“ಇತ್ತೀಚೆಗೆ ನಿರ್ಮಾಣಗೊಂಡಿರುವ ಸಿ.ಸಿ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ನಡೆದಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹಣದಲ್ಲಿ ಕೈಗೊಳ್ಳಲಾದ ಈ ಕಾಮಗಾರಿಯು ಕೆಲವು ದಿನಗಳಲ್ಲೇ ಹಾಳಾಗಿವ ಕಾಮಗಾರಿ ಆಗಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ” ಎಂದು ಎಸ್.ಡಿ.ಪಿ.ಐ ಮುಖಂಡರು ಮುಖಂಡರು ಆರೋಪಿಸಿದ್ದಾರೆ.
ಶಿರಹಟ್ಟಿ ನಗರದ ಕಚೇರಿ ಪ್ಲಾಟ್ ಓಣಿಯ ವಾರ್ಡ್ ನಂ. 11ರಲ್ಲಿ ಸಿ. ಸಿ. ರಸ್ತೆ ಕಳಪೆ ಕಾಮಗಾರಿ ಆಗಿದ್ದು, ಕೂಡಲೇ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ” ಎಸ್ ಡಿ ಪಿ ಐ ಮುಖಂಡರು ಗದಗ ಪಟ್ಟಣದ ಜಿಲ್ಲಾಡಳಿತದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರು ಬಿಲಾಲ್ ಗೋಕಾವಿ ಮಾತನಾಡಿ, “ಸ್ಥಳೀಯ ನಿವಾಸಿಗಳ ಪ್ರಕಾರ, ರಸ್ತೆ ನಿರ್ಮಾಣ ವೇಳೆ ಕಡಿಮೆ ಗುಣಮಟ್ಟದ ಸಿಮೆಂಟ್ ಹಾಗೂ ಮರಳು ಬಳಸಲಾಗಿದ್ದು, ಅಳತೆ ಮತ್ತು ತಂತ್ರಜ್ಞಾನ ನಿಯಮಗಳನ್ನು ಪಾಲಿಸದೆ ಕಾಮಗಾರಿ ಮುಗಿಸಲಾಗಿದೆ. “ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ” ಎಂದರು.
“ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸಿ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ನಾಗರಿಕರು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ” ಮುಖಂಡರು ಆಗ್ರಹಿಸಿದರು.
ಮನವಿ ಸಂದರ್ಭದಲ್ಲಿ ಎಸ್ ಡಿ ಪಿ ಐ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಪ್ರದಾನ ಕಾರ್ಯದರ್ಶಿ ಅಬ್ದುಲ್ ಕಾಗದಗಾರ, ಉಪಾಧ್ಯಕ್ಷರು ಮುಝಮ್ಮಿಲ್ ಮಕಾನ್ದಾರ್, ಮಿನಾಜ ಬಳಿಗೇರ, ದಾದಾಪೀರ ಡಾಲಾಯತ, ಮಾಬುಲಿ ಡಾಲಾಯತ, ರಪೀಕ ಮುಲ್ಲಾ, ಮುಸ್ತಾಕ ಕಾಗದಗಾರ, ಜಮಿರ ನಧಾಪ ಉಪಸ್ಥಿತರಿದ್ದರು.





