ಸಮಕಾಲೀನ ಸಂಗೀತದಲ್ಲಿ ಪ್ರಯೋಗಗಳ ಪಾತ್ರ ಹೆಚ್ಚು: ಎಂ ಡಿ ಪಲ್ಲವಿ

Date:

ಸಮಕಾಲೀನ ಸಂಗೀತದ ಬೆಳವಣಿಗೆಯಲ್ಲಿ ಆಗಾಗ ಮಾಡುವ, ಮಾಡಬೇಕಾದ ಪ್ರಯೋಗಗಳ ಪಾತ್ರ ಹೆಚ್ಚಿರುತ್ತದೆ ಎಂದು ಖ್ಯಾತ ಗಾಯಕಿ, ನಟಿ ಎಂ ಡಿ ಪಲ್ಲವಿ ಅಭಿಪ್ರಯಾಪಟ್ಟರು.

ಬೆಂಗಳೂರಿನ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ʼಹೊಸ ತಲೆಮಾರಿನ ಸಂಗೀತ: ಶಬ್ಧದೊಳಗಿನ ನಿಶ್ಯಬ್ಧದತ್ತ ಪಯಣʼ ವಿಷಯದ ಕುರಿತು ಮಾತನಾಡಿದ ಅವರು, “ಕೆಲ ವರ್ಷಗಳ ಹಿಂದೆ ಹೆಣ್ಣುಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ಮಾಡಿದ್ದ ಆಲ್ಬಮ್‌ ಒಂದರಲ್ಲಿ ನಾನೂ ಹಾಡಿದ್ದೆ. ಇಲ್ಲಿ ಹೊಸ ತಲೆಮಾರಿನ ಸಂಗೀತ ಎನ್ನುವುದಕ್ಕಿಂತ ಸಂಗೀತದಲ್ಲಿ ಸಮಕಾಲೀನತೆ ಎನ್ನುವುದು ಹೆಚ್ಚು ಸೂಕ್ತ ಎನ್ನುವುದು ನನ್ನ ಭಾವನೆ. ನಮ್ಮ ಸಮಕಾಲೀನ ಯೋಚನೆಗಳನ್ನು ಸಂಗೀತದಲ್ಲಿ ಹೇಗೆ ತಂದುಕೊಳ್ಳಬಹುದು ಎನ್ನುವುದೇ ಇದು. ಇದು ನನಗೆ ವೈಯಕ್ತಿಕವಾಗಿ ಹತ್ತಿರದ ವಿಷಯ. ನಾನು ನಿತ್ಯ ಹುಡುಕಾಡುವುದೂ ಇದನ್ನೇ. ರಂಗಭೂಮಿಯ ನಟನೆಯಲ್ಲಿರಲಿ, ಗಾಯನದಲ್ಲಿರಲಿ, ಸಂಗೀತ ಸಂಯೋಜನೆಯಲ್ಲಿರಲಿ ನಮ್ಮ ಎಲ್ಲೆಗಳು ಏನಿವೆಯೆಂದು ಪರೀಕ್ಷಿಸಿಕೊಳ್ಳುವ ಉದ್ದೇಶದಿಂದಲೇ ಬೇರೆ ಕಲಾವಿರೊಟ್ಟಿಗೆ ಕೊಲ್ಯಾಬ್ರೇಟ್‌ ಮಾಡ್ತಾ ಇರುತ್ತೇನೆ. ನನ್ನ ಸ್ವಂತ ಅನುಭವಕ್ಕಾಗಿಯೂ ಆಗಾಗ ಪ್ರಯೋಗಾತ್ಮಕ ಪ್ರಯತ್ನಗಳಿಗೆ ಕೈ ಹಾಕುತ್ತೇನೆ. ಈ ಪ್ರಯೋಗಗಳು ಸಮಕಾಲೀನವಾಗಿ ಎಷ್ಟು ಮುಖ್ಯ, ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ಗ್ರಹಿಸುವುದು ವಿಶೇಷವಾಗಿ ಸಂಗೀತಗಾರರಿಗೆ ಮುಖ್ಯವಾದ ವಿಷಯ” ಎಂದರು.

“ಕೆಲ ವರ್ಷಗಳ ಹಿಂದೆ ಹಮ್‌ ಡ್ರಮ್‌ ಎನ್ನುವ ತಂಡ ಕಟ್ಟಿದ್ವಿ. ಅದರಲ್ಲಿ ಪುರಂದರ ದಾಸರ ಪದಗಳು, ವಚನ, ಮಂಕುತಿಮ್ಮನಕಗ್ಗದ ಪದ್ಯಗಳು, ಹಳಗನ್ನಡದ ಪದ್ಯಗಳನ್ನು ಕೂಡ ಹಾಡ್ತಾ ಇದ್ವಿ. ನನ್ನಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ, ಇಷ್ಟವಾಗಿದ್ದ ಪ್ರಯೋಗವಾಗಿತ್ತದು. ಜನರಿಗೂ ಇಷ್ಟವಾಗಬಹುದು ಎಂದು ಭಾವಿಸಿದ್ವಿ. ಕಾರ್ಯಕ್ರಮದ ವೇಳೆ ಅದು ನಿಜವೂ ಎನ್ನಿಸಿತ್ತು. ಅದಾದ ಬಳಿಕ ನನಗೆ ಸಾಕಷ್ಟು ಟೀಕೆಗಳು ಬಂದವು. ಆ ಪ್ರಯೋಗ ಸಾಕಷ್ಟು ಮಂದಿಗೆ ಇಷ್ಟ ಆಗಿರಲಿಲ್ಲ. ಅದು ಎಷ್ಟರಮಟ್ಟಿಗೆ ಎಂದರೆ, ಬೇರೆ ಕಾರ್ಯಕ್ರಮಕ್ಕೆ ಹೋದಾಗಲೂ ನನ್ನ ಹಾಡು ಮುಗಿಯೋವರೆಗೆ ನಿಂತು ಧಿಕ್ಕಾರ ಕೂಗಿದ ಉದಾಹರಣೆಯೂ ಇದೆ. ಆಗ ಇದನ್ನ ನಾನು ನಿಜವಾಗಿಯೂ ಮಾಡಬೇಕಿತ್ತಾ ಎನಿಸಿದ್ದು ಸುಳ್ಳಲ್ಲ. ಅಷ್ಟು ಸರಳವಾದ ಪ್ರಯೋಗವನ್ನೂ ಕೂಡ ಜನ ಇಷ್ಟು ತಿರಸ್ಕಾರದಿಂದ ನೋಡಿದರು ಎನ್ನುವುದು ತುಂಬಾ ಶಾಕಿಂಗ್‌ ಆಗಿತ್ತು. ಅದರ ನಂತರವೂ ಪ್ರಯೋಗಗಳನ್ನ ಮಾಡುವುದು ಬಿಡಲಿಲ್ಲ. ಆದರೆ, ಅವನ್ನು ಜನ ಒಪ್ಪಿಕೊಂಡರು. ಯಾವುದೇ ಸಂಗೀತದಲ್ಲಿ ಪ್ರಯೋಗಗಳನ್ನ ಮಾಡುವಾಗ ಅದಕ್ಕಿರುವ ಬೌಂಡರಿಗಳನ್ನು ಸರಿಯಾಗಿ ಗ್ರಹಿಸಬೇಕು. ಸಮಕಾಲೀನ ಕೇಳುಗರಿಗೆ ಬೇಕಾದ ರೀತಿಯ ಬದಲಾವಣೆ ತಂದು ಹೊಸದೇನಾದರೂ ಪ್ರಯತ್ನಿಸಿದರೆ ಬಹುಶಃ ಸಮಾಜ ಒಪ್ಪಿಕೊಳ್ಳಬಹುದು. ಜರ್ಮನಿಯಲ್ಲಿ ಮಾಡಿದ ಒಂದು ಪ್ರಯತ್ನ ಜನರ ಮನಸ್ಸು ಗೆದ್ದಿತ್ತು. ಅದು ನನಗೆ ವೈಯಕ್ತಿಕವಾಗಿ ಕುಷಿ ಕೊಟ್ಟ ಸಂಗತಿ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟ್ರಾನ್ಸ್‌ ಮ್ಯಾನ್‌, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ ಹಾಗೂ ಹಿಂದೂಸ್ತಾನಿ ಸಂಗೀತಗಾರ ರೂಮಿ ಹರೀಶ್‌ ಮಾತನಾಡಿ, “ಸಂಗೀತಕ್ಕೆ ಎಷ್ಟು ವಿಶಾಲವಾದ ಎಲ್ಲೆ ಇದೆಯೋ ಅದರ ಸುತ್ತಲೂ ಸಮಾಜ ಸೃಷ್ಟಿಸಿಕೊಂಡಿರುವ ದೇವರು, ಭಯ-ಭಕ್ತಿ, ಉಡುಪು, ನಡವಳಿಕೆ ಹೀಗೆ ಎಲ್ಲವೂ ಮುತ್ತಿಕೊಂಡಿವೆ. ಅವೆಲ್ಲವೂ ಜೆಂಡರ್‌ ಆಧಾರಿತವಾಗಿವೆ. ಆ ಕಟ್ಟುಪಾಡುಗಳನ್ನೇ ದಾಟಿ ಅಂತಹ ಸಮಾಜದಿಂದ ಹೊರಬರುವ ಪ್ರಯತ್ನ ಮಾಡಿದೆ. ನನ್ನಲ್ಲಿದ್ದ ಸಂಗೀತದೆಡೆಗಿನ ಆಸಕ್ತಿಗೆ ಆ ಶಕ್ತಿ ಇತ್ತು” ಎಂದರು.

“ಟ್ರಾನ್ಸ್‌ಜೆಂಡರ್‌ ಆಗುವ ಪ್ರಕ್ರಿಯೆಯಲ್ಲಿ ಧ್ವನಿ ಕೈಕೊಟ್ಟಿದ್ದರಿಂದ ಎರಡು ವರ್ಷಗಳ ಕಾಲ ಹಾಡಲು ಸಾಧ್ಯವಾಗಲಿಲ್ಲ. ಹಾಡುವುದು ಬಿಟ್ಟು ಬೇರೆ ಗೊತ್ತಿರದ ನಾನು ಮತ್ತೆ ಹಾಡಲು ಶುರು ಮಾಡಿದ್ದು, ಸ್ನೇಹಿತನಂತೆ ಸಿಕ್ಕ ಗುರು ರಾಜೀವ್‌ ತಾರಾನಾಥ್‌ ಅವರ ಕೃಪೆಯಿಂದ. ನಾನು ಮುಖ್ಯವಾಗಿ ಕಲಿತು ಹಾಡ್ತಾ ಇದ್ದದ್ದು ಖಯಾಲ್‌ ಮತ್ತು ಠುಮ್ರಿ ಎನ್ನುವ ಹಿಂದೂಸ್ತಾನಿ ಸಂಗೀತ ಪ್ರಕಾರಗಳು. ಖಯಾಲ್‌ ಅಂದಕೂಡಲೇ ಅದು ಕ್ಲಾಸಿಕಲ್‌ ವಿಭಾಗ ಎಂದು ಕೇಳುಗರು ನಿರ್ಧರಿಸಿಬಿಡಬಹುದು. ಹಾಡುತ್ತಿರುವುದು ಕ್ಲಾಸಿಕಲ್‌ ಹೌದೋ, ಅಲ್ಲವೋ ಎನ್ನುವುದನ್ನು ನಿರ್ಧರಿಸುವುದರಲ್ಲಿ ಹಾಡುಗಾರರ ಲಿಂಗವೂ ಮುಖ್ಯ ಪಾತ್ರವಹಿಸುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿದ್ದೆ. ಖಯಾಲ್‌ನ್ನು ಕ್ಲಾಸಿಕಲ್‌ ಎಂದು ಸುಲಭವಾಗಿ ಒಪ್ಪಿ ಸ್ವೀಕರಿಸುವ ಜನ ಠುಮ್ರಿ ಪ್ರಕಾರವನ್ನು ಯಾಕೆ ಅಷ್ಟು ಬೇಗ ಒಪ್ಪಿಕೊಳ್ಳಲ್ಲ ಎಂದು ನನಗೇ ಅರ್ಥವಾಗುತ್ತಿಲ್ಲ. ಖಯಾಲ್‌ ಅಂದ್ರೆ ಅದೊಂದು ಆಲೋಚನೆ. ಅದನ್ನೇ ಸಂಗೀತದೊಂದಿಗೆ ಬೆರೆಸಿ ಹಂಚಿಕೊಳ್ಳಬಾರದೇಕೆ ಎನ್ನುವ ಯೋಚನೆ ಅಲ್ಲಿಂದ ಶುರುವಾಯಿತು. ಅದು ನನ್ನ ಸಮಕಾಲೀನ ಆಲೋಚನೆಗಳಿಗೆ ಪೂರಕವಾಯಿತು. ಸಂಗೀತಕ್ಕೆ ಆ ಶಕ್ತಿ ಇದೆ” ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ

ಎಸ್‌ ಆರ್‌ ರಾಮಕೃಷ್ಣ ಮಾತನಾಡಿ, “ಹೊಸತಲೆಮಾರಿನ ಸಂಗೀತ ಎನ್ನುವುದನ್ನು ಬಿಡಿಸುವುದಕ್ಕಿಂತ ಮೊದಲು, ಹೊಸತಲೆಮಾರು ಎಂದು ಯಾರನ್ನು ಕರೆಯುವುದು? ಹೊಸತಲೆಮಾರಿನ ಎಲ್ಲರೂ ಒಂದೇ ರೀತಿ ಯೋಚಿಸಬಲ್ಲರಾ? ಎನ್ನುವುದನ್ನು ಬಿಡಿಸುವುದು ಮುಖ್ಯ. ಹಿರಿಯಲ್ಲಿ ಇರುವಷ್ಟೇ ವೈವಿಧ್ಯತೆ ಕಿರಿಯರಲ್ಲೂ ಇದೆ. ನೋಡುವುದರಲ್ಲಿ, ಕೇಳುವುದರಲ್ಲಿ, ಆಚಾರ-ವಿಚಾರಗಳಲ್ಲೂ ಪ್ರತಿಯೊಬ್ಬರಲ್ಲೂ ವಿಭಿನ್ನತೆಗಳನ್ನು ನೋಡಬಹುದು. ಅದೇ ರೀತಿ ಸಂಗೀತದಲ್ಲೂ. ದೇಶ-ಕಾಲ ಕೂಡ ಅದರ ಭಾಗವೇ. ಉದಾಹರಣೆಗೆ: ನಾವು ಬೆಂಗಳೂರಿನಲ್ಲಿರುವಾಗ ಕೇಳುವ ಸಂಗೀತಕ್ಕೂ, ನ್ಯೂಯಾರ್ಕ್‌ನಲ್ಲಿದ್ದಾಗ ಕೇಳುವ ಸಂಗೀತಕ್ಕೂ ವ್ಯತ್ಯಾಸ ಗಮನಿಸಬಹುದು. ಇಲ್ಲಿ ಹೊಸ ಅಥವಾ ಹಳೆಯ ಸಂಗೀತ ಎನ್ನುವುದಿಲ್ಲ. ಹೊಸದಾಗಿ ಕೇಳುವುದರಿಂದ ಹೊಸ ಸಂಗೀತವಾಗಬಹುದು. ಅದು ಇನ್ನೆಲ್ಲೋ ಇನ್ಯಾರಿಗೋ ಹಳೆಯದೇ ಆಗಿರಬಹುದು ಎನ್ನುವುದು ನನ್ನ ಅಭಿಪ್ರಾಯ. ಎರಡು ತಲೆಮಾರುಗಳ ಸಂಗೀತವೂ ಒಟ್ಟಿಗೆ ಇರಬಹುದು. ಇತ್ತೀಚಿನ ದಿನಗಳಲ್ಲಿ ಅದನ್ನ ಸಿನಿಮಾ ರಂಗ ಹೆಚ್ಚು ಪ್ರಯೋಗಿಸುತ್ತದೆ. ಶಬ್ಧದೊಳಗಳ ನಿಶ್ಯಬ್ಧ ಎನ್ನುವುದು ಅಲ್ಲಮನ ಪದ ಪ್ರಯೋಗ. ಇದರರ್ಥ ಸ್ಪಷ್ಟವಾಗಿಲ್ಲದ್ದನ್ನೂ ನೋಡಿ; ಅಂದರೆ, ಕಾಣುವ ಶಬ್ಧದೊಳಗಿನ ಕಾಣದಿರುವ ಅರ್ಥವನ್ನೂ ಗ್ರಹಿಸಿ ಎನ್ನುವುದು ಇದರ ಆಶಯ. ಸಂಗೀತದಲ್ಲಿ ಕಿವಿಗೆ ಕೇಳದಿರುವುದೂ ಇದ್ದು, ಅದನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆಯೇ? ಎನ್ನುವುದು ತಿಳಿಯುವುದು ಅಗತ್ಯ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...