“ಅಸಮಾನತೆ ಸಾರುವ ಮನುಸ್ಮೃತಿ ಸುಡುವುದು ಸಣ್ಣ ವಿಷಯವಲ್ಲ. ಈ ಹೆಣ್ಣು-ಗಂಡನ್ನೂ ಅಸಮಾನತೆ ನೋಡಲಾಯಿತು. ಬಾಬಾ ಸಾಹೇಬ್‌ರು ಮನುಸ್ಮೃತಿಯನ್ನ ಬಿಟ್ಟು ಬೇರೆ ಗ್ರಂಥಗಳನ್ನು ಸುಡಲಿಲ್ಲವೇಕೆ? ಅದರಲ್ಲಿರುವ ಅಸಮಾನತೆ, ಭೇದಭಾವ ಬೇರೆ ಗ್ರಂಥಗಳಲ್ಲಿ ಇಲ್ಲ. ಮನುಸ್ಮೃತಿ ಸುಟ್ಟಿರುವುದು ಭಗವದ್ಗೀತೆಯಲ್ಲಿರುವ ಅಸಮಾನತೆಯನ್ನು ಸುಟ್ಟಂತೆ” ಎಂದು ಪ್ರಗತಿಪರ ಚಿಂತಕ, ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.
ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಮನುಸ್ಮೃತಿ ದಹನ್ ದಿವಸವನ್ನು ‘ಮನುಸ್ಮೃತಿ’ ಸುಡುವ ಮೂಲಕ ಆಚರಿಸಲಾಯಿತು.
ಬಂಡಾಯ ಹೊರಾಟಗಾರ ಲಡಾಯಿ ಪ್ರಕಾಶಕ ಬಸವರಾಜ್ ಸೂಳೆಬಾವಿ ಮಾತನಾಡಿ, “1927 ಡಿಸೆಂಬರ್ 25 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಮನುಸ್ಮೃತಿ” ಸುಟ್ಟಿದ್ದು ಈ ದೇಶದ ಅಸಮಾನತೆ ಸುಟ್ಟ ದಿನ. ಈ ದೇಶ ಸಮಾನತೆಯಿಂದ ಕೂಡಿರುವಂತದ್ದಲ್ಲ. ಎಂದರು.
“ಮನುಷ್ಯನನ್ನೇ ಮನುಷ್ಯನನ್ನಾಗಿ ಕಾಣದ ದೇಶವಿದು. ಒಬ್ಬರು ಇನ್ನೊಬ್ಬರನ್ನು ಸಮಾನತೆಯಿಂದ ನೋಡದ ದೇಶವಿದು. ಎಲ್ಲರನ್ನೂ ಜಾತಿಯಿಂದ, ಜಾತಿ ಕಾರಣದ ಅಸಮಾನತೆಯಿಂದ ಕಂಡ ದೇಶವಿದು. ಬ್ರಾಹ್ಮಣರು ಶ್ರೇಷ್ಠ, ಉಳಿದವರು ಕನಿಷ್ಠವೆಂದು ಕಂಡಂತ ದೇಶವಿದು. ಈ ರೀತಿ ಅಸಮಾನತೆಯನ್ನು ಎತ್ತಿ ಹಿಡಿಯುವ ಮನುಸ್ಮೃತಿಯನ್ನು ಸುಡುವುದರ ಮೂಲಕ ಸಮಾನತೆ ಸಾರಿದರೆಂದು ಎಲ್ಲರೂ ತಿಳಿಯಬೇಕು” ಎಂದು ಹೇಳಿದರು.
“ಗಂಡು-ಹೆಣ್ಣಿನ ನಡುವೆ ಸಮಾನತೆ ಬರಬೇಕು ಎಂದು ಸಂವಿಧಾನ ಬಂದ ಮೇಲೆ ಬಂದಿದೆ ಎಂದು ನಾವೆಲ್ಲ ತಿಳಿದಿದ್ದೆವೆ. ಆದರೆ, ಇದು 1927ರಲ್ಲೇ ಬಾಬಾ ಸಾಹೇಬ್‌ರಿಗೆ ಈ ಆಲೋಚನೆ ಬಂದಿತ್ತು. ಈ ವಿಚಾರಕ್ಕೆ ಬೆಂಬಲ ಕೊಟ್ಡವರು ಮಹಾಡ್‌ನಲ್ಲಿ ಸಮಾವೇಶ ಆದ ಸಂದರ್ಭದಲ್ಲಿ ಮನುಸ್ಮೃತಿ ಸುಡಲು ಠರಾವು ಮಾಡಿದವರು ಚಿತ್ಪಾವನ ಬ್ರಾಹ್ಮಣ ಸಿ.ಎನ್. ಸಹಸ್ರ ಪುತೆ ಮಾಡಿದರು. ಪಿ.ಎನ್.ರಾಜಬೊದೆ ಎಂಬುವವರು ಅದಕ್ಕೆ ಅನುಮೋದನೆ ಮಾಡಿದರು” ಎಂದು ಹೇಳಿದರು.
ದಲಿತ ಕಲಾ ಮಂಡಳಿ ಕಲಾವಿದ ಶರೀಫ್ ಮಾತನಾಡಿ, “ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮೇಲು-ಕೀಳಿನಿಂದ ಜನರನ್ನು ವಿಂಗಡಿಸುತ್ತಾ ಬಂದಿದೆ. ಇಂದಿಗೂ ಜಾತಿ ಆಧಾರದಲ್ಲಿ ಮರ್ಯಾದೆ ಹತ್ಯಗಳು ಅದು ಮನುಸ್ಮೃತಿಯ ಒಂದು ಭಾಗವೇ ಅಗಿದೆ. ಹೆಣ್ಣು-ಗಂಡುಗಳ ಮಧ್ಯ ಬೇಧಭಾವ ಹುಟ್ಟು ಹಾಕಿ ಹೆಣ್ಣು ಅಡಿಗೆ ಮನೆಗೆ ಸೀಮೀತ ಎಂಬ ಕಟ್ಟಳೆಯನ್ನು ನಿರ್ಮಿಸಿದ್ದು ಈ ಮನುಸ್ಮೃತಿ ಇದನ್ನು ಸುಡುವುದರ ಮೂಲಕ ಬಾಬಾ ಸಾಹೇಬ್‌ರು 1927ರಲ್ಲಿ ಅಸಮಾನತೆ ಸಾರುವ ಮನುಸ್ಮೃತಿ ಸುಡುವುದರಿಂದ ಸಮಾನತೆಗೆ ಮೊದಲ ಚಾಲನೆ ನೀಡಿದರು” ಎಂದರು.
ಈ ಸುದ್ದಿ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ಜಿ; ಗಾಂಧಿ ಕನಸಿಗೆ ಕೊಳ್ಳಿ ಇಟ್ಟ ಕೇಂದ್ರ
ಈ ಸಂದರ್ಭದಲ್ಲಿ ಅನಂದ ಸಿಂಗಾಡೆ, ಶಿವಾನಮದ ತಮ್ಮಣ್ಣವರ, ಅನಿಲ್ ಕಾಳೆ, ಪರಶು ಕಾಳೆ, ಬಾಲರಾಜ್ ಅಳಂದ, ಯಲ್ಲಪ್ಪ ರಾಮಗೇರಿ, ಮುತ್ತು ಬಿಳಿಯೆಲಿ, ಬಸೂ ಬಿಳಿಯೆಲಿ, ರವಿ, ಎಸ್.ಎನ್.ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಮಂಜುನಾಥ, ರಮೇಶ ಕೊಳೂರು ಹಾಗೂ ಇತರರು.





