ಗದಗ | ಕಾಟಾಚಾರಕ್ಕೆ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಯುವ ಕವಿ ವೀರಪ್ಪ ತಾಳದವರ ಕಿಡಿ

Date:

“ಗದಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು. ಗಜೇಂದ್ರಗಡದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ಇದನ್ನು ಕಾಟಾಚಾರಕ್ಕೆ ಮಾಡುತ್ತಿದ್ದಿರೊ ಮಾಡಬೇಕೆಂದು ಮಾಡುತ್ತಿದ್ದಿರೊ ಗೊತ್ತಿಲ್ಲ?” ಎಂದು ಯುವ ಕವಿ ವೀರಪ್ಪ ತಾಳದವರ ಕಿಡಿಕಾರಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಕವಿ ವೀರಪ್ಪ ತಾಳದವರ ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣದಲ್ಲಿರುವ  ಕವಿಗೋಷ್ಠಿ ಕಾರ್ಯಕ್ರಮಕ್ಕೆ ನಮಗೆ ಮಾಹಿತಿ ಕೊಡದೆ, ಅನುಮತಿ ಪಡೆಯದೆ ನಮ್ಮ ಹೆಸರು ಹಾಕಿಕೊಂಡಿದ್ದಾರೆ. ಬಹುತೇಕ ಜಿಲ್ಲೆಯ ಕವಿಗಳಿಗೆ ಒಂದು ಸಣ್ಣ ಸಂಗತಿಯೂ ತಿಳಿಸದೆ ಗೋಷ್ಠಿಯ ಪಟ್ಟಿಯನ್ನು ಸಾಧನೆ ಎಂಬಂತೆ ಹಿಗ್ಗಿಸಿಕೊಂಡಿರುವುದು ಕಸಾಪದ ಆಡಳಿತದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಿನ್ನೆ ಆಕಸ್ಮಿಕವಾಗಿ ಈ ಮಾಹಿತಿ ನಮ್ಮ ಗಮನಕ್ಕೆ ಬಂತು. ಜಿಲ್ಲೆಯ ಕವಿಗಳಿಗೆ ಒಂದು ಮಾತು ತಿಳಿಸದೆ ಇಷ್ಟೊಂದು ಆತುರದ ಕಾರ್ಯಕ್ರಮ ರೂಪಿಸುವ ಇರಾದೆಯಾದರೂ ಏನಿತ್ತು ಎಂಬುದನ್ನು  ಜಿಲ್ಲಾಧ್ಯಕ್ಷರಾದ ಶ್ರೀ ವಿವೇಕಾನಂದ ಪಾಟೀಲರು ಸ್ಪಷ್ಟ ಪಡಿಸಬೇಕೆಂದು” ಯುವ ಕವಿ ವೀರಪ್ಪ ತಾಳದವರ ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 01 21 at 4.29.12 PM

“ಶ್ರೀ ವಿವೇಕಾನಂದ ಪಾಟೀಲರು ಅಧ್ಯಕ್ಷರಾದ ನಂತರ  ಇದು ಪ್ರಥಮವಾಗಿ ಜರುಗುತ್ತಿರುವ ಜಿಲ್ಲಾ ಸಮ್ಮೇಳನ ಎಂದು ಕಾಣುತ್ತದೆ. ಈ ಹುಮ್ಮಸ್ಸಿನ ಕಾರಣಕ್ಕಾದರೂ ತಾವು ಜಿಲ್ಲೆಯ ಕವಿಗಳಿಗೆ, ಕನ್ನಡ ಕಟ್ಟುವ ಮನಸ್ಸುಗಳಿಗೆ ತಿಳಿಸುವ ಪುಟ್ಟ ಕಾಯಕವಾದರೂ ಮಾಡಬಹುದಿತ್ತು. ‘ಹೇಗೊ ಹೆಸರು ಹಾಕಿ ಬಿಡೋಣ, ಇಷ್ಟವಿದ್ದವರು ಬಂದು ಕವಿತೆ ಓದಲಿ, ಇಲ್ಲ ಬಿಡಲಿ?”   ಎಂಬ ನಿಷ್ಕಾಳಜಿಗೆ ಕಸಾಪ ಈಡಾಗಿರುವುದು ನಮ್ಮ ಜಿಲ್ಲೆಗೆ ಆದ ಅವಮಾನವೆ ಆಗಿದೆ” ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿದ್ದೀರಾ? ಡಾಲಿ ಚಾಯ್‌ವಾಲ ಮಂಗಳೂರಿನವನಾಗಿದ್ದಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ

“ಕರ್ನಾಟಕ ಏಕೀಕರಣ ಚಳುವಳಿಗೆ ಮುನ್ನುಡಿ ಬರೆದ, ಕನ್ನಡ ನಾಡಿಗೆ ಕರ್ನಾಟಕ ಎಂದು ಹೆಸರು ಕೊಟ್ಟ. ಭುವನೇಶ್ವರಿಯ ಚಿತ್ರ ಬರೆದ,  ಉದಯವಾಗಲಿ ಚೆಲುವ ಕನ್ನಡ ನಾಡೆಂದು ಸಾರಿದ , ಪಂಚತಂತ್ರ ರೂಪಗೊಂಡ, ದಾನ ಚಿಂತಾಮಣಿ ಅತಿಮಬ್ಬೆ, ಗದುಗಿನ ನಾರಾಯಣಪ್ಪ, ಚಾಮರಸ, ಹುಯಿಲುಗೋಳ ನಾರಾಯಣರಾವ್ ರು, ಭೀಮಸೇನ ಜೋಶಿ,ಅಂದಾನಪ್ಪ ದೊಡ್ಡಮೇಟಿ, ಅನೇಕ ಮಹಾನುಭಾವರು ಜನ್ಮ ತಳೆದ ಈ ಪುಣ್ಯ ಭೂಮಿಗೆ, ಮುದ್ರಣ ಕಾಶಿಗೆ ಯಾವ ಗರಿ ಮೂಡಿಸಲು ಹೊರಟಿದೆಯೊ ಎಂಬುದನ್ನು ಜಿಲ್ಲಾ ಕಸಾಪ  ಹಾಗೂ ಆಡಳಿತ ಮಂಡಳಿಯೆ ತಿಳಿಸಬೇಕೆಂದು” ಈ ಮೂಲಕ ಗದಗ ಜಿಲ್ಲೆಯ ಎಲ್ಲಾ ಕವಿಗಳು ಮನವಿ ಮಾಡಿಕೊಳ್ಳುತ್ತೇವೆ ಎಂದು ಕವಿ ವೀರಪ್ಪ ತಾಳದವರ ತಿಳಿಸಿದ್ದಾರೆ.

WhatsApp Image 2025 01 21 at 4.29.13 PM
WhatsApp Image 2025 01 21 at 4.29.12 PM 1
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...