ಮೈಸೂರು ಜಿಲ್ಲೆ ಕೃಷ್ಣರಾಜನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69 ನೇ ವರ್ಷದ ಪರಿನಿಬ್ಬಾಣದ ಅಂಗವಾಗಿ ದೀಪ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾಮಾಜಿಕ ಸಮಾನತೆಗಾಗಿ, ಅಸ್ಪೃಶ್ಯತೆ ತೊಡೆದುಹಾಕಲು, ಶೋಷಿತರ, ದೀನ ದಲಿತರ ಧ್ವನಿಯಾಗಿ ಭಾರತದ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಭೀಮಾರಾವ್ ರಾಮ್ ಜೀ ಅಂಬೇಡ್ಕರ್ ಅವರ ಪರಿನಿಬ್ಬಾಣದ ಅಂಗವಾಗಿ ಅವಳಿ ತಾಲ್ಲೂಕಿನ ದಲಿತ ಸಂಘಟನೆಗಳು ಜ್ಞಾನ ಸೂರ್ಯನಿಗೆ ದೀಪದ ನಮನ ಕಾರ್ಯಕ್ರಮ ಹಮ್ಮಿಕೊಂಡಿವೆ.
ಡಿಸೆಂಬರ್. 6ರಂದು (ಶನಿವಾರ) ಸಂಜೆ 06-00 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಯಿಂದ ವಿವಿ ರಸ್ತೆ ಮೂಲಕ ಪುರಸಭೆ ವೃತ್ತ, ಸಿಎಂ ರಸ್ತೆ, ಡಬಲ್ ಟ್ಯಾಂಕ್, ಬಜಾರ್ ರಸ್ತೆಯಾಗಿ ಮೇಣದ ಬತ್ತಿ ಹಿಡಿದು ಮೆರವಣಿಗೆ ಸಾಗಲಿದೆ.
ಕೃಷ್ಣರಾಜನಗರದ ವಿಶ್ವಜ್ಞಾನಿ ಕಲಾತಂಡದಿಂದ ನುಡಿನಮನ ಕಾರ್ಯಕ್ರಮ ಹಾಗೂ ಹನಸೋಗೆ ಕಲಾ ತಂಡದಿಂದ ನೃತ್ಯರೂಪಕ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಡಿ.23ರಂದು ರೈತ ದಿನಾಚರಣೆ-ಬೃಹತ್ ಜಿಲ್ಲಾ ರೈತ ಸಮಾವೇಶ
ದಲಿತ ಸಂಘಟನೆಗಳ ಒಕ್ಕೂಟ ತಾಲ್ಲೂಕಿನಾದ್ಯಂತ ಸರ್ವರೂ ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.





