ಈ ದಿನ ವರದಿಗೆ ಎಚ್ಚೆತ್ತ ಅಧಿಕಾರಿಗಳು ಧಾರವಾಡ ಜಿಲ್ಲೆಯ ಹಿರೇನೆರ್ತಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಅನುಭವಿಸುತ್ತಿದ್ದ ಶೌಚಾಲಯ ಸಂಕಷ್ಟಕ್ಕೆ ಪರಿಹಾರ ಒದಗಿಸಿದ್ದಾರೆ.
ಧಾರವಾರ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಹಲವಾರು ಮೂಲಭೂತ ಸಮಸ್ಯೆಗಳು ಇದ್ದವು. ಈ ಬಗ್ಗೆ ಈ ದಿನ.ಕಾಮ್ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಶಾಲಾ ಕಟ್ಟಡ ಉದ್ಘಾಟನೆಗೊಂಡು ಎರಡು ತಿಂಗಳು ಕಳೆದೆರೂ, ಶಾಲೆಗೆ ಇಂದಿಗೂ ವಿದ್ಯುತ್ ಸಂಪರ್ಕವಿರಲಿಲ್ಲ, ಆಟವಾಡಲು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಮೈದಾನವಿಲ್ಲ, ಕುಡಿಯುವ ನೀರಿನ ಸಮಸ್ಯೆ, ಮೂಲಭೂತವಾಗಿ ಶೌಚಾಲಯ ಕೊರತೆ. ಶೌಚಾಲಯವಿದ್ದರೂ ಅದಕ್ಕೆ ಬಾಗಿಲು ಇರಲಿಲ್ಲ. ಈ ಬಗ್ಗೆ ಈ ದಿನ.ಕಾಮ್ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿ, ಎಚ್ಚೆತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ನೀಲಗಾಂವ್, ಶಾಲಾ ಶೌಚಾಲಯಕ್ಕೆ ಬಾಗಿಲನ್ನು ಹಾಕಿಸಿ ವಿದ್ಯಾರ್ಥಿನಿಯರ ಮುಜುಗರಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ ಬೆಳಗಾವಿ | ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ
“ಸುಮಾರು 47 ಲಕ್ಷ ರೂಪಾಯಿಯ ಅನುದಾನ ಬಿಡುಗಡೆಯಾಗಿದ್ದು, ಕ್ರಿಯಾಯೋಜನೆಯನ್ನು ರೂಪಿಸಲಾಗುವುದು. ಆ ನಂತರ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬರುವ ದಿನಗಳಲ್ಲಿ ಖಾಳಜಿ ವಹಿಸಲಾಗುವುದು” ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ನೀಲಗಾಂವ್ ತಿಳಿಸಿದ್ದಾರೆ. ಆದಷ್ಟು ಬೇಗ ಶಾಲೆಯ ಇತರೆ ಎಲ್ಲ ಸಮಸ್ಯೆಗಳೂ ಬಗೆಹರಿಯಲಿ. ವಿದ್ಯಾರ್ಥಿಗಳ ಓದಿಗೆ ಅನಾನುಕೂಲ ಆಗದಿರಲಿ ಎಂಬುದು ನಮ್ಮ ಆಶಯ.





