ಫೆ.7 ರಂದು ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ಮೂರ್ಛೆರೋಗ ತಪಾಸಣಾ ಮತ್ತು ಅರಿವು ಶಿಬಿರ

Date:

ಹೊಸಕೋಟೆ :ಹೊಸಕೋಟೆ ರೋಟರಿ ಸೆಂಟ್ರಲ್ ರೋಟರಿ ಬೆಂಗಳೂರು ಐಟಿ ಕಾರಿಡಾರ್, ಆಸ್ಟರ್ ನ್ಯೂರೊ ಸೈನ್ಸ್ ಮತ್ತು ಸ್ಪೇನ್ ಕೇರ್ ಹಾಗೂ ಆಸ್ಟರ್ ವೈಟ್ ಫೀಲ್ಡ್ ಆಸ್ಪತ್ರೆಯ ಸಹಯೋಗದಲ್ಲಿ ಫೆ.7 ರಂದು ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ಬೆಳಿಗ್ಗೆ 11 ರಿಂದ 3 ಗಂಟೆ ವರೆಗೂ ಅಪಸ್ಮಾರ(ಮೂರ್ಛೆರೋಗ) ತಪಾಸಣಾ ಮತ್ತು ಅರಿವು ಶಿಬಿರವನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಿ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಾಲ್ಲೂಕು ಅಧ್ಯಕ್ಷರಾದ ಡಾ ನಾಗರಾಜ್ ಅವರು ತಿಳಿಸಿದರು.

ನಂತರ ಮತಾನಾಡಿದ ಅವರು ವಂಶಪಾರಂಪರ್ಯದಿಂದ ಮೆದುಳಿಗೆ ಒತ್ತಡ ಹೆಚ್ಚಾದಾಗ ಅಸಹಜ ವಿದ್ಯುತ್ ಸ್ಪರ್ಶವಾದಗ ತಲೆಗೆ ಹಳೆಯ ಗಾಯ ಮೆದುಳಿನ ರಕ್ತಸ್ರಾವ ಮೆದುಳಿನಲ್ಲಿ ಗಡ್ಡೆ ಜಂತುಹುಳ ಇರುವವರಲ್ಲಿ ಸಾಮಾನ್ಯವಾಗಿ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತದೆ ಎಂದರು.

ಮೂರ್ಚೆ ರೋಗದ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಕೆಲವರಿಗೆ ಕಣ್ಣು ಅಥವಾ ಕೈ–ಕಾಲು ಮಾತ್ರ ಕಂಪಿಸುವುದು ಕಂಡುಬಂದರೆ ಕೆಲವರಿಗೆ ಸಂಪೂರ್ಣ ದೇಹ ಕಂಪಿಸಿ ಅಚೇತನ ಸ್ಥಿತಿ ಉಂಟಾಗುತ್ತದ ಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಹಾಗೂ ಇಇಜಿ ಪರೀಕ್ಷೆಗಳ ಮೂಲಕ ಮೂರ್ಛೆ ರೋಗಕ್ಕೆ ನಿಖರ ಕಾರಣ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಇಂದಿನ ಆಧುನಿಕ ಔಷಧಿಗಳಿಂದ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಹೇಳಿದರು.

ಮೂರ್ಛೆ ಬಂದ ತಕ್ಷಣ ರೋಗಿಯನ್ನು ಒಂದು ಬದಿಗೆ ತಿರುಗಿಸಿ ಮಲಿಗಿಸಿ ನಂತರ ಜೊಲ್ಲು, ವಾಂತಿ ಮಾಡಿಕೊಂಡಿದ್ದರೆ ಸ್ವಚ್ಚಗೊಳಿಸಿ. ಸಾಧ್ಯವಾದರೆ ಗಲ್ಲವನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಬಾಯಿ ತೆಗೆದಿರುವಂತೆ ಒತ್ತಿ ಹಿಡಿದು ಕೊಳ್ಳಿ. ಯಾವುದೇ ಕಾರಣಕ್ಕೂ ಅಂಗಾತ ಮಲಗಿಸಬಾರದು ಮತ್ತು ನೀರು ಕುಡಿಸಬಾರದು. ಅಲ್ಲದೆ ಸಮೀಪದ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲೂ ಅಂಗಾತ ಇರದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದರು.

ಹೊಸಕೋಟೆ ರೋಟರಿ ಸೆಂಟ್ರಲ್ ನ ಅಧ್ಯಕ್ಷರಾದ ಸುಬ್ರಮಣ್ಯ ಮಾತನಾಡಿ, ಮೂರ್ಚೆ ರೋಗದ ಕುರಿತು ಜನರಲ್ಲಿ ಇರುವ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಏಕೆಂದರೆ ಜನರಲ್ಲಿ ಮೂರ್ಛೆ ರೋಗ ಲಕ್ಷಣ ಕಾಣಿಸಿದ ತಕ್ಷಣ ಕಬ್ಬಿಣದ ಕೀಲಿ ಕೈ ಇಲ್ಲವೇ ಪರಿಕರಗಳನ್ನು ಕೈಯ್ಯಲ್ಲಿಟ್ಟು ಹಿಡಿದುಕೊಳ್ಳುತ್ತಾರೆ. ಅಲ್ಲದೆ ಇದು ದೇವರ ದೋಷವೂ ಅಲ್ಲ ಪೂಜೆಯಿಂದ ವಾಸಿಯಾಗುವ ಕಾಯಿಲೆಯೂ ಅಲ್ಲ ಆದ್ದರಿಂದ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಅಗತ್ಯ ಶಿಬಿರದಲ್ಲಿ ಆಸ್ಟರ್ ವೈಟ್ ಫೀಲ್ಡ್ ಆಸ್ಪತ್ರೆಯ ಹೆಸರಾಂತ ನ್ಯೂರೊ ಸರ್ಜನ್ ಡಾ ಸತೀಶ್ ರುದ್ರಪ್ಪ, ಐಎಂಐ ಆಸ್ಪತ್ರೆಯ ವೈದ್ಯ ನೂರ್ ಖಾನ್ ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿದ್ದೀರಾ..? ಕೋಲಾರ | ತಂಗಿಯನ್ನು ನಿಂದಿಸಿದ್ದಕ್ಕೆ 5 ಬಾರಿ ದೂರು ಕೊಟ್ಟರೂ ಪೊಲೀಸರು ಕ್ಯಾರೇ ಅನ್ನಲಿಲ್ಲ, ಅದಕ್ಕೆ ನಾನೇ ಕೊಂದೆ!

ಇದೆ ಸಂದರ್ಭದಲ್ಲಿ ರೋಟರಿಯ ಕೋಲಾರ ವಲಯ ಮಾರ್ಗದರ್ಶಕರಾದ ರಾಜ್ ಕುಮಾರ್ ಡಿ. ಎಸ್.,ಕೋಲಾರ ಮತ್ತು ಹೊಸಕೋಟೆ ವಲಯದ ಕಾರ್ಯದರ್ಶಿಯಾದ ಬೆಚ್ಚಣ್ಣ, ಅಸ್ಟರ್ ಆಸ್ಪತ್ರೆಯ ವೈದ್ಯ ಸ್ಟಿಫೇನ್ ಇತರರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...