ಧಾರವಾಡ | ಸಮಸ್ಯೆಗಳ ತಾಣವಾದ ಯರೇಬೂದಿಹಾಳ ಗ್ರಾಮ ಪಂಚಾಯಿತಿ: ಬದಲಾಗುವುದೇ ಬಡವರ ಬದುಕು?

Date:

ಗ್ರಾಮ ಪಂಚಾಯಿತಿ ಅಭಿವೃದ್ಧಿಯೆಂದರೆ ಗ್ರಾಮದ ಸಮಗ್ರ ಮತ್ತು ಸುಸ್ಥಿರ ಪ್ರಗತಿಗಾಗಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು. ಇದರಲ್ಲಿ ಶಿಕ್ಷಣ, ಆರೋಗ್ಯ, ನೀರು, ನೈರ್ಮಲ್ಯ, ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಸಮುದಾಯದ ಅಗತ್ಯಗಳನ್ನು ಪೂರೈಸಲು ಸರ್ಕಾರಿ ಯೋಜನೆಗಳನ್ನು ಬಳಸಲಾಗುತ್ತದೆ. ಗ್ರಾಮಸ್ಥರ ಭಾಗವಹಿಸುವಿಕೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ. ಆದರೆ; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವ್ಯಾಪ್ತಿಗೆ ಬರುವ ಯರೇಬೂದಿಹಾಳ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸ್ಥಳೀಯರು ಗ್ರಾಮ ಪಂಚಾಯಿತಿ ವಿರುದ್ಧ ಸಿಡಿದೆದ್ದಿದ್ದಾರೆ.

ಯರೇಬೂದಿಹಾಳ ಗ್ರಾಮ ಪಂಚಾಯಿತಿ ಸಕ್ರಿಯವಾಗಿ ಕೆಲಸ ಮಾಡದಿರುವ ಪರಿಣಾಮ ಗ್ರಾಮಸ್ಥರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಗ್ರಾಮಸ್ಥರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಗಟಾರುಗಳನ್ನೇ ಸ್ವಚ್ಛಗೊಳಿಸಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ, ಮನೆಯ ಮುಂದೆ ಮೂಗು ಮುಚ್ಚಿಕೊಂಡೇ ಕುಳಿತುಕೊಳ್ಳುವ ವಾತಾವರಣ ಎದುರಾಗಿದೆ. ಇದನ್ನೆಲ್ಲ ಸಹಿಸಿಕೊಂಡು ಅನಿವಾರ್ಯವಾಗಿ ಬದುಕು ಸಾಗಿಸುತ್ತಿರುವ ಜನರ ನೋವಿಗೆ ಸ್ಪಂದನೆ ನೀಡುವವರೇ ಇಲ್ಲ. ಗ್ರಾಮದಲ್ಲಿ ನಡೆಯುವ ಕೆಲವು ಕಾಮಗಾರಿಗಳೂ ಕಳಪೆಯಾಗಿವೆ ಎಂದು ಸ್ಥಳೀಯರು ಗ್ರಾ.ಪಂ. ವಿರುದ್ಧ ಕಿಡಿಕಾರುತ್ತಿದ್ದಾರೆ.

“ಅನೇಕ ವರ್ಷಗಳಿಂದ ಗಟಾರುಗಳನ್ನೇ(ಚರಂಡಿ) ಸ್ವಚ್ಛಗೊಳಿಸಿಲ್ಲ. ಅನೇಕ ಸಲ ಸ್ಥಳೀಯರು ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕಾರ್ಯನಿರ್ವಹಿಸುತ್ತೇವೆ, ಸರಿಪಡಿಸುತ್ತೇವೆ ಎಂದೆಲ್ಲ ಹಾರಿಕೆ ಉತ್ತರ ನೀಡಿ, ಮತ್ತದೇ ಸಮಸ್ಯೆಗಳು ಮುಂದುವರೆಯಲು ಕಾರಣವಾಗಿದ್ದಾರೆ. ಇನ್ನು ಅನಿವಾರ್ಯವಾಗಿ ನಮ್ಮ ನಮ್ಮ ಮನೆಗಳ ಮುಂದಿನ ಗಟಾರನ್ನು ನಾವೇ ಸ್ವಚ್ಛಗೊಳಿಸಿಕೊಳ್ಳುತ್ತೇವೆ” ಎನ್ನುತ್ತಾರೆ ಸ್ಥಳೀಯರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಗಟಾರು 1

“ಚರಂಡಿ ಬಳಿದರೂ ಅಪರೂಪಕ್ಕೊಮ್ಮೆ ಸ್ವಚ್ಛಗೊಳಿಸುತ್ತಾರೆ. ಊರಿನಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ. ಪಂಚಾಯಿತಿಯವರು ಮಾಡಿದ್ದೇ ಕಾರುಬಾರು ಎನ್ನುವಂತಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಹೀಗಿದ್ದಾಗ ನಮ್ಮ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ” ಎಂದು ಹಿರಿಯರೊಬ್ಬರು ಪ್ರಶ್ನಿಸುತ್ತಾರೆ.

ಈ ಗ್ರಾಮದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು ಮುಚ್ಚಿ ಹೋಗಿದ್ದು, ಸಂಪೂರ್ಣ ಹಾಳುಬಿದ್ದಿದೆ. ಇಲ್ಲಿನ ಜನ ಬರದ್ವಾಡ, ಸಂಶಿ ಅರೋಗ್ಯ ಕೇಂದ್ರಗಳಿಗೆ ಹೋಗಬೇಕು ಅಥವಾ ಕುಂದಗೋಳಕ್ಕೆ ತೆರಳುವ ವಾತಾವರಣವಿದೆ.

ಗಟಾರು 1 1

ಇನ್ನು ಗ್ರಾಮದ ಬಸ್ ನಿಲ್ದಾಣದ ಹತ್ತಿರವಿರುವ ದೊಡ್ಡ ಗಟಾರಿನ(ಚರಂಡಿ) ಸುತ್ತಮುತ್ತಲು ಮೂಗು ಮುಚ್ಚಿಕೊಂಡೇ ಓಡಾಡಬೇಕು. ಎಲ್ಲೆಂದರಲ್ಲಿ ಸಾರಾಯಿ ಪ್ಯಾಕೆಟ್‌ಗಳೇ ಕಾಣಸಿಗುತ್ತವೆ. ಗ್ರಾ.ಪಂ ಸಿಬ್ಬಂದಿ ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಗ್ರಾಮದ ವಾಲ್ಮೀಕಿ ಓಣಿ, ಹರಿಜನಕೇರಿ, ಹಳೆ ಬಸ್ ನಿಲ್ದಾಣ ಮತ್ತು ಮುಖ್ಯವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಇಡೀ ಗ್ರಾಮದ ಕಸವನ್ನೇ ಕಾಣಬಹುದು. ಶಾಲಾ ವಿದ್ಯಾರ್ಥಿಗಳು ಇಂತಹ ಕಲುಷಿತಗೊಂಡ ವಾತಾವರಣದಲ್ಲಿಯೇ ಬದುಕುವ ಅನಿವಾರ್ಯತೆ ಉಂಟಾಗಿದೆ. ತಾಲೂಕಿನ ಒಂದು ಪ್ರಮುಖ ಗ್ರಾಮವಾಗಿರುವ, ಉತ್ತಮ ಮೂಲಸೌಕರ್ಯ, ಸಾಕ್ಷರತೆಯೊಂದಿಗೆ ತನ್ನದೇ ಆದ ಆಡಳಿತ ವ್ಯವಸ್ಥೆಯನ್ನು ಹೊಂದಿದ ಯರೇಬೂದಿಹಾಳ ಗ್ರಾಮಕ್ಕೆ ಸಮಸ್ಯೆಗಳ ಸಂಕೋಲೆಯಿಂದ ಹೊರಬರುವುದಕ್ಕೆ ಸಾಧ್ಯವೇ ಆಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಮಂದಿ.

ಗಟಾರು 2

ಸಂಪೂರ್ಣ ಗ್ರಾಮದಲ್ಲಿನ ಚರಂಡಿಗಳು ತುಂಬಿ ನಿಂತಿವೆ. ಅಲ್ಲಲ್ಲಿ ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿನ ಕೆರೆಯ ದಂಡಿಯ ಸುತ್ತಲೂ ಕಸಕಡ್ಡಿ ಬೆಳದಿದೆ. ಭಾರತ ಸರ್ಕಾರದ ಯೋಜನೆಯಾದ ಜಲ ಜೀವನ್ ಮಿಷನ್’ನ ನಲ್ಲಿಯಲ್ಲಿ ಒಂದು ಹನಿ ನೀರು ಬರುವುದಿಲ್ಲ. ಅನಿವಾರ್ಯವಾಗಿ ಕೆರೆಯ ನೀರು ಕಲುಷಿತಗೊಂಡರೂ ಅದನ್ನೇ ತಂದು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣದ ಹತ್ತಿರವಿರುವ ಒಂದೇ ನೀರಿನ ಅರವಟ್ಟಿಗೆ ಸದ್ಯಕ್ಕೆ ಆಸರೆಯಾಗಿದೆ. ಸರ್ಕಾರದಿಂದ ಅನುದಾನ ಬಾರದ ಕಾರಣ 2023ರಲ್ಲಿ ಈ ಗ್ರಾಮದ ಕೆರೆಯಲ್ಲಿನ ಹೂಳನ್ನು ತೆಗೆಸಲು ಯಾವುದೇ ಅಧಿಕಾರಿಗಳೂ ಕೂಡ ಮುಂದಾಗಿರಲಿಲ್ಲ. ಆದರೆ ಕುಡಿಯುವ ನೀರಿನ ಕೆರೆಯಲ್ಲಿ ಸ್ವತಃ ಗ್ರಾಮಸ್ಥರೇ ಹೂಳೆತ್ತಿ ಕೆರೆ, ದಡ ಅಭಿವೃದ್ಧಿಪಡಿಸಿದ್ದರು. ಈ ಮೂಲಕ ಕೆರೆಗೆ ನೀರು ಆಗಮಿಸುವ ಹಳ್ಳದ ಅಭಿವೃದ್ಧಿಗೆ ಮುಂದಾಗಿದ್ದರು. ಗ್ರೇಡ್-1 ಗ್ರಾಮ ಪಂಚಾಯಿತಿ ಹಣೆಪಟ್ಟಿ ಹೊತ್ತ ಸರಿಸುಮಾರು 7,000ಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಯರೇಬೂದಿಹಾಳ ಗ್ರಾಮದ ಜನರಿಗೆ ಈ ಕೆರೆ ನೀರು ಮೂಲಾಧಾರವಾಗಿದೆ.

ಗಟಾರು 4

ಈ ಕುರಿತು ಈ ದಿನ.ಕಾಮ್ ಜತೆಗೆ ಗ್ರಾಮದ ಯುವಕರು, ಹಿರಿಯರು ಹಾಗೂ ಹಲವರು ಮಾತನಾಡಿ, “ನಮ್ಮೂರಿನ ಜನರ ಬದುಕಿನ ಸ್ಥಿತಿ ಯಾವಾಗ ಬದಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕನಸಿನಲ್ಲಿಯೂ ಕಾಣದ ಸ್ಥಿತಿ ಉಂಟಾಗಿದೆ. ಚರಂಡಿ ನಿರ್ಮಾಣ ಕಾರ್ಯದಲ್ಲಿಯೂ ಕಳಪೆ ಕಾಮಗಾರಿಯಾಗಿದೆ. ಗಟಾರು ತುಂಬಿ ಹರಿಯುತ್ತದೆ. ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾವೇ ಸ್ವಚ್ಛಗೊಳಿಸುತ್ತೇವೆ. ಒಂದಿಷ್ಟು ಬೇಸರ ಕಳೆದುಕೊಳ್ಳಲು ಮನೆಯ ಮುಂದೆ ಕುಳಿತುಕೊಂಡರೆ ಸಾಕು ಸೊಳ್ಳೆಗಳ ಕಾಟ ಮತ್ತು ಗಬ್ಬುನಾತ ಸೇವಿಸಿ ಮಕ್ಕಳಲ್ಲಿ ಅನಾರೋಗ್ಯಗಳು ಉಂಟಾಗುತ್ತಿವೆ. ಪಂಚಾಯಿತಿ ಅಂದರೆ ಒಂದು ರೀತಿಯಲ್ಲಿ ರಾಷ್ಟ್ರಪತಿ ಆಡಳಿತ ಎಂಬಂತೇ ಆಗಿದೆ. ಮೆಂಬರ್‌ಗಳ ಮನೆ ಹತ್ತಿರ ಮಾತ್ರ ಸ್ವಚ್ಛವಾಗಿರುತ್ತದೆ. ಜನಸಾಮಾನ್ಯರ ಬದುಕು ಮಾತ್ರ ಇನ್ನಷ್ಟು ಹದಿಗೆಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಟಾರು 5

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, “ಗ್ರಾಮದಲ್ಲಿ ಯಾವುದೇ ಗಂಭೀರವಾದ ಸಮಸ್ಯೆಗಳಿಲ್ಲ. ಎಲ್ಲವೂ ಸರಾಗವಾಗಿ ಸಾಗುತ್ತಿದೆ” ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷರು ಮಾತನಾಡಿ, “ಜನಪ್ರತಿನಿಧಿಗಳು ಏನೇ ಕಾರ್ಯನಿರ್ವಹಿಸಿದರೂ ಒಂದಲ್ಲ ಒಂದು ಮಾತು ಬರುತ್ತದೆ. ಒಳ್ಳೆಯದೇ ಮಾಡಲಿ ಅಥವಾ ಮಾಡದೇ ಇರಲಿ, ಎಲ್ಲದಕ್ಕೂ ಮಾತನಾಡುವ ಜನರಿದ್ದಾರೆ” ಎಂದು ಉತ್ತರಿಸಿದರು.

ಇದನ್ನೂ ಓದಿದ್ದೀರಾ? ಉಡುಪಿ | ಕಾರ್ಕಳ ಗ್ರಾಮಾಂತರ ವ್ಯಾಪ್ತಿಯಲ್ಲಿ ಮನೆ ಕಳ್ಳತನ: ಆರೋಪಿಯ ಬಂಧನ

ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಈ ಗ್ರಾಮದ ಜನರ ಬದುಕು ಮಾತ್ರ ಬದಲಾಗಿಲ್ಲ. ಈ ಹಿಂದಿನ ಕಾಂಗ್ರೆಸ್‌ನ ಶಾಸಕಿ ಕುಸುಮಾವತಿ ಶಿವಳ್ಳಿ ಅಥವಾ ಹಾಲಿ ಶಾಸಕ ಎಂ ಆರ್ ಪಾಟೀಲ್ ಅವರ ಅವಧಿಯಲ್ಲೂ ಈ ಗ್ರಾಮದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿ, ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಸ್ಥಳೀಯರು ಬೇಸತ್ತಿದ್ದಾರೆ. ನಮ್ಮ ಬದುಕು ಹಸನಾಗುವುದು ಎಂಬ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವರೇ? ಜನಪ್ರತಿನಿಧಿಗಳು ಕಣ್ತೆರೆದು ನೋಡುವರೇ? ಬಡವರ ಬದುಕು ಬದಲಾಗುವುದೇ? ಎಂಬುದನ್ನು ಕಾದು ನೋಡಬೇಕಿದೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ವಾರ್ತಾ ಇಲಾಖೆ ಸಹಾಯಕನಿಂದ ಪತ್ರಕರ್ತನ ಮೇಲೆ ಹಲ್ಲೆ; ಸಾರ್ವಜನಿಕರ ಆಕ್ರೋಶ

ವಾರ್ತಾ ಇಲಾಖೆಯ ಸಹಾಯಕ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಓರ್ವ ಪತ್ರಕರ್ತನೊಬ್ಬನ...

ಧಾರವಾಡ | ಕಲಾಜಾಥಾ ಪ್ರಚಾರ ಕಾರ್ಯಕ್ರಮಕ್ಕೆ ತಾಳ ಹಾಕಿ, ಗ್ಯಾರಂಟಿ ಯೋಜನೆಯ ಹಾಡು ಹಾಡಿ, ಸಂತೋಷ ಲಾಡ್ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚಗ್ಯಾರಂಟಿಗಳ ಸಮರ್ಥ ಜಾರಿಯಿಂದ ಸರ್ಕಾರ ಹೊಸ...

ಧಾರವಾಡ | ಸರ್ವಜ್ಞನ ತ್ರಿಪದಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುವ ಸಾಹಿತ್ಯ: ಶಾಕೀರ್ ಸನದಿ

ಸರ್ವಜ್ಞರು ತ್ರಿಪದಿ ಎಂಬ ಕಾವ್ಯರೂಪದ ಮೂಲಕ ಜನಪ್ರಿಯ ಆಗಿದ್ದಾರೆ. ತ್ರಿಪದಿ ಚಿಕ್ಕದಾಗಿದ್ದರೂ...