ಚಿಂತಾಮಣಿ:ಇತ್ತೀಚಿಗೆ ಇಲ್ಲಿನ ಪರಿಶಿಷ್ಟ ಜಾತಿ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ ಶಿವ ಪ್ರಸಾದ್ ಮತ್ತು ಪ್ರದೀಪ್ ಬೆಂಬಲಿಗರ ತಂಡಕ್ಕೆ ಎಲ್ಲಾ ಸ್ಥಾನಗಳು ಲಭಿಸಿತ್ತು.
ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ಅಧಿಕಾರಿಯಾದ ಹರೀಶ್ ಕುಮಾರ್ ರವರು ಚುನಾವಣೆ ನಡೆಸಿಕೊಟ್ಟರು ಅಧ್ಯಕ್ಷರ ಸ್ಥಾನಕ್ಕೆ ಕೆ ಎಂ ಶಿವಪ್ರಸಾದ್ ಮತ್ತು ಎಸ್ ಪ್ರದೀಪ್ ರವರು ನಾಮಪತ್ರ ಸಲ್ಲಿಸಿದ್ದರು.
ಕೆಎಂ ಶಿವಪ್ರಸಾದ್ ಗೆ 10 ಮತಗಳು ಮತ್ತು ಪ್ರತಿಸ್ಪರ್ಧಿ ಎಸ್ ಪ್ರದೀಪ್ ಗೆ 5 ಮತಗಳು ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೆಎಂ ಶಿವಪ್ರಸಾದ್ ಅವರು ಗೆಲವು ಸಾಧಿಸಿದರು ಉಪಾಧ್ಯಕ್ಷರ ಸ್ಥಾನಕ್ಕೆ ಎನ್ ಕೆ ನರಸಿಂಹಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಇರುವ ಕಾರಣಕ್ಕೆ ಅವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಹರೀಶ್ ಕುಮಾರ್ ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಕೆ ಎಂ ಶಿವಪ್ರಸಾದ್ ಮಾತನಾಡಿ ಐದು ವರ್ಷಗಳ ಕಾಲ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಇರಾನ್ ಯುದ್ದ ನಿಲ್ಲಿಸುವಂತೆ ಯು ಬಸವರಾಜ್ ಒತ್ತಾಯ.
ಈ ಸಂದರ್ಭದಲ್ಲಿ ಹೆಚ್.ಎ.ಶ್ರೀನಿವಾಸ್, ಕೆ.ವೆಂಕಟಾಚಲಪತಿ, ಎಸ್.ಪ್ರದೀಪ್,ಎಂ.ಅಂಜನಪ್ಪ ಅರ್.ಶ್ರೀನಿವಾಸ್,ಜಿ.ವಿ.ರೆಡ್ಡಪ್ಪ,ಡಿ.ಎಂ.ನಾಗರಾಜ್, ಟಿ.ಎಸ್.ಶಿವಾನಂದ,ವೈ.ಎಸ್.ನರೇಂದ್ರ,ಎಂ.ಡಿ.ವೆಂಕಟ,ಸುಧಾ ಎನ್.ಮತ್ತು ರಾಧಾ ಡಿ.ಕೆ ಇದ್ದರು.





