ಸಾಯುವ ಮುನ್ನ ವಿಡಯೋ ಮಾಡಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಷ್ಪಾ (28) ಮೃತ ಮಹಿಳೆ. ಸಾಯುವ ಕೆಲ ಹೊತ್ತಿನ ಮೊದಲು ತಾನೇ ವಿಡಿಯೋ ಮಾಡಿ, ತನ್ನ ಗಂಡ, ಅತ್ತೆ, ಮಾವ ಹಾಗೂ ಮೈದುನನ ಮೇಲೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ.
ಪುಷ್ಪಾ, ಒಂದು ವರ್ಷ ಹಿಂದೆ ತಪಸೀಹಳ್ಳಿ ಗ್ರಾಮದ ವೇಣು ಎಂಬಾತನ ಜೊತೆ ವಿವಾಹವಾಗಿದ್ದರು. ಮದುವೆಯಾದ ಬಳಿಕವೂ ಗಂಡ ಸಂಸಾರ ನಡೆಸದೇ ದೂರವಾಗಿದ್ದಾನೆ ಎಂದು ಆರೋಪಿಸಲಾಗಿದೆ. ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಮನೆಯವರು ನಿರಂತರ ಒತ್ತಾಯ ಮಾಡುತ್ತಿದ್ದರು. ಅಲ್ಲದೆ, ʼಮಗು ಬೇಕಾದರೆ ಮೈದುನನ ಜೊತೆ ಮಲಗುʼ ಎಂದು ಅತ್ತೆ–ಮಾವ ಕಿರುಕುಳ ನೀಡುತ್ತಿದ್ದರೆಂದು ಮೃತೆ ಪುಷ್ಪಾ ವಿಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.


ಮಾನಸಿಕ ಹಿಂಸೆ ತಾಳಲಾರದೆ, ಪುಷ್ಪಾ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂನಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ ತಿಳಿದುಬಂದಿದೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡ ವೇಣು ಸೇರಿದಂತೆ ಅತ್ತೆ, ಮಾವ ಹಾಗೂ ಮೈದುನನ ವಿರುದ್ಧ ಪ್ರಕರಣ ದಾಖಲಾಗುದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ʼಸುರಂಗ ಮಾರ್ಗʼ: ಡಿಸಿಎಂ ಕನಸಿಗೆ ತಜ್ಞರು ಏನಂತಾರೆ?





