ಅಳಿವಿನಂಚಿನಲ್ಲಿ ಗರಗ ಖಾದಿ ಕೇಂದ್ರ; ಸಂಪೂರ್ಣ ಮುಚ್ಚಿಹೋದ ಉಪ್ಪಿನಬೆಟಗೇರಿ ಖಾದಿ ಕೇಂದ್ರ

Date:

ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವನ್ನು ತಯಾರಿಸುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಮುಚ್ಚುತ್ತ ಹೋದರೆ; ಕೊನೆಗೆ ಕೈಗಾರಿಕೋದ್ಯಮವೇ ಅನಿವಾರ್ಯವಾಗುತ್ತದೆ. ಬಡವರು ಮತ್ತೆ ಊರು ಬಿಟ್ಟು ಅನ್ಯ ಪ್ರದೇಶಗಳಿಗೆ ವಲಸೆ ಹೋಗಿ, ಉದ್ಯಮಿಗಳ ಕೈಗಳಲ್ಲಿ ಆಳುಗಳಾಗಿ ದುಡಿಯುವ ಪರಿಸ್ಥಿತಿ ಬರಬಹುದು. ಅದನ್ನೆಲ್ಲ ತಪ್ಪಿಸಿಸಲು ಸರ್ಕಾರಗಳು ಮುಂದಾಗಿ, ಖಾದಿ ಕೇಂದ್ರಗಳಲ್ಲಿ ತಯಾರಿಸಿದ ರಾಷ್ಟ್ರಧ್ವಜಗಳನ್ನು ಕೊಂಡು ಪ್ರೋತ್ಸಾಯಿಸಬೇಕಿದೆ. 

ದೇಶಪ್ರೇಮವನ್ನು ಇಮ್ಮಡಿಯಾಗಿಸುವ ರಾಷ್ಟ್ರಧ್ವಜ ತಯಾರಿಕೆಯ ಖಾದಿ ಗ್ರಾಮೋದ್ಯೋಗ ಕೇಂದ್ರ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯ. ಈ ಗ್ರಾಮ ಧಾರವಾಡದಿಂದ 17 ಕಿಮೀ ದೂರದಲ್ಲಿದೆ. 2023ರ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೂ ಭಾಜನವಾದ ಗರಗ ಗ್ರಾಮದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಆರಂಭದಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ಬೇಕಾಗುವ ಬಟ್ಟೆಯನ್ನು ಮಾತ್ರ ತಯಾರಿಸುತ್ತಿತ್ತು. ರಾಷ್ಟ್ರಧ್ವಜ ತಯಾರಿಕೆಗೂ ಅನುಮತಿ ಸಿಕ್ಕಿದ ನಂತರ ಈ ಖಾದಿ ಕೇಂದ್ರದ‌ ಹೆಸರು ರಾಷ್ಟ್ರವ್ಯಾಪಿ ಹರಡಿತು.

ಗರಗ ಖಾದಿ ಕೇಂದ್ರ ಭಾರತದ ಧ್ವಜವನ್ನು ತಯಾರಿಸಲು ಮತ್ತು ಪೂರೈಸಲು ಅಧಿಕಾರ ಹೊಂದಿರುವ ಏಕೈಕ ಒಕ್ಕೂಟವೆಂದು ಹೇಳಬಹುದು. ಖಾದಿ ಮತ್ತು ಇತರ ಗ್ರಾಮೋದ್ಯೋಗಗಳ ಬೆಳವಣಿಗೆಯ ಅಗತ್ಯವನ್ನು ಪೂರೈಸುವ ಒಕ್ಕೂಟವನ್ನು ರಚಿಸುವ ಗುರಿಯೊಂದಿಗೆ ಈ ಖಾದಿ ಕೇಂದ್ರವು 1957, ನವೆಂಬರ್ 1ರಂದು ಸ್ಥಾಪನೆಗೊಂಡಿತು. ಅಂದಿನಿಂದ ರಾಷ್ಟ್ರಧ್ವಜದ ಬಟ್ಟೆ ನೇಯ್ಗೆಯ ಕೆಲಸವನ್ನು ಮಾಡುತ್ತ ಬಂದಿದೆ. ಖಾದಿಯು ಸ್ವಾವಲಂಬನೆಯ ಸಂಕೇತವಾಗಿದ್ದು, ಭಾರತ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮಾ ಗಾಂಧೀಜಿಯವರು ಹಾಗೂ ಇತರ ನಾಯಕರು ಖದಿ ಬಟ್ಟೆಗಳನ್ನು ಧರಿಸಿದ್ದರು.

ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದೇ ಈ ಒಕ್ಕೂಟದ ಇನ್ನೊಂದು ಗುರಿಯಾಗಿದ್ದು, 1982ರಲ್ಲಿ ಖಾದಿ ಉತ್ಪಾದನೆ ಪ್ರಾರಂಭವಾಯಿತು. ಗರಗ ಖಾದಿ ಕೇಂದ್ರವು ರಾಜ್ಯಾದ್ಯಂತ ಸುಮಾರು 58 ಸಂಸ್ಥೆಗಳನ್ನು ಒಕ್ಕೂಟದ ಅಡಿಯಲ್ಲಿ ತೆರೆದಿದ್ದು, ಕೇಂದ್ರ ಕಚೇರಿ ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಉತ್ಪಾದನೆಯಲ್ಲಿ ಮುಂದಿರುವ ಈ ಒಕ್ಕೂಟವು ಮಾರಾಟದಲ್ಲಿ ಹಿಂದೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರು ತಂದ ‘ಹರ್ ಘರ್ ತಿರಂಗಾ’ದಿಂದ ಖಾದಿ ಬಟ್ಟೆಯ ಧ್ವಜಕ್ಕೆ ಮನ್ನಣೆ ಕಡಿಮೆಯಾಗುತ್ತ ಬಂದಿದ್ದು, ಖಾದಿ ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತಿದೆ. ಜನರು ಕೈಗಾರಿಕೆಗಳಲ್ಲಿ ತಯಾರಿಸಿದ ಧ್ವಜಗಳನ್ನು ಬಳಸಲು ಶುರುಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಹರ್‌ ಘರ್‌ ತಿರಂಗಾ

ಇದೀಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಗರಗ ಖಾದಿ ಕೇಂದ್ರಕ್ಕೆ ಸರ್ಕಾರದ ಪ್ರೋತ್ಸಾಹ ಬೇಕಿದೆ. ಈ ಖಾದಿ ಕೇಂದ್ರದಲ್ಲಿ 50 ಚರಕಗಳು, 100 ಕೈ ಮಗ್ಗಗಳು ಯಾವುದಕ್ಕೂ ಉಪಯೋಗಕ್ಕೆ ಬಾರದೇ ಹಾಳಾಗುತ್ತಿವೆ. ಇದರ ಪರಿಣಾಮ ಗ್ರಾಮದ ನಿರುದ್ಯೋಗಿಗಳು ಅನಿವಾರ್ಯವಾಗಿ ಉದ್ಯೋಗಗಳನ್ನು ಅರಸಿಕೊಂಡು, ಬೇರೆ ಕಡೆಗೆ ವಲಸೆ ಹೋಗಲು ಶುರುಮಾಡಿದರು. ಇದರ ಕಟ್ಟಡವು ಬಹುತೇಕ ದುರಸ್ತಿಗೆ ಬಂದಿದ್ದು, ಅಲ್ಲಲ್ಲಿ ಗೋಡೆಗಳು ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೇ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೂಲಿಕಾರ್ಮಿಕರು ನಾವು ರಾಷ್ಟ್ರಧ್ವಜ ತಯಾರಿಸುತ್ತೇವೆ ಎಂಬ ಹೆಮ್ಮೆಯಿಂದ ಕಾರ್ಯನಿರ್ವಹಿಸುತ್ತಾರೆ. ಕಡಿಮೆ ಸ್ಯಾಲರಿ ಇದ್ದರೂ ಸೇವಾ ಮನೋಭಾವದೊಂದಿಗೆ ಮುಂದುವರೆದಿದ್ದಾರೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕೇಂದ್ರಕ್ಕೆ ಬಂದು ಭೇಟಿ ನೀಡಿ ಹೋಗುತ್ತಾರೆ. ಆದರೆ; ಇಲ್ಲಿಯ ಕಾರ್ಮಿಕರ ಬದುಕು ಬದಲಾಗಿಲ್ಲ, ಖಾದಿ ಕೇಂದ್ರದ ಏಳ್ಗೆಯೂ ಆಗುತ್ತಿಲ್ಲ.‌

ಖಾದಿ ನೇಯ್ಗೆ 1

“ಇನ್ನು ಇದೇ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಖಾದಿ ಉಟ್ಟುವಳಿ ಕೇಂದ್ರವು ಕಳೆದ 10 ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಿದೆ. ಈ ಕೇಂದ್ರವು ತೆರೆದಿದ್ದಾಗ ಸುಮಾರು 500 ಜನರು ದುಡಿಯುತ್ತಿದ್ದರು ಎನ್ನಲಾಗಿದೆ. ಅಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಹಲವರಿಗೆ ಇಂದಿಗೂ ಪಿಎಫ್ ಹಣ ನೀಡಿಲ್ಲ. ಇಲ್ಲಿ ಕೆಲಸ ಮಾಡಿದ್ದ, ಅದೆಷ್ಟೋ ಕೂಲಿಕಾರರಿಗೆ ತಾವು ದುಡಿದ ಹಣವೂ ಕೈಗೆ ತಲುಪಿಲ್ಲ. ಈ ಬಗ್ಗೆ ಸರ್ಕಾರವೂ ಗಂಭೀರವಾಗಿ ಚಿಂತಿಸಬೇಕಿದೆ. ಖಾದಿ ಕೇಂದ್ರವನ್ನು ಪುನಃ ಪ್ರಾರಂಭಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ” ಎಂದು ಗ್ರಾಮದ ಹಿರಿಯರೊಬ್ಬರು ಈ ದಿನ.ಕಾಮ್ ಜತೆಗೆ ಹೇಳಿಕೊಂಡರು.

ಖಾದಿ ನೇಯ್ಗೆ 2

ಜವಳಿ ರಸಾಯನಶಾಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಗರಗ ಖಾದಿ ಒಕ್ಕೂಟದಿಂದ ತರಬೇತಿ ಕಾಲೇಜೊಂದನ್ನೂ ಕೂಡ ನಡೆಸಲಾಗುತ್ತಿದೆ. ಈ ಕೇಂದ್ರದ ಮುಖ್ಯ ಉತ್ಪನ್ನವೆಂದರೆ ಭಾರತೀಯ ಧ್ವಜ. ಅದರ ಖಾದಿ ಬಟ್ಟೆಗಳು, ಖಾದಿ ಚೀಲಗಳು, ಖಾದಿ ಕ್ಯಾಪ್‌ಗಳು, ಖಾದಿ ಬೆಡ್‌ ಶೀಟ್‌ಗಳನ್ನು ತಯಾರಿಸುತ್ತದೆ. 2006ರಲ್ಲಿ ಐಎಸ್‌ಐ ಪ್ರಮಾಣೀಕರಣದೊಂದಿಗೆ ಮಾನ್ಯತೆ ಪಡೆದಾಗ ರಾಷ್ಟ್ರಧ್ವಜದ ಉತ್ಪಾದನಾ ಕೇಂದ್ರವಾಗಿ ವಿಶಿಷ್ಟವಾಗಿ ರೂಪುಗೊಂಡಿತು. ರಾಷ್ಟ್ರಾದ್ಯಂತ ರಾಷ್ಟ್ರಧ್ವಜ ಮಾರಾಟ ಮಾಡುವ ಅಧಿಕಾರವನ್ನು ಪಡೆದಿದೆ.

ಧ್ವಜ ತಯಾರಿಕೆ

ಗರಗ ಕ್ಷೇತ್ರೀಯ ಸೇವಾ ಸಂಘ ಆರು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಧಾರವಾಡ ತಾಲೂಕು ಸೇವಾ ಸಂಘ, ಗರಗ ಕ್ಷೇತ್ರೀಯ ಸೇವಾ ಸಂಘ, ಹೆಬ್ಬಳ್ಳಿ ಕ್ಷೇತ್ರೀಯ ಸೇವಾ ಸಂಘ ಮತ್ತು ಅಮ್ಮಿನಬಾವಿ ಕ್ಷೇತ್ರೀಯ ಸೇವಾ ಸಂಘವೆಂದು ನಾಲ್ಕು ಸಂಸ್ಥೆಗಳಾಗಿ ವಿಕೇಂದ್ರೀಕರಿಸಿತು. ಜಿಲ್ಲೆಯ ಗರಗ, ಹೆಬ್ಬಳ್ಳಿ, ಬೆಂಗೇರಿ ಗ್ರಾಮಗಳಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ತಯಾರಿಸುವ ಭಾರತದ ಪ್ರಪ್ರಥಮ ಖಾದಿ ಗ್ರಾಮೋದ್ಯೋಗ ಘಟಕ ಇರುವ ಗ್ರಾಮ ಗರಗ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.

ಖಾದಿ ನೇಯ್ಗೆ

ಸಂವಿಧಾನದ ಮಾರ್ಗಸೂಚಿ ಪ್ರಕಾರ ರಾಷ್ಟ್ರಧ್ವಜದ ಬಟ್ಟೆ ಕೈಮಗ್ಗದಿಂದ ನೇಯ್ದ ಬಟ್ಟೆಯೇ ಆಗಬೇಕು. ಕೈಗಳಿಂದ ಅಂದರೆ ಅಂಬರ ಚರಕದಲ್ಲಿ ತೆಗೆದ ನೂಲಿನಿಂದ ಬಟ್ಟೆ ತಯಾರಿಸುವುದು ಸವಾಲಿನ ಕೆಲಸ. ಧ್ವಜದ ಬಟ್ಟೆ ಅಂದರೆ ಬರಿ ಕಣ್ಣಿಗೆ ಕಾಣುವ ಸಾಧಾರಣ ಬಟ್ಟೆಯಾಗದೆ ಭಾರತೀಯ ಮಾನಕ ಬ್ಯೂರೋದ ಮಾನದಂಡ ಪ್ರಕಾರ ತಯಾರಿಸಬೇಕಾಗುತ್ತದೆ. ಐಎಸ್ಐ ಸರ್ಟಿಫಿಕೆಟ್‌ ಪಡೆದ ರಾಷ್ಟ್ರಧ್ವಜದ ಖಾದಿ ಬಟ್ಟೆಯ ಒಂದು ಡೆಸಿ ಮೀಟರ್‌ನಲ್ಲಿ 175 ಹಾಸು ಎಳೆ ಹಾಗೂ 165 ಹೊಕ್ಕು ಎಳೆ ಇರಬೇಕು. 50:200 ಮಿ.ಮೀ ಗಾತ್ರದ ಈ ಬಟ್ಟೆ ಹಾಸುಬದಿಯಲ್ಲಿ 40 ಕಿಲೋ ತೂಕವನ್ನು, ಹೊಕ್ಕು ಬದಿಯಲ್ಲಿ 30ಕಿ.ಗ್ರಾಂ ತೂಕವನ್ನು ತಾಳಿಕೊಳ್ಳಬೇಕು. ಒಂದು ಚದರ ಮೀಟರ್‌ ಈ ಬಟ್ಟೆ 205 ಗ್ರಾಂ ತೂಕವಿರಬೇಕು ಎಂದು ನಿಯಮಾವಳಿ ರೂಪಿಸಲಾಗಿದೆ.

ಇದನ್ನೂ ಓದಿದ್ದೀರಾ? ಬೀದರ್‌ | ಶಿಕ್ಷಣ ಕ್ಷೇತ್ರದಿಂದ ಪುಸ್ತಕ ಸಂಸ್ಕೃತಿ ಬೆಳವಣಿಗೆ : ಬರಗೂರು ರಾಮಚಂದ್ರಪ್ಪ

ಗರಗ ಕ್ಷೇತ್ರೀಯ ಸೇವಾ ಸಂಘವು ಆರಂಭದಲ್ಲಿ ಗರಗದಲ್ಲಿ ವಿಶೇಷವಾಗಿ 45, 36 ಖಾದಿ ಮತ್ತು ಕೋಟಿಂಗ್‌ ಹನಿಕೂಂಬ್‌ ಟವೆಲ್‌ಗಳನ್ನು ಮಾಡುತ್ತ ತನ್ನ ವ್ಯಾಪ್ತಿಯನ್ನು ತಡಕೋಡ, ಖಾನಾಪುರ, ತೇಗೂರ, ಕೋಟೂರ, ಗುಳದಕೊಪ್ಪ, ಮಾದನಬಾವಿ, ಮುಗಳಿ ಮತ್ತು ಮಮ್ಮಿಗಟ್ಟಿ ಊರುಗಳಿಗೆ ವಿಸ್ತರಿಸಿದೆ. ಬಳಿಕ ಖಾದಿ ಆಯೋಗದ ಸಲಹೆಯಂತೆ ಗರಗ ಕ್ಷೇತ್ರೀಯ ಸಂಘ ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆ ತಯಾರಿಸುವ ಕಾರ್ಯ ನಡೆಸುತ್ತ ಬಂದಿದೆ.

ಖಾದಿ ಕೇಂದ್ರ 1

ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವನ್ನು ತಯಾರಿಸುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಮುಚ್ಚುತ್ತ ಹೋದರೆ; ಕೊನೆಗೆ ಕೈಗಾರಿಕೋದ್ಯಮವೇ ಅನಿವಾರ್ಯವಾಗುತ್ತದೆ. ಬಡವರು ಮತ್ತೆ ಊರು ಬಿಟ್ಟು ಅನ್ಯ ಪ್ರದೇಶಗಳಿಗೆ ವಲಸೆ ಹೋಗಿ, ಉದ್ಯಮಿಗಳ ಕೈಗಳಲ್ಲಿ ಆಳುಗಳಾಗಿ ದುಡಿಯುವ ಪರಿಸ್ಥಿತಿ ಬರಬಹುದು. ಅದನ್ನೆಲ್ಲ ತಪ್ಪಿಸಿಸಲು ಸರ್ಕಾರಗಳು ಮುಂದಾಗಿ, ಖಾದಿ ಕೇಂದ್ರಗಳಲ್ಲಿ ತಯಾರಿಸಿದ ರಾಷ್ಟ್ರಧ್ವಜಗಳನ್ನು ಕೊಂಡು ಪ್ರೋತ್ಸಾಯಿಸಬೇಕಿದೆ. ಅಳಿವಿನಂಚಿನಲ್ಲಿ ಇರುವ ಖಾದಿ ಗ್ರಾಮೋದ್ಯೋಗಗಳನ್ನು ಉಳಿಸಬೇಕಿದೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...