ಸವಿತಾ ನಾಗಭೂಷಣರ ‘ದಿನದ ಪ್ರಾರ್ಥನೆ’ಗೆ ಡಾ. ವಿಜಯಾ ದಬ್ಬೆ ಪ್ರಶಸ್ತಿ ಗೌರವ

Date:

ಹಿರಿಯ‌ ಸಾಹಿತಿ ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಕವನ ಸಂಕಲನವು 2025ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸವಿತಾ ಅವರೇ‌ ಮುನ್ನಡೆಸುವ ಶಿವಮೊಗ್ಗದ‌ ‘ನುಡಿ’ ಪ್ರಕಾಶನವು 2024ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. 25,000 ರೂ. ನಗದು ಹಾಗೂ ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರವು 2022ರಲ್ಲಿ ಸ್ಥಾಪಿಸಿರುವ ಡಾ. ವಿಜಯಾ ದಬ್ಬೆ ಪ್ರಶಸ್ತಿಗೆ 2020-24ರ ಅವಧಿಯಲ್ಲಿ ಲೇಖಕಿಯರು ಪ್ರಕಟಿಸಿದ ಕವನ‌ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಲೇಖಕಿಯರು/ಪ್ರಕಾಶಕರಿಂದ ಒಟ್ಟು 110 ಸಂಕಲನಗಳು ಸ್ವೀಕೃತವಾಗಿದ್ದವು. ತೀರ್ಪುಗಾರರಾಗಿ ಹಿರಿಯ ಕವಿಗಳಾದ ಪ್ರೊ. ಚ ಸರ್ಮಮಂಗಳ, ಜಿ ಪಿ ಬಸವರಾಜು, ಡಾ. ಎಂ ಎಸ್ ವೇದಾ ಅವರಿದ್ದ ಸಮಿತಿಯು, ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸವಿತಾ ಅವರ ಅಖಂಡ ಮಾನವೀಯ ಪರ ನಿಲುವು ಅವರ ಎಲ್ಲಾ ಬರಹಗಳಂತೆ ಈ ಸಂಕಲನದಲ್ಲಿಯೂ ಮುಂದುವರಿದಿದೆ ಎನ್ನುವುದು ತೀರ್ಪುಗಾರರ‌ ಒಮ್ಮತದ ಅಭಿಪ್ರಾಯವಾಗಿತ್ತು. ಜೂ.1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ತುಮಕೂರು | ಕಾವ್ಯ, ಪುಸ್ತಕಗಳು ಜಾತಿ ಮತವಿಲ್ಲದೆ ಜಾತ್ಯತೀತವಾಗಬೇಕು : ರಘುನಂದನ

ಸವಿತಾ ನಾಗಭೂಷಣ ಅವರ ಕುರಿತು:

ಸವಿತಾ‌ ಹುಟ್ಟಿದ್ದು(1961) ಚಿಕ್ಕಮಗಳೂರಿನಲ್ಲಿ. ಶಿವಮೊಗ್ಗದಲ್ಲಿ ಸಂಪೂರ್ಣ ವಿದ್ಯಾಭ್ಯಾಸ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. ಕನ್ನಡದಲ್ಲಿ ಕವಿ, ಕತೆಗಾರ್ತಿ, ಕಾದಂಬರಿಗಾರ್ತಿ. ಪತಿ ಡಿ ಎಸ್ ನಾಗಭೂಷಣ ಅವರ ಜತೆಗೂಡಿ ‘ಹೊಸ ಮನುಷ್ಯ’ ಪತ್ರಿಕೆಯನ್ನು ಸಂಪಾದಿಸುತ್ತಿದ್ದರು. ಅಂಚೆ ಕಚೇರಿಯಲ್ಲಿ 20 ವರ್ಷದ ಸೇವೆಯ ನಂತರ ಸ್ವಯಂ ನಿವೃತ್ತಿಹೊಂದಿ ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.

ʼನಾ ಬರುತ್ತೇನೆ ಕೇಳುʼ, ʼಚಂದ್ರನನ್ನು ಕರೆಯಿರಿ ಭೂಮಿಗೆʼ, ʼಹೊಳೆ ಮಗಳುʼ, ʼಜಾತ್ರೆಯಲ್ಲಿ ಶಿವʼ, ʼದರುಶನʼ, ʼಕರುಣಾಳುʼ, ʼದೇವರಿಗೆ ಹೋದೆವುʼ, ʼಕಡೇಮಾತುʼ, ʼದಿನದ ಪ್ರಾರ್ಥನೆʼ, ʼಯುದ್ಧ ವಿರೋಧಿ ಶಾಂತಿಗೀತೆಗಳುʼ.. ಇವರ ಕವನ ಸಂಕಲನಗಳು. ʼಹಳ್ಳಿಯ ದಾರಿʼ, ʼಆಕಾಶಮಲ್ಲಿಗೆʼ, ʼಕಾಡುಲಿಲ್ಲಿ ಹೂಗಳುʼ… ಇವರ ಆಯ್ದ ಕವನಗಳ ಸಂಕಲನಗಳು. ‘ಸ್ತ್ರೀಲೋಕ’ ಕಾದಂಬರಿ, ‘ಅಜ್ಜಿ ಕರೆದ ಹಾಗಾಯಿತು’ ಕಥಾ ಸಂಕಲನ, ‘ಹೂ ಮನಸಿನ ಹೋರಾಟಗಾರ ಮತ್ತು ಇತರ ಲೇಖನಗಳು’ ಎಂಬ ಸಂಗ್ರಹ ಮುಂತಾದವು ಇವರ ಕೃತಿಗಳು. ಎಲ್ಲಾ ಪುಸ್ತಕಗಳಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...