ಮೈಸೂರು ಜಿಲ್ಲೆ, ಟಿ ನರಸೀಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ. ಕುಮಾರಸ್ವಾಮಿ ಕರೋಹಟ್ಟಿ ಅವರ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ
ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷರಾದ ಕೆ. ಕುಮಾರಸ್ವಾಮಿ ಕರೋಹಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಭತ್ತ ಬೆಳೆಯಲಾಗಿದ್ದು, ಫಸಲಿನ ಕಟಾವು ಆರಂಭವಾಗಿದೆ. ಹೀಗಿರುವಾಗ, ಕಟಾವು ಬಳಿಕ ಬೆಳೆದ ಬೆಳೆಯನ್ನು ಮನೆಯಲ್ಲಿ ಸಂರಕ್ಷಸಿ ಇರಿಸಲು ಸಾಧ್ಯವಿಲ್ಲ. ತಾಲ್ಲೂಕು ಆಡಳಿತ ರೈತರ ಹಿತದೃಷ್ಟಿ ಅರಿತು, ಭತ್ತ ಖರೀದಿ ಕೇಂದ್ರ ತೆರೆಯಬೇಕು ಸರ್ಕಾರದ ಗಮನ ಸೆಳೆದು. ಹಾಗೆಯೇ, ಹಕ್ಕೊತ್ತಾಯ ಪಟ್ಟಿ ಅನುಸಾರ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇದರ ಜೊತೆಗೆ ತಾಲ್ಲೂಕಿನ ಕುಂದುಕೊರತೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಕೂಡಲೇ ಸರ್ಕಾರ ಎಲ್ಲಾ ತಾಲ್ಲೂಕುಗಳಲ್ಲಿ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ತೆರೆದು ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಳ್ಳಬೇಕು. ರಾಜ್ಯದ ಪಡಿತರ ವ್ಯವಸ್ಥೆಗೆ ಬೇಕಾದ ಅಕ್ಕಿ ಪೂರೈಕೆಗೆ ಅಗತ್ಯವಿರುವ ಭತ್ತವನ್ನು ರೈತರಿಂದಲೇ ನೇರವಾಗಿ ಕೊಳ್ಳಬೇಕು. ಈ ಹಿಂದೆ ರೈಸ್‌ಮಿಲ್ ಗಳಿಗೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತವನ್ನು ಕೊಳ್ಳಲು ಅವಕಾಶವಿತ್ತು. ಅದನ್ನು ಮತ್ತೆ ಜಾರಿಗೆ ತರಬೇಕು ಎಂದು ಹೇಳಿದರು.
ರೈತರು ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರ ನಿರ್ಧರಿಸುವ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಒಂದು ಕ್ವಿಂಟಾಲ್ ಭತ್ತಕ್ಕೆ ₹500 ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು. ಕುರುಬೂರು ಹಡ್ಡಾಳದ ಕೆರೆ ಸುಮಾರು 171 ಎಕರೆಯಿದ್ದು, ಗಿಡಗಂಟೆಗಳು ಬೆಳೆದು ನೀರು ಶೇಖರಣೆಯಾಗುತ್ತಿಲ್ಲ. ಇದರಲ್ಲಿ ರೈತರು ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದುದರಿಂದ, ಸದರಿ ಭೂಮಿಗೆ ನೀಲಿ ನಕ್ಷೆ ತಯಾರಿಸಿ, ನೀರಾವರಿ ವ್ಯವಸ್ಥೆ ಮಾಡಿಕೊಟ್ಟು ರೈತರು ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಡಬೇಕು. ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಂಕರ್ ಮಾತನಾಡಿ, ತಾಲ್ಲೂಕಿನ ಬೂದಹಳ್ಳಿ ಗ್ರಾಮದ ಸರ್ವೇ ನಂ 50 ರಿಂದ ಪ್ರಾರಂಭವಾಗುವ ಬೂದಹಳ್ಳಿ-ಬನ್ನೂರು ಹೋಗುವ ರಸ್ತೆಯನ್ನು ಶಾಲೆಗೆ ಶಾಲೆಗೆ ಹೋಗುವ ಅನುಕೂಲಕ್ಕಾಗಿ ಒತ್ತುವರಿ ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕು. ತಾಲ್ಲೂಕು ಹೋಬಳಿಯ ಶೆಟ್ಟಿಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ 12/1ರ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವುದು.
ಈ ಸುದ್ದಿ ಓದಿದ್ದೀರಾ? ಹೆಚ್ ಡಿ ಕೋಟೆ | ಸಫಾರಿ ಬಂದ್; ಉದ್ಯೋಗಿಗಳಿಗೆ ಸಂಕಷ್ಟ
ಭತ್ತ ಕಟಾವು ಯಂತ್ರಗಳನ್ನು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿಗಧಿ ಮಾಡಿದಂತೆ ಬಾಡಿಗೆ ದರಕ್ಕೆ ರೈತರಿಗೆ ಅಧಿಕೃತ ರಶೀದಿಯನ್ನು ನೀಡುವುದು. ಕಡ್ಡಾಯವಾಗಿ ಕನ್ನಡದಲ್ಲಿ ಉಲ್ಲೇಖಿಸುವುದು. ಭತ್ತ ತೂಕ ಮಾಡುವಾಗ ಕಡ್ಡಾಯವಾಗಿ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಬಳಸುವಂತೆ ಭತ್ತದ ವ್ಯಾಪಾರಿಗಳಿಗೆ ನಿರ್ದೇಶನ ನೀಡುವುದು. ಕೊತ್ತೆಗಾಲದ ಕುರುಬೂರು ಅಡ್ಡಹಳ್ಳದ ಜಲಾನಯನ ವ್ಯಾಪ್ತಿಯಲ್ಲಿ ಬರುವ ಕೆರೆಯನ್ನು ಅಭಿವೃದ್ಧಿ ಪಡಿಸುವ ವಿಚಾರವಾಗಿ ಸಮಗ್ರವಾದ ನೀಲಿನಕ್ಷೆಯನ್ನು ತಾಲ್ಲೂಕು ಹಂತದಲ್ಲಿ ತಯಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ
ಮನವಿ ಸಲ್ಲಿಸುವಾಗ ಉಪಾಧ್ಯಕ್ಷ ತಲಕಾಡು ದಿನೇಶ್, ಸಂಘಟನಾ ಕಾರ್ಯದರ್ಶಿ ಕೊತ್ತೆಗಾಲ ಶಾಂತಮೂರ್ತಿ, ಜಿಲ್ಲಾ ಮುಖಂಡ ಸುಜ್ಜಲೂರು ಚಂದ್ರಶೇಖರ್ ಇದ್ದರು.





