದೂಗಳು ಶವ ಸಂಸ್ಕಾರವನ್ನು ಮುಂದುವರಿಸುತ್ತ ಬಂದಿದ್ದಾರೆ. ಆದರೆ ಇದೀಗ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಸ್ಮಶಾನ ಭೂಮಿಯನ್ನು ಖರೀದಿ ಪಡೆದು ಇಲ್ಲಿಂದ ಜಾಗ ಖಾಲಿ ಮಾಡಲು ಹೇಳುತ್ತಿದ್ದಾರೆ. ಅದಷ್ಟೇ ಅಲ್ಲದೆ ಯಾರೂ ಇಲ್ಲದ ಸಮಯದಲ್ಲಿ ಸ್ಮಶಾನ ಭೂಮಿಗೆ ಬಂದು ಭೂಮಿಯನ್ನು ನೆಲಸಮಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಇಲ್ಲಿರುವ ಸಿದಗಿ ಇತ್ಯಾದಿಗಳನ್ನು ನಾಶಪಡಿಸುತ್ತಿದ್ದಾರೆ” ಎಂದು ಸ್ಮಶಾನ ಭೂಮಿಗಾಗಿ ಪರದಾಡುತ್ತಿರುವ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಅಶೋಕ ಕಾಶಿಬಡಿಗೇರ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ 20 ವರ್ಷಗಳಿಂದ ರುದ್ರ ಭೂಮಿಗಾಗಿ ಹೋರಾಟ ನಡೆಸಿದ್ದು, ಕೆಲವೊಂದು ಕಾಣದ ಕೈಗಳ ಕುತಂತ್ರದಿಂದ ನಮ್ಮಿಂದ ರುದ್ರಭೂಮಿ ಕಸಿಯುವ ಪ್ರಯತ್ನ ನಡೆಯುತ್ತಿದೆ. ನಮ್ಮ ಹಿರಿಯರ ಕಾಲದಿಂದಲೂ ನಾವು ಇಲ್ಲಿಯೇ ಶವ ಸಂಸ್ಕಾರ ಮಾಡುತ್ತ ಬಂದಿದ್ದೇವೆ. ಈಗಾಗಲೇ ಇಸ್ಲಾಂ ಸಮುದಾಯದವರೇ ಹೂಳುತ್ತ ಹೊರಟಿರುವ ಜಾಗದ ಬಗ್ಗೆ ಯಾವ ತಕರಾರೂ ಇಲ್ಲ. ಕೋಮುಗಲಭೆಗೆ ಆಸ್ಪದ ನೀಡಬಾರದು ಎಂಬ ಕಾರಣದಿಂದ ನಾವು ಕೂಡ ಆ ಕಡೆಗೆ ಹೋಗಿಲ್ಲ. ಮೇಲಾಗಿ ಈ ಗ್ರಾಮದಲ್ಲಿ ಒಂದಿಷ್ಟು ಕೋಮುಗಲಭೆಗಳು ನಡೆದಿದ್ದವು. ಈಗ ಮತ್ತಷ್ಟು ಕೋಮುಗಲಭೆ ಹೆಚ್ಚಿಸಬೇಕೆನ್ನುವ ದುರುದ್ದೇಶದಿಂದ ಈ ಜಾಗೆಯನ್ನು ಖರೀದಿ ಪಡೆದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ಕಂದಾಯ ಸಚಿವರು ಈ ಕುರಿತು ಗಂಭೀರವಾಗಿ ಯೋಚಿಸಬೇಕು. ನಮಗೆ ನ್ಯಾಯ ಕೊಡಿಸಬೇಕು” ಎಂದು ವಿನಂತಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಧಾರವಾಡ ಸ್ಮಶಾನ 1

ಮಹೇಶ್ ನರೇಂದ್ರ ಮಾತನಾಡಿ, “ಈ ಗ್ರಾಮದಲ್ಲಿ ಪ್ರತ್ಯೇಕವಾಗಿ ರುದ್ರಭೂಮಿ ಇದ್ದರೂ ಆ ಭೂಮಿಯನ್ನೇ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾದರೆ ನಾವೆಲ್ಲಿ ಶವ ಸಂಸ್ಕಾರವನ್ನು ಮಾಡಬೇಕು? ಎಲ್ಲಿ ಹೂಳಬೇಕು? ನೂರಾರು ವರ್ಷಗಳಿಂದ ನಮ್ಮ ಹಿರಿಯರು ಇದೇ ಹೊಲದಲ್ಲಿ ಅಂತ್ಯ ಸಂಸ್ಕಾರವನ್ನು ಮಾಡುತ್ತ ಬಂದಿದ್ದಾರೆ. ಈಗಿರುವ ಇದೇ ರುದ್ರಭೂಮಿಯನ್ನು ಯಾರ ಕೈಗೂ ಸೇರಿಸದಂತೆ ನಮಗೆ ಉಳಿಸಿಕೊಡಬೇಕು ಅಥವಾ ಈಗ ಮುಸ್ಲಿಂ ಬಾಂಧವರು ಬಳಸುತ್ತಿರುವ ಸ್ಮಶಾನ ಭೂಮಿಯಲ್ಲಿಯೇ ಎರಡು ವಿಭಾಗ ಮಾಡಿಕೊಡಬೇಕು. ಒಂದು ವೇಳೆ ಮುಂದಿನ ದಿನಮಾನದಲ್ಲಿ ಕೋಮು ಸಂಘರ್ಷಗಳಾದರೆ ಸರ್ಕಾರವೇ ನೇರಹೊಣೆ ಹೊರಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಧಾರವಾಡ ಸ್ಮಶಾನ 2

ಬಸವಣ್ಣೆಪ್ಪ ಹೆಬ್ಬಳ್ಳಿ ಮಾತನಾಡಿ, “ಈ ಗ್ರಾಮ ಹುಟ್ಟಿದಾಗಿನಿಂದಲೂ ಈ ರುದ್ರಭೂಮಿ ಇದ್ದೇ ಇದೆ. ನಾವು ಹಿರಿಯರ ಬಾಯಿಯಿಂದ ಕೇಳಿದ್ದೇವೆ. ಈ ರುದ್ರಭೂಮಿ ಯಾರಿಗೂ ಖರೀದಿಯಾಗಬಾರದೆಂದು ಹಲವಾರು ಬಾರಿ ತಕರಾರು ಅರ್ಜಿಗಳನ್ನು ಕಳೆದ 20 ವರ್ಷಗಳಿಂದ ನೀಡುತ್ತ ಬಂದಿದ್ದೇವೆ. ಆದರೂ ಯಾರೂ ಪ್ರತ್ಯುತ್ತರ ನೀಡಿಲ್ಲ. ಯಾರ ಸ್ಪಂದನೆಯೂ ನಮಗೆ ಸಿಕ್ಕಿಲ್ಲ. ಮುಖ್ಯವಾಗಿ ಅಧಿಕಾರಿಗಳು ಕೈಜೋಡಿಸಿ ಹಿಂದೂ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ. ಇದರಲ್ಲಿ ತಾಲೂಕಿನ ವಿವಿಧ ಅಧಿಕಾರಿಗಳ ಕೈವಾಡವಿದೆ” ಎಂದು ಆರೋಪಿಸಿದರು.

“ಈಗಾಗಲೇ ಮುಸ್ಲಿಂ ಬಾಂಧವರು ಬಳಸುತ್ತಿರುವ ರುದ್ರಭೂಮಿಯ ಅವಶ್ಯಕತೆ ನಮಗಿರುವುದಿಲ್ಲ. ಏಕೆಂದರೆ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಸುಖಾಸುಮ್ಮನೆ ಸಂಘರ್ಷಗಳು ಆಗುವುದು ಬೇಡ. ಆದ್ದರಿಂದ ಸರ್ಕಾರವು ಈ ಕುರಿತು ಗಂಭೀರವಾಗಿ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

ಧಾರವಾಡ ಸ್ಮಶಾನ 3

ಸುರೇಶ್ ಭೋವಿ ಮಾತನಾಡಿ, “2019ರಲ್ಲಿ ಈ ಹೊಲವನ್ನು ರುದ್ರಭೂಮಿಯನ್ನಾಗಿ ಬಳಸುತ್ತೇವೆಂದು ಠರಾವು ಪಾಸ್ ಮಾಡಲಾಗಿದ್ದು, ಈ ಹೊಲದ ಮಾಲೀಕರು ಸರ್ಕಾರ ನನಗೆ ಹಣ ಕಡಿಮೆ ಕೊಡುತ್ತದೆ ಎನ್ನುವ ಯೋಚನೆಯಿಂದ ಎಲ್ಲರ ಕಣ್ಣುತಪ್ಪಿಸಿ, ʼನಾನು ಈ ಊರಲ್ಲಿಲ್ಲ, ಬೇರೆ ಕಡೆ ಇದ್ದೇನೆʼ ಎಂದು ಹೇಳಿ ಯಾರಿಗೂ ಗೊತ್ತಾಗದಂತೆ ಇದೀಗ ಮುಚ್ಚಾಲೆ ಎಂಬುವ ರಿಯಲ್ ಎಸ್ಟೇಟ್ ಉದ್ಯಮಿದಾರರಿಗೆ ಮಾರಾಟ ಮಾಡಿದ್ದಾರೆ. ಅದೇನೇ ಇದ್ದರೂ ಸರ್ಕಾರವು ನಮಗೆ ನಮ್ಮ ರುದ್ರಭೂಮಿಯನ್ನು ಉಳಿಸಿಕೊಡಬೇಕು” ಎಂದು ಆಗ್ರಹಿಸಿದರು.

ರಾಮು ಫಿರೋಜಿ ಮಾತನಾಡಿ, “ನಾವು ಈ ರುದ್ರಭೂಮಿಯ ಸಲುವಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಶಾಸಕರಾಗಲಿ, ಸಚಿವರಾಗಲಿ ಯಾರೊಬ್ಬರೂ ಬಂದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ಸರ್ಕಾರಗಳು ಇದ್ದಾಗಲೂ ಈ ಸಮಸ್ಯೆ ಹೀಗೆಯೇ ಇದೆ. ಯಾರಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ. ಇನ್ನು ಧರ್ಮಸ್ಥಳದಲ್ಲಿ ಹೆಣಗಳಿವೆ ಎಂಬ ಹುಡುಕಾಡುತ್ತಿರುವ ಸರ್ಕಾರವು ಇಲ್ಲಿಯೂ ಬಂದು ಪರಿಶೀಲನೆ ಮಾಡಿ ನೋಡಿದಾಗ ಪೂರ್ವಜರು ಅಂತ್ಯಸಂಸ್ಕಾರ ಮಾಡುತ್ತಿದ್ದರೆಂಬುದನ್ನು ತಿಳಿದುಕೊಳ್ಳಬಹುದು. ಇನ್ನು ಈ ಜಾಗ ಖರೀದಿ ಮಾಡಿದ ವ್ಯಕ್ತಿಯು ನೀವು ಎಲ್ಲಾದರೂ ಹೊರಗಡೆ ಬಂದು ಸಿಕ್ಕಿರಿ ಎಂದು ದಾದಾಗಿರಿ ಮಾಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ. ಈಗಲೇ ಸರ್ಕಾರ ಎಚ್ಚೆತ್ತುಕೊಂಡು ಸ್ಮಶಾನವನ್ನು ನಮ್ಮ ಕಬ್ಜಾ ಕೊಡಿಸಬೇಕು” ಎಂದು ಒತ್ತಾಯಿಸಿದರು.

ಗ್ರಾ.ಪಂ ಸದಸ್ಯ ವಿಠ್ಠಲ್ ಸೂರ್ಯವಂಶಿ ಮಾತನಾಡಿ, “ಈ ಕುರಿತು ಹಲವು ಬಾರಿ ಠರಾವು ಪಾಸ್ ಮಾಡಿ ಪಂಚಾಯತ್ ಮೂಲಕ ಅರ್ಜಿ ನೀಡಲಾಗಿದೆ. ಆದರೂ ಮೇಲಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಯಾರಾದರೂ ತೀರಿಕೊಂಡಾಗ ಶವಸಂಸ್ಕಾರ ನಡೆದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸುವ ಪರಿಸ್ಥಿತಿ ಈಗಲೂ ಚಾಲ್ತಿಯಲ್ಲಿದೆ” ಎಂದರು.

ಇದನ್ನೂ ಓದಿದ್ದೀರಾ? ದಲಿತ ಶಿಕ್ಷಕಿ ಕುಳಿತ ಕುರ್ಚಿಗಳನ್ನು ಸ್ವಚ್ಛಗೊಳಿಸಿದ ಸವರ್ಣೀಯರು; ಸಮೀಕ್ಷೆಯಲ್ಲಿ ಅಸ್ಪೃಶ್ಯತೆಯ ಕಹಿ ಅನುಭವಗಳು

“ಗ್ರಾಮದ ಮೂಗಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಈ ಸ್ಮಶಾನ ಭೂಮಿಯು ಸುಮಾರು 200-300 ವರ್ಷಗಳ ಹಳೆಯದಾಗಿದೆ. ಈ ಜಾತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಸಾಧಕರ ಸಮಾಧಿಗಳಿವೆ. ಕಲ್ಲಿನಿಂದ ನಿರ್ಮಾಣಗೊಂಡಿದ್ದ ಈ ಸಮಾಧಿಗಳ ಸುತ್ತಲೂ ಗಿಡಗಳು ಬೆಳೆದು ಮುಚ್ಚಿಕೊಂಡಿವೆ. ಇಂತಹ ರುದ್ರಭೂಮಿ ನಮಗೆ ಪವಿತ್ರವಾಗಿದ್ದು, ಈ ಭೂಮಿಯನ್ನು ಬಿಟ್ಟುಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಬೇಕಿದ್ದರೆ ಸರ್ಕಾರವು ಈ ಜಾಗವನ್ನು ಸರಿಯಾಗಿ ಪರಿಶೀಲಿಸಿ ನಂತರ ನಮ್ಮ ಕಬ್ಜಾ ವಹಿಸಿಕೊಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಒಂದು ವೇಳೆ ಈ ಸ್ಮಶಾನ ಭೂಮಿಯನ್ನು ನಮ್ಮಿಂದ ಕಿತ್ತುಕೊಳ್ಳಲು ಪ್ರಯತ್ನಗಳು ನಡೆದರೆ, ಮುಂದಿನ ಯಾವುದೇ ಅಹಿತಕರ ಘಟನೆಗಳಿಗೆ ಸರ್ಕಾರವೇ ನೇರವಾಗಿ ಹೊರಬೇಕಾಗುತ್ತದೆ ಮತ್ತು ಉತ್ತರಿಸಬೇಕಾಗುತ್ತದೆ” ಎಂದು ಎಚ್ಚರಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು, ಶಾಸಕ ಮತ್ತು ಸಚಿವರು ಗಮನಹರಿಸಿ ಇನ್ನಾದರೂ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಮುನ್ನೆಜ್ಜೆ ಹಾಕುತ್ತಾರೆಯೇ? ಎಂಬುದನ್ನು ಕಾದುನೋಡಬೇಕಿದೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ವಾರ್ತಾ ಇಲಾಖೆ ಸಹಾಯಕನಿಂದ ಪತ್ರಕರ್ತನ ಮೇಲೆ ಹಲ್ಲೆ; ಸಾರ್ವಜನಿಕರ ಆಕ್ರೋಶ

ವಾರ್ತಾ ಇಲಾಖೆಯ ಸಹಾಯಕ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಓರ್ವ ಪತ್ರಕರ್ತನೊಬ್ಬನ...

ಧಾರವಾಡ | ಕಲಾಜಾಥಾ ಪ್ರಚಾರ ಕಾರ್ಯಕ್ರಮಕ್ಕೆ ತಾಳ ಹಾಕಿ, ಗ್ಯಾರಂಟಿ ಯೋಜನೆಯ ಹಾಡು ಹಾಡಿ, ಸಂತೋಷ ಲಾಡ್ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚಗ್ಯಾರಂಟಿಗಳ ಸಮರ್ಥ ಜಾರಿಯಿಂದ ಸರ್ಕಾರ ಹೊಸ...

ಧಾರವಾಡ | ಸರ್ವಜ್ಞನ ತ್ರಿಪದಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುವ ಸಾಹಿತ್ಯ: ಶಾಕೀರ್ ಸನದಿ

ಸರ್ವಜ್ಞರು ತ್ರಿಪದಿ ಎಂಬ ಕಾವ್ಯರೂಪದ ಮೂಲಕ ಜನಪ್ರಿಯ ಆಗಿದ್ದಾರೆ. ತ್ರಿಪದಿ ಚಿಕ್ಕದಾಗಿದ್ದರೂ...