ಪ್ಯಾರಾಮೆಡಿಕಲ್ ಪೂರೈಸಿ, ಕೆಲಸ ಹುಡುಕುತ್ತಿದ್ದ ಯುವತಿಯು ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡದ ಹೊರಹೊಲಯದಲ್ಲಿ ಮಂಗಳವಾರ ನಡೆದಿದ್ದು, ನಗರವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ.
ನಗರದ ಗಾಂಧಿ ಚೌಕ ನಿವಾಸಿ ಝಕಿಯಾ ಮುಲ್ಲಾ (19) ಮೃತ ಯುವತಿ ಎನ್ನಲಾಗಿದೆ.
ಮನೆ ಬಿಟ್ಟು ತೆರಳಿದ್ದ ಝಕಿಯಾ ಮನಸೂರು ರಸ್ತೆಯ ವಿನಯ್ ಡೈರಿ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಬೇರೆ ಕಡೆ ಹತ್ಯೆ ಮಾಡಿ ಈ ಸ್ಥಳದಲ್ಲಿ ಬಿಸಾಕಿರುವ ಶಂಕೆ ಉಂಟಾಗಿದೆ.
ಸ್ಧಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಗದಗ | 6ನೇ ದಿನದ ಲಕ್ಕುಂಡಿ ಉತ್ಖನನ; ಮೂಳೆ, ಮಣ್ಣಿನ ಬಿಲ್ಲೆಗಳು ಪತ್ತೆ





