ಹಾವೇರಿ | ಸಮುದಾಯದ ಜೊತೆಗೆ ಕೆಲಸ ಮಾಡಿದರೆ ಸದೃಢರಾಗಲು ಸಾಧ್ಯ: ದಲಿತ ಮುಖಂಡ ಉಡಚಪ್ಪ ಮಾಳಗಿ

Date:

ಸಮುದಾಯದ ಜೊತೆಗೆ ಕೆಲಸ ಮಾಡಿದರೆ ಸದೃಢರಾಗಲು ಸಾಧ್ಯ ಎಂದು ದಲಿತ ಮುಖಂಡ ಉಡಚಪ್ಪ ಮಾಳಗಿ ಹೇಳಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವತಿಯಿಂದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿರವರ ಅಧ್ಯಕ್ಷತೆಯಲ್ಲಿ ಹಾವೇರಿ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಮತ್ತು ಬ್ಯಾಡಗಿ ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಭಾಸ್ ಮಾಳಗಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಉಡಚಪ್ಪ ಮಳಗಿ, “ನಾವು ಸಾಮಾಜಿಕವಾಗಿ ಸದೃಢರಾಗಲು ರಾಜಕೀಯ ಅಧಿಕಾರಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದ್ದರು. ಅಧಿಕಾರ ಬಂದಾಗ ತಮ್ಮ ವ್ಯಾಪ್ತಿಯ ಜನತೆಯ ಕೆಲಸದ ಜೊತೆಗೆ ಸಮುದಾಯಗಳ ಜನರ ಕೆಲಸ ಮಾಡಿದರೆ ನಮ್ಮ ಸಮುದಾಯ ಇನ್ನೂ ಹೆಚ್ಚು ರಾಜಕೀಯವಾಗಿ ಬಲಿಷ್ಠವಾಗಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಹಾವೇರಿ

ಹಾವೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಹಾಗೂ ಬ್ಯಾಡಗಿ ಪುರಸಭೆ ಉಪಾಧ್ಯಕ್ಷರಾದ ಸುಭಾಸ ಮಾಳಗಿ ಅವರಿಗೆ ಕಲ್ಯಾಣ ಸಮಿತಿ ವತಿಯಿಂದ ಅವರ ಅಭಿಮಾನಿಗಳ ಹಾಗೂ ಹಿತೈಸಿಗಳ ಪರವಾಗಿ ಶುಭ ಕೋರಲಾಗುತ್ತಿದೆ. ಇನ್ನೂ ಹೆಚ್ಚು ಅವರಿಗೆ ಕೆಲಸ ಮಾಡಲು ಅವಕಾಶ ಸಿಗಲಿ ಎಂದು ಶುಭ ಕೋರಿದರು.

ಇದನ್ನು ಓದಿದ್ದೀರಾ? ಸೆ.13-22: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದಿಂದ ‘ಪ್ರವಾದಿ ಮುಹಮ್ಮದ್: ಮಹಾನ್ ಚಾರಿತ್ರ್ಯವಂತ’ ರಾಜ್ಯವ್ಯಾಪಿ ಅಭಿಯಾನ

ಈ ಸಂದರ್ಭದಲ್ಲಿ ಭೀಮ್ ಘರ್ಜನೆಯ ರಾಜ್ಯಾಧ್ಯಕ್ಷರಾದ ತಿರಕಪ್ಪ ಚಿಕ್ಕೇರಿ, ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ದೊಡ್ಮನಿ, ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಎನ್. ಮಾಸೂರ, ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ನಿವೃತ್ತ ಪಿಎಸ್‌ಐ ನೀಲಪ್ಪ ಮಾಳಗಿ, ಎಪಿಎಂಸಿ ಮಾಜಿ ಸದಸ್ಯರಾದ ರಾಮು ಮಾಳಗಿ, ಮುಖಂಡರಾದ ಮಾರುತಿ ಕಿಳ್ಳಿಕ್ಯಾತರ, ಚಲನಚಿತ್ರ ನಟ ಪಕ್ಕೀರೇಶ, ಬಸವರಾಜ ಕಾಳಿ, ಜಗದೀಶ ಹರಿಜನ, ರಾಜೇಶ ಗೋಣೆಮ್ಮನವರ, ವಿಜಯ ಮಾಳಗಿ,ನಾಗರಾಜ ಹಾವನೂರ, ಮಂಜುನಾಥ ದೊಡ್ಡಮರಿಯಮ್ಮನವರ, ದುರಗಪ್ಪ ಮಾದರ, ಶ್ರೀಮತಿ ರೇಣುಕಾ ಬಡಕಣ್ಣವರ, ಶ್ರೀಮತಿ ನೀಲಮ್ಮ ಬುಡಪನಹಳ್ಳಿ, ಶಿವಪ್ಪ ಮುದಿಮಲ್ಲಣ್ಣನವರ, ಶ್ರೀಮತಿ ಅನ್ನಪೂರ್ಣ ಅರಕೇರಿ, ನಾಗರಾಜ ಕಲ್ಲೇದೇವರ, ಜಗದೀಶ ತಿಮ್ಮಾಪುರ, ರಾಜೀವ ಕರಿಯಣ್ಣವರ, ಮಂಜುನಾಥ ಗಾಳೆಪ್ಪನವರ, ಯಲ್ಲಪ್ಪ ದೊಡ್ಮನಿ, ಶ್ರೀಮತಿ ನೇತ್ರಾ ಕಾಂತೇಶ ದೊಡ್ಮನಿ, ಶ್ರೀಮತಿ ಗೀತಾ ಹಳೆಶಿಡೇನೂರ, ಶ್ರೀಮತಿ ಸುಮಂಗಲಾ ಕೃಷ್ಣಾಪುರ, ಶ್ರೀಮತಿ ಮಾಯವ್ವ ದೊಡ್ಮನಿ, ಶ್ರೀಮತಿ ನಾಗಮ್ಮ ಹಳೆಶಿಡೇನೂರ, ಶ್ರೀಮತಿ ಯಲ್ಲಮ್ಮ ಮಾಲತೇಶ ಕೊಪ್ಪದ ಸೇರಿದಂತೆ ಅನೇಕರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...