ಹುಣಸೂರು | ರೈತ ಸಭೆಗಳು ಗೋಳಾಗಬಾರದು; ದಿಟ್ಟ ನಿರ್ಣಯವಾಗಬೇಕು: ಬಡಗಲಪುರ ನಾಗೇಂದ್ರ

Date:

ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ‘ರಾಜ್ಯ ತಂಬಾಕು ಬೆಳೆಗಾರರ ಸಮಾಲೋಚನಾ ಸಭೆ’ಯಲ್ಲಿ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ‘ರೈತ ಸಭೆಗಳು ಗೋಳಾಗಬಾರದು, ಅದುವೇ, ದಿಟ್ಟ ನಿರ್ಣಯದ ವೇದಿಕೆಯಾಗಬೇಕು’ ಎಂದು ಕಿವಿ ಮಾತು ಹೇಳಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೃಷ್ಣರಾಜನಗರ, ಹುಣಸೂರು, ಹೆಗ್ಗಡದೇವನಕೊಟೆ ಪ್ರಮುಖವಾಗಿ ತಂಬಾಕು ಬೆಳೆಯುವ ತಾಲ್ಲೂಕುಗಳು. ಕೊಡಗಿನ ಕೆಲವು ಭಾಗ, ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ಭಾಗದಲ್ಲಿ ಬೆಳೆಯುವುದು ಇದೆ ಜಿಲ್ಲೆಗೆ ಹೊಂದಿಕೊಂಡಂತೆ.

ವಾಣಿಜ್ಯ ಬೆಳೆಯಾದ್ದರಿಂದ ಮಾರುಕಟ್ಟೆ, ಖರೀದಿ ವ್ಯವಸ್ಥೆ ಭಿನ್ನವಾಗಿದೆ. ಆದರೇ, ಏಕಾಏಕಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ತಂಬಾಕು ಖರೀದಿದಾರರು ಮಾರುಕಟ್ಟೆ ಬಾಯ್ಕಾಟ್ ಮಾಡಿದ್ದು, ಮಾರುಕಟ್ಟೆ ಸ್ಥಗಿತವಾಗಿದೆ. ಇದರ ಹಿಂದೆ ಬೇರೆಯದ್ದೇ ಷಡ್ಯಂತರ ಇದೇ. ಕಾರಣ ಫೆಬ್ರವರಿ.2ಕ್ಕೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಖರೀದಿದಾರರ(ಕಂಪನಿಗಳ) ಪರವಾಗಿ ತೀರ್ಮಾನ ತೆಗೆದುಕೊಳ್ಳಲಿ ಎನ್ನುವ ನಿಲುವನ್ನು ಸಹ ಹೊಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಧ್ಯ ಪರಿಸ್ಥಿತಿ ಅಡಕತ್ತರಿಗೆ ಸಿಲುಕಿದ ಅಡಕೆಯಂತಾಗಿದೆ ತಂಬಾಕು ಬೆಳೆಯುವ ರೈತರ ಪರಿಸ್ಥಿತಿ. ಇದನ್ನ ಮನಗಂಡು ರೈತರು ಒಂದು ವೇಳೆ ತಂಬಾಕು ಬೆಳೆಯದೆ ಇದ್ದರೆ, ತಂಬಾಕು ಮಂಡಳಿಯವರೇ ಮನೆ ಬಾಗಿಲಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಇದನ್ನ ಗಮನಿಸಬೇಕು. ಪಕ್ಷಾತೀತವಾಗಿ ರೈತರು, ಸಂಘಟನೆಗಳು ಒಂದಾದರೆ ಇದು ಸಾಧ್ಯ. ರೈತರಲ್ಲಿ ಒಗ್ಗಟ್ಟಿಲ್ಲದೇ ಇರುವುದು ಇವರ ಆಟಾಟೋಪಕ್ಕೆ ಕಾರಣವಾಗಿದೆ.

ಚಳವಳಿ ಬಲ ಹೀನವಾಗಲು ಒಂದು ರೀತಿಯಲ್ಲಿ ರೈತರ ಅಸಹಕಾರ ಕೂಡ ಕಾರಣವೇ, ಹಿನ್ನಡೆಗೆ ಹಾದಿ. ದಿಟ್ಟವಾದ ಚಳವಳಿ ನಡೆದರೆ ಗೆಲುವು ಸಾಧ್ಯ. ಇದಕ್ಕೆ ದೇಶ, ವಿದೇಶಗಳ ಗೆಲುವು ಮಾದರಿಯಾಗಿವೆ. ಆದರೇ, ಜಿಲ್ಲೆಯ ತಂಬಾಕು ಬೆಳೆ ವಿಚಾರವಾಗಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದರೆ, ಅದು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತದೆ. ಆದರೇ, ರಾಜ್ಯ ಸರ್ಕಾರ ಕೃಷಿಯಾಗಿಯೇ ಪರಿಗಣಿಸಿ, ಗಮನ ಹರಿಸಬೇಕು. ಇವತ್ತಿನ ಕೇಂದ್ರ ಸರ್ಕಾರದ ಆಡಳಿತ ವ್ಯಾಪ್ತಿಯಲ್ಲಿರುವ ತಂಬಾಕು ಮಂಡಳಿ ಅಸ್ತಿತ್ವಕ್ಕೆ ಕಾರಣ ಶಿವಮೊಗ್ಗದ ಹೆಚ್ ಎಸ್ ರುದ್ರಪ್ಪನವರು.

ಮುಂಚೆಯೆಲ್ಲಾ ತಂಬಾಕು ಮಾರಾಟದ ಹಣ ಕೈ ಸೇರದಿದ್ದಾಗ, ವಂಚನೆಯಾಗುತ್ತಿದ್ದಾಗ ಆಗ್ರಹಿಸಿದ್ದು ಇದೇ ರೈತ ಸಂಘ. ಹಾಗೆಯೇ, ಈಗಲು ಸಹ ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಿ ಹೋರಾಟ ನಿರ್ಧರಿಸಬೇಕು. ಆಗ ರೈತರು ಗೆಲುವು ಕಾಣಲು ಸಾಧ್ಯ. ಇದಕ್ಕಾಗಿ ಪ್ರಮುಖವಾಗಿ ಮೂರು ವಿಚಾರಗಳ ಮೇಲೆ ಚಳವಳಿ ನಡೆಯಬೇಕಿದೆ.

ಮೊದಲನೆಯದಾಗಿ ಕೂಡಲೇ ಮಾರುಕಟ್ಟೆ ತೆರೆಯಬೇಕು ಇದು ಆಧ್ಯತೆಯ ಹೋರಾಟ. ಇದರೊಟ್ಟಿಗೆ ಉತ್ತಮ ಬೆಲೆಗೆ ಆಗ್ರಹಿಸಿ ಲಿಖಿತವಾಗಿ ನಿರ್ಧಾರವನ್ನು ದಾಖಲಿಸುವಂತೆ ಹೇರುವುದಾಗಿದೆ. ಎರಡನೆಯದು ತಂಬಾಕು ಮಂಡಳಿ ಬಿತ್ತನೆ ಬೀಜ, ಗೊಬ್ಬರ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಮೂರನೆಯದು ಕ್ರಾಪ್ ಹಾಲಿಡೇ ಘೋಷಣೆ ಮಾಡಬೇಕು.

ಇದನ್ನೆಲ್ಲಾ ಫೆಬ್ರವರಿ.2ನೆಯ ತಾರೀಖಿನ ಬಜೆಟ್ ನೋಡಿದ ಬಳಿಕ ರೈತರು ಬೃಹತ್ ಹೋರಾಟಕ್ಕೆ ಸಿದ್ದರಾಗಬೇಕು. ತಂಬಾಕನ್ನು ಸಂಪೂರ್ಣವಾಗಿ ತೊಡೆಯಲು ಸಿದ್ದವಿದ್ದರೂ ಅದೊಂದು ರೀತಿಯ ಅಮಲಾಗಿ ಪರಿವರ್ತನೆಯಾಗಿದೆ ಆರ್ಥಿಕ ಉತ್ತೇಜನದಿಂದ, ಆದರೂ, ಅಪಾಯಕಾರಿ. ಜಿಲ್ಲೆಯಲ್ಲಿ ಲಾಭದಾಯಕವಾಗಿ ಬೆಳೆಯಬಹುದಾದ ಬೆಳೆ ಸಮೀಕ್ಷೆ ಸಹ ನಡೆದಿದೆ. ಸವಲತ್ತು, ನೆರವು ಸಿಕ್ಕರೆ ಪರ್ಯಾಯ ಬೆಳೆ ಬೆಳೆಯಲು ಸಾಧ್ಯ.

ಆದರೇ, ಪರಿಸ್ಥಿತಿ ಕೇಂದ್ರ ಸರ್ಕಾರ ಕಾರ್ಪೋರೆಟ್ ಕುಳಗಳಿಗೆ ಮಣಿಯಲಿದೆ, ರೈತ ಪರವಾಗಿ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಿರುವಾಗ, ರೈತರು ಇದಕ್ಕೆಲ್ಲ ಜಗ್ಗದೆ, ಕುಗ್ಗದೆ ಹೋರಾಟ ಕಟ್ಟಬೇಕು. ಇಲ್ಲದಿದ್ದರೆ ತಂಬಾಕು ಬೆಳೆಗಾರರಿಗೆ ಒನ್ ಟೈಮ್ ಸೆಟ್ಲ್ಮೆಂಟ್ ಕೊಡಬೇಕು. ಈ ಎಲ್ಲದರ ಬಗ್ಗೆ ಚರ್ಚಿಸಿ, ನಿರ್ಣಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪತ್ರ ರವಾನಿಸಬೇಕಿದೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹೊಳಲು ಗ್ರಾಮದ ರಸ್ತೆ ಕಾಮಗಾರಿಗೆ ದರ್ಶನ್ ಪುಟ್ಟಣ್ಣಯ್ಯ ಚಾಲನೆ

ಇದಷ್ಟೇ ಸಾಲದು ಜಿಲ್ಲೆಯಲ್ಲಿ ಕೇಂದ್ರ, ಮಂತ್ರಿಗಳು, ಸಂಸದರು ಓಡಾಡಲು ಹೋರಾಟಗಾರರು ಬಿಡಬಾರದು ಘೆರಾವ್ ಮಾಡಬೇಕು, ಕಪ್ಪು ಬಾವುಟ ಪ್ರದರ್ಶಿಸಿ ಬಿಸಿ ಮುಟ್ಟಿಸಬೇಕು. ಇದಕ್ಕಾಗಿ, ಮುಂಬರುವ ದಿನಗಳಲಿ ಸಾವಿರಾರು ಜನ ರೈತರು ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...