ಈ ದಿನ ಇಂಪ್ಯಾಕ್ಟ್ | ‘ಗೋಣಿಗದ್ದೆ ಹಾಡಿ’ ವರದಿಗೆ ಕಂದಾಯ ಸಚಿವರ ಸ್ಪಂದನೆ; ಅರಣ್ಯ ಸಚಿವರ ಜತೆಗೆ ಚರ್ಚಿಸುವ ಭರವಸೆ

Date:

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೊಡಗಿನ ‘ಗೋಣಿಗದ್ದೆ ಹಾಡಿ’ ವರದಿಗೆ ಸ್ಪಂದಿಸಿದ್ದು, ಅರಣ್ಯ ಸಚಿವರ ಜತೆಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ನಾಲ್ಕೇರಿ ಪಂಚಾಯಿತಿಗೆ ಒಳಪಡುವ ಗೋಣಿಗದ್ದೆಯಲ್ಲಿ ಬದುಕುತ್ತಿರುವ ಹಾಡಿ ಆದಿವಾಸಿಗಳ ದಿನನಿತ್ಯದ ಕಷ್ಟ ಹೇಳತೀರದು. ಕಾಡು ಪ್ರಾಣಿಗಳ ಹಾವಳಿಗಳಿಂದಷ್ಟೇ ಭಯಪಡುವುದಲ್ಲದೆ ಅಲ್ಲಿನ ಜೀವನವೇ ನರಕವಾಗಿದೆ. ಮನುಷ್ಯರು ಸಾಮಾಜಿಕವಾಗಿ ಬದುಕಲು ನಾಡಿನ ಆಸರೆ ಅಗತ್ಯವಿದೆ. ಯಾಕಂದರೆ ಕಾಡಿನಲ್ಲಿ ಬದುಕಲು ಇವತ್ತಿನ ಅರಣ್ಯ ಇಲಾಖೆಯ ಕಾನೂನು ಬಿಡುವುದಿಲ್ಲ. ಅಲ್ಲಿಯ ಉತ್ಪನ್ನವನ್ನೂ ಬಳಸಲು ಆಗದ ಪರಿಸ್ಥಿತಿ. ಕಾಡಿನಲ್ಲಿ ಆಸರೆಗಾಗಿ ಉಳಿಸಿಕೊಂಡಿದ್ದ ಅಷ್ಟೋ ಇಷ್ಟು ಗದ್ದೆ ಜಾಗ ಎಲ್ಲ ಅರಣ್ಯ ಕಾಯ್ದೆ ಹೆಸರಿನಲ್ಲಿ ಕಿತ್ತುಕೊಂಡಾಗ ಭಯದ ನಡುವೆಯೇ ಬದುಕು ನಡೆಯುತ್ತಿದ್ದು, ಮುಂದಿನ ಜೀವನದ ಗತಿಯೇನು? ಎಂಬ ಕಳವಳ ಉಂಟಾಗಿದೆ.

ಗೋಣಿಗದ್ದೆ ಹಾಡಿ ನಿವಾಸಿಗಳ ಬದುಕಿನ ಬವಣೆಯನ್ನು ಕಂಡು ಈ ದಿನ.ಕಾಮ್‌ ಫೆಬ್ರವರಿ 15ರಂದು “ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಜತೆಗೆ ಇಲ್ಲಿಯ ನಿಯೋಗವು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದಾಗ ಸ್ಪಂದಿಸಿದ್ದು, ಸಮಸ್ಯೆ ಆಲಿಸಿದ ಸಚಿವರು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆಯವರ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸ್ವಗೃಹದಲ್ಲಿ ಕೊಡಗು ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡರನ್ನು ಭೇಟಿ ಮಾಡಿದ್ದು, ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಗೋಣಿಗದ್ದೆ ಹಾಡಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸಚಿವರು ಈ ದಿನ.ಕಾಮ್ ವಿಶೇಷ ವರದಿ ಹಾಗೂ ನಿಯೋಗದಲ್ಲಿದ್ದ ಮುಖಂಡರ ಮಾತುಗಳನ್ನು ಆಲಿಸಿ, ಕೊಡಗಿನಲ್ಲಿ ದಲಿತರಿಗೆ, ಶೋಷಿತ ವರ್ಗಗಳಿಗೆ ನಿವೇಶನ, ಮನೆ, ಭೂಮಿ ಇಲ್ಲದಿರುವುದರ ಕುರಿತಾಗಿಯೂ ಚರ್ಚೆ ಮಾಡಿದ್ದಾರೆ. ಈ ವೇಳೆ ದಲಿತ ಮುಖಂಡರ ನಿಯೋಗ, “ಭೂಗುತ್ತಿಗೆ ಆದೇಶ ಹಿಂಪಡೆಯುವಂತೆ ಸರ್ಕಾರದ ಗಮನಕ್ಕೆ ತಂದು ಮುಂದಾಗುವ ಅಪಾಯವನ್ನು ತಪ್ಪಿಸಬೇಕು” ಎಂದು ಕೋರಿದ್ದಾರೆ.

“ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮ ಪಂಚಾಯಿತಿಯ ಗೋಣಿಗದ್ದೆ ಹಾಡಿಯಲ್ಲಿ ಬದುಕುತ್ತಿರುವ ಗಿರಿಜನ ನಿವಾಸಿಗಳು, ಜೇನು ಕುರುಬ ಸಮುದಾಯಗಳಿಗೆ ಈ ಹಿಂದೆ, ಅರಣ್ಯ ಕಾಯ್ದೆಯಡಿ ನಾಗರಹೊಳೆ ಅರಣ್ಯದ ಮಧ್ಯೆ ಸುಮಾರು 30 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಈ ಸ್ಥಳದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಹಾಗೂ ಕ್ರೂರ ಪ್ರಾಣಿಗಳ ಪ್ರಾಣ ಭಯದಿಂದ ಬದುಕುತ್ತಿರುವ ಹಾಡಿ ಜನಗಗಳಿಗೆ ಈ ಹಿಂದೆ ಅರಣ್ಯ ಕಾಯ್ದೆಯಡಿ ಮಂಜೂರಾಗಿದ್ದ ಸ್ಥಳದಿಂದ ಅದೇ ಅರಣ್ಯ ಪ್ರದೇಶದ ಮುಖ್ಯ ರಸ್ತೆಯ ಅಂಚಿಗೆ ಪುನರ್ವಸತಿಗೊಳಿಸಿ ಮೂಲಸೌಕರ್ಯಗಳನ್ನು ಒದಗಿಸಬೇಕು” ಎಂದು ಕೋರಿದ್ದಾರೆ.

IMG 20250219 WA0030

ಈ ಕುರಿತಂತೆ ಪರಿಶೀಲಿಸಿ, ಪುನರ್ವಸತಿಗೊಳಿಸಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿದೆಯೆಂದು ಕಂದಾಯ ಇಲಾಖೆ ಸಚಿವಾಲಯದಿಂದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಗೆ ಹಾಗೂ ಸಂಭಂದಪಟ್ಟ ಇಲಾಖೆಗಳಿಗೆ ಪತ್ರ ಕಳುಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಸರ್ಕಾರಿ ಭೂಮಿ ಒತ್ತುವರಿ ‘ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯ

ನಿಯೋಗದಲ್ಲಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಮುಖಂಡ ಡಿ ಎಸ್ ನಿರ್ವಾಣಪ್ಪ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಆದಿವಾಸಿ ಮುಖಂಡ ಮುತ್ತಣ್ಣ ಹಾಗೂ ಜನಶಕ್ತಿ ಸಂಘಟನೆಯ ರಂಗಾಚಾರ್ ಇದ್ದರು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...