“ವಿಶ್ವ ಗುರು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದ ಒಂದು ವರ್ಷದ ಸಂಭ್ರಮಾಚರಣೆ ಆಗಿದೆ. ಇದರ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಪ್ಟೆಂಬರ 1ರಿಂದ ಅಕ್ಟೋಬರ 1ರವರೆಗೆ ‘ಬಸವ ಸಂಸ್ಕೃತಿ ಅಭಿಯಾನ’ದ ಜಾಥಾ ಹಮ್ಮಿಕೊಂಡಿದ್ದು, ಗದಗ ಜಿಲ್ಲೆಗೆ ಸೆಪ್ಟೆಂಬರ 9ರಂದು ಗದಗಿನ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುಲಿಂಗಯ್ಯ ಓದ್ದುಮತ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮಾತನಾಡಿದ ಅವರು, “ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ, ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಗಜೇಂದ್ರಗಡ ತಾಲೂಕಿನಲ್ಲಿ ಒಟ್ಟು 15 ಸರಕಾರಿ, ಹಾಗೂ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಉಪನ್ಯಾಸಕ ಮೂಲಕ ತಿಳಿಸಲಾಗಿದೆ. ವಿಚಾರ ಸಂಕೀರಣ ಮತ್ತು ಸಂವಾದಗಳನ್ನು ಅಗಷ್ಟ 21ರಿಂದ ಪ್ರಾರಂಭಿಸಿ ಸಪ್ಟೆಂಬರ 4ರವರಗೆ ತಾಲೂಕಿನ ಎಲ್ಲಾ ಮಹಾವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳ ಸಹಕಾರ ಉತ್ಸಾಹದೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಯಿತು” ಎಂದರು.
“ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳು ಯಶಸ್ವಿಯಾದವು” ಎಂದು ತಿಳಿಸಿದರು.
“09 ಸಪ್ಟೆಂಬರ 2025 ರಂದು ಗದಗ ಜಿಲ್ಲೆಯಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು, ಶರಣ ಬಂಧುಗಳು ಭಾಗವಹಿಸಲು” ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಂಚ ಬೇಡಿಕೆ, ಕರ್ತವ್ಯಲೋಪ, ದುರ್ನಡತೆ ಆರೋಪ; ವೈದ್ಯಾಧಿಕಾರಿ ಅಮಾನತು
ಪತ್ರಿಕಾ ಪ್ರಕಟಣೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಮುಖಂಡರು, ಬಸವರಾಜ ಕೊಟಗಿ, ಶರಣು ಪೂಜಾರ, ಬಸವರಾಜ ಅಂಗಡಿ, ಅಂದಪ್ಪ ರೋಣದ, ಎಮ್.ಬಿ.ಸೋಂಪುರ, ಯು.ಆರ್.ಚನ್ನಮ್ಮನವರು, ಸಾಗರ ವಾಲಿ, ಕಳಕೇಶ ಸಾಲಿಮಠ, ಶರಣಪ್ಪ ಹಡಪದ, ಕಳಕಪ್ಪ ಪತಂಗರಾಯ ಉಪಸ್ಥಿತರಿದ್ದರು.





