“ಸರ್ಕಾರದ ಚೌಕಟ್ಟಿನಲ್ಲಿ ಮಾಡಬಹುದಾದ ಉದಾಹರಣೆಗೆ ದಾಖಲೆಗಳನ್ನು ತೋರಿಸಿದ ಮೇಲೆ, ಸರ್ಕಾರದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಚರ್ಚೆ ಮಾಡಿಸಿ ಸರ್ಕಾರದ ಕೆಲಸಕ್ಕೆ ಕಳುಹಿಸಲಾಗುವುದು” ಎಂದು ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರು ಜಿ ಎಸ್ ಪಾಟೀಲ ಅವರು ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ನಿನ್ನೆ ತಹಸೀಲ್ದಾರರು ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.
ಚರ್ಚೆಯಲ್ಲಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರುಜಿ. ಎಸ್ ಪಾಟೀಲ್ ಮಾತನಾಡಿ, “ಬ ಕರಾಬ್ ಭೂಮಿಗಳನ್ನು ಕೋಡಲಾಗದು. ಕಾನೂನಿ ಅಡಿಯಲ್ಲಿ ಆ ತರಹ ಸರ್ಕಾರದ ಕಾನೂನಿನಲ್ಲಿ ಅವಕಾಶ ಇಲ್ಲ” ಎಂದು ವಾದಿಸಿದರು.
ತದನಂತರದಲ್ಲಿ ಹೋರಾಟಗಾರರು ಕೆಲವು ಮಾಹಿತಿ, ಲಿಖಿತ ದಾಖಲೆಗಳನ್ನು ತೋರಿಸಿ, ಸರ್ಕಾರದ ಚೌಕಟ್ಟಿನಲ್ಲಿ ಮಾಡಬಹುದು ಅಂತ ಉದಾಹರಣೆಗೆ ದಾಖಲೆಗಳನ್ನು ತೋರಿಸಿದ ನಂತರದಲ್ಲಿ ಸಮಿತಿ ಅಧ್ಯಕ್ಷರು ಆಗಬಹುದು. ಸರ್ಕಾರದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಚರ್ಚೆ ನಡೆಸಿ, ಸರ್ಕಾರದ ಮಟ್ಟದಲ್ಲಿ ಕಳುಹಿಸಲಾಗುವುದು” ಎಂದು ಶಾಸಕರು ಜಿ. ಎಸ್ ಪಾಟೀಲ ಅವರು ಹೇಳಿದರು.
ಈ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗಜೇಂದ್ರಗಡ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ‘ರೈತರಿಗೆ ಹಕ್ಕು ಪತ್ರ ನೀಡಬೇಕು’ ಎಂದು ಸುಮಾರು ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರರು ಭೇಟಿ ನೀಡಿ ಹದಿನೈದು ದಿನಗಳ ಒಳಗೆ ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು, ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು. ನಂತರದಲ್ಲಿ ಹೋರಾಟ ಹಿಂತೆಗೆದುಕೊಳ್ಳಲಾಗಿತ್ತು.
ಸಭೆಯಲ್ಲಿ ಸಮಿತಿಯ ಸದಸ್ಯರು ಕೀರಣಕುಮಾರ ಕುಲಕರ್ಣಿ, ಶಾರದಾ ರಾಠೋಡ, ಶಶಿ ಹೂಗಾರ, ಸಂಜಯ ದೊಡ್ಡಮನಿ, ಹಾಗೂ ರೋಣ ತಹಶಿಲ್ದಾರರು, ರೈತ ಸಂಘಟನೆಯ ಮುಖಂಡರು ಜಿ ನಾಗರಾಜ್, ಬಾಲು ರಾಠೋಡ, ಎಮ್ ಎಸ್ ಹಡಪದ, ರೂಪಲೇಶ ಮಾಳೋತ್ತರ, ಪೀರು ರಾಠೋಡ, ಚನ್ನಪ್ಪ ಗುಗಳೋತ್ತರ, ವೀರೇಶ್ ರಾಠೋಡ, ಕುಬೇರ ರಾಠೋಡ, ಚಂದ್ರು ರಾಠೋಡ ಉಪಸ್ಥಿತರಿದ್ದರು.





