ಬೆವಿಕಂ ವ್ಯಾಪ್ತಿಯಲ್ಲಿರುವ ರೈತರ ಅನಧಿಕೃತ ನೀರಾವರಿ ಸೇಟ್ಟುಗಳ ವಿದ್ಯುತ್ ಸಂಪರ್ಕ ಕಟ್

Date:

ಹೊಸಕೋಟೆ :ಹೊಸಕೋಟ ತಾಲ್ಲೂಕಿನ ನಂದಗುಡಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಇರುವ ಕೆಲ ರೈತರ ಅನಧಿಕೃತ ನೀರಾವರಿ ಪಂಪ್ ಸೆಟ್ಟುಗಳ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಆರಕ್ಷಕ ನಿರೀಕ್ಷಕರಾದ ಯೋಗೇಶ್ ಕುಮಾರ್ ಅವರ ನೇತೃತ್ವದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು.

ಹೊಸಕೋಟೆಯ ಬೆಸ್ಕಾಂ ಆರಕ್ಷಕ ನಿರೀಕ್ಷಕರಾದ ಯೋಗೇಶ್ ಕುಮಾರ್ ಮಾತನಾಡಿ ಇಂಧನ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಬೆವಿಕಂ ವ್ಯಾಪ್ತಿಯಲ್ಲಿ ದಿನಾಂಕ 22-9 -2023 ನಂತರದಲ್ಲಿ ನೀರಾವರಿ ಪಂಪ್ಸೆಟ್ಟುಗಳು ವಿದ್ಯುತ್ ಸಂಪರ್ಕ ಪಡೆಯಲು ಸಲುವಾಗಿ ಸ್ವಯಂ ಕಾರ್ಯ ನಿರ್ವಹಣೆ ಅಡಿ ಕಾಮಗಾರಿ ಕೈಗೊಳ್ಳುವುದು ಇಲ್ಲದಿದ್ದಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಅಡಿ ಕಾಮಗಾರಿ ಕೈಗೊಂಡು ವಿದ್ಯುತ್ ಸಂಪರ್ಕ ಪಡೆಯಬೇಕಾಗಿರುತ್ತದೆ. ಇದಕ್ಕೆ ಹೊರತುಪಡಿಸಿ ಯಾವುದೇ ನೀರಾವರಿ ಪಂಪ್ಸೆಟ್ಟುಗಳು ವಿದ್ಯುತ್ ಜಾಲದಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಲ್ಲಿ ಅವುಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಿ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂಧನ ಇಲಾಖೆಯಿಂದ ಹಾಗೂ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಈ ಆದೇಶ ಮೇರೆಗೆ ಬೆಳ್ಳಂಬೆಳಗ್ಗೆ ಕೆಲಸ ಸ್ಥಳಗಳ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿದ್ದಂತಹ ಪಂಪ್ ಸೆಟ್ ಗಳ ವಿದ್ಯುತ್ತನ್ನು ಕಡಿತಗೊಳಿಸಿ . ನಂತರ ಕಡಿತಗೊಂಡ ವಿದ್ಯುತ್ತನ್ನು ತಮ್ಮ ಸೂಕ್ತ ದಾಖಲೆಗಳೊಂದಿಗೆ ಸ್ಥಳೀಯ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಮರು ವಿದ್ಯುತ್ ಪಡೆಯಬಹುದು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ..? ನಿವೃತ್ತ ಯೋಧರಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಪರಿಕರಗಳ ವಿತರಣೆ

ಮುಗಬಾಳ ಘಟಕದ ಬೆಸ್ಕಾಂ ಅಧಿಕಾರಿ ನಿಂಗೇಗೌಡ ಮಾತನಾಡಿ ನಮ್ಮ ವ್ಯಾಪ್ತಿಗೆ ಬರುವಂತಹ ಎಲ್ಲಾ ನೀರಾವರಿ ಪಂಪ್ ಸೆಟ್ ಗಳು ಅನಧಿಕೃತವಾಗಿ ಬಳಸುತ್ತಿದ್ದವರ ವಿರುದ್ಧ ಇಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇವುಗಳನ್ನು ಕಾನೂನು ರೀತಿಯಲ್ಲಿ ಬಳಸುವಂತಹ ರೈತರು ವಿದ್ಯುತ್ ಕಡಿತ ಗೊಂಡ ನಂತರ ಸ್ಥಳೀಯ ವಿದ್ಯುತ್ ಘಟಕಕ್ಕೆ ಭೇಟಿ ನೀಡಿ ನಿಮಗೆ ಎಷ್ಟು ಪ್ರಮಾಣದ ವಿದ್ಯುತ್ ಬಳಕೆ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿ ಅವುಗಳಿಗೆ ಸೂಕ್ತ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ಪಾವತಿಸಬೇಕಾದ ಹಣವನ್ನು ಪಾವತಿಸಿ ನಂತರ ವಿದ್ಯುತ್ ಸಂಪರ್ಕವನ್ನು ಸ್ಥಳೀಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ವಿದ್ಯುತ್ ಅನ್ನು ನೀಡಲಾಗುತ್ತದೆ. ದಾಖಲಾತಿಗಳು ನೀರಿನ ಹಕ್ಕಿನ ಪತ್ರ, ಪಾಣಿ, ಹಾಗೂ ಆ ವ್ಯಕ್ತಿಯ ಒಂದು ಫೋಟೋ ಈ ದಾಖಲಾತಿಗಳನ್ನು ಸ್ಥಳೀಯ ಉಪ ವಿಭಾಗದಲ್ಲಿ ನೋಂದಾಯಿಸತಕ್ಕದ್ದು ತದನಂತರ ಪಂಪ್ ಸೆಟ್ ಗೆಸರ್ಕಾರದ ಕಡೆಯಿಂದ ಒಂದು ಶಾಶ್ವತ ಸಂಖ್ಯೆಯನ್ನು ನೀಡಿ ಬೆಸ್ಕಾಂ ಇಲಾಖೆಯಲ್ಲಿ ಪಂಪ್ ಸೆಟ್ ಶಾಶ್ವತವಾಗಿ ದಾಖಲು ಮಾಡಿಕೊಳ್ಳಲಾಗುತ್ತದೆ ಇವುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳತಕ್ಕದ್ದು ಹಾಗೂ ಇದು ಕೇವಲ ಚಿಕ್ಕನಹಳ್ಳಿ ಗ್ರಾಮದಲ್ಲಿ ಮಾತ್ರ ಅಲ್ಲದೆ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮುಗಭಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಜಡಿಗೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವಂತಹ ಸ್ಥಳಗಳಿಗೆ ಭೇಟಿ ನೀಡಿ ವಿದ್ಯುತ್ ಕಡಿತ ಗೊಳಿಸಲಾಗುತ್ತದೆ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...