ಗದಗ | ಮಕ್ಕಳ ಆರೋಗ್ಯ ತಪಾಸಣೆ ಅತೀ ಅವಶ್ಯ: ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ

Date:

“ಮಕ್ಕಳ ಆರೋಗ್ಯ ತಪಾಸಣೆ ಅತೀ ಅವಶ್ಯ. ಮಕ್ಕಳಲ್ಲಿರುವ ಖಾಯಿಲೆಗಳು ಯಾರಿಗೂ ತಿಳಿದಿರುವುದಿಲ್ಲ. ಅದರ ಬಗ್ಗೆ ಹೇಳಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ. ಮಕ್ಕಳ ಆರೋಗ್ಯ ತಪಾಸಣೆಯಿಂದ ಉಲ್ಬನವಾಗುವ ಕಾಯಿಲೆಗೆ, ಮುನ್ನವೇ ಚಿಕಿತ್ಸೆ ಕೊಡಿಸಬಹುದು. ಹೀಗಾಗಿ ಕಾಲಕಾಲಕ್ಕೆ ಚಿಕ್ಕ ಮಕ್ಕಳ ತಜ್ಞರೊಂದಿಗೆ ತಪಾಸಣೆ ನಡೆಸುವುದ ಅವಶ್ಯವಾಗಿದೆ” ಎಂದು ತಾಲೂಕ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ‌ ಸರ್ಕಾರಿ ಹಿರಿಯ‌ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ಲೈಪ್ ಕೇರ್ ಆಸ್ಪತ್ರೆ ಹಾಗೂ ನ್ಯೂ ನಳಂದ ಹೊಟೆಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ಮಕ್ಕಳ ವೈದ್ಯಕೀಯ ಆರೋಗ್ಯ‌ ಶಿಬಿರ ಹಾಗೂ ಬಿಪಿ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು.

“ಶಾಲಾ ಹಂತದಲ್ಲಿ‌ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಿ ಉಚಿತ ಔಷಧಿ ನೀಡಿ  ಸಹಕರಿಸಿದ ಡಾ.ಗೋಣೆಶ ಮೇವುಂಡಿ ಹಾಗೂ ಜಗದೀಶ ಸಂಗಟಿಯವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದ ಖ್ಯಾತ ಮಕ್ಕಳ ವೈದ್ಯ ಡಾ. ಗೊಣೇಶ ಮೇವುಂಡಿ, “ಒಂದು ದೇಶ ಪ್ರಗತಿಯಾಗಬೇಕಾದರೆ ಆರೋಗ್ಯ ಮತ್ತು ಶಿಕ್ಷಣ‌ ಎರಡೂ‌ ಅತ್ಯಂತ ಅವಶ್ಯ‌. ಹೀಗಾಗಿ‌ ಈ ಎರಡೂ‌ ವಿಷಯಗಳಲ್ಲಿ ಪಾಲಕರು‌ ಅತ್ಯಂತ‌ ಜಾಗೃತಿ ವಹಿಸುವುದು‌ ಅವಶ್ಯವಾಗಿದೆ‌” ಎಂದರು.

“ಇಂದಿನ ಕಾಲದಲ್ಲಿ 10 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಪೋಷಕಾಂಶಗಳ ಕೊರತೆ  ಹಾಗೂ ಹೊಟ್ಟೆಯಲ್ಲಿ ಜಂತುಗಳು ಬೆಲೆಯುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಮಕ್ಕಳ ಮುಖದ‌  ಬಿಳಿ ಕಲೆಗಳು (ತದ್ದು) ಕಾಣಿಸಿಕೊಳ್ಳುತ್ತವೆ. ಇವು ತಪಾಸಣೆ‌ ನಡೆಸದೇ ಗೊತ್ತಾಗುವುದಿಲ್ಲ.  ಹೀಗಾಗಿ ವರ್ಷದಲ್ಲಿ ಒಂದೆರಡು ಭಾರಿಯಾದರೂ ಪಾಲಕರು ತಪ್ಪದೇ ಮಕ್ಕಳ ಆರೋಗ್ಯ ತಪಾಸಣೆ ನಡೆಸುವುದು ಅವಶ್ಯವಾಗಿದೆ” ಎಂದರು.

1002757405

ಶಾಲಾ ಮುಖ್ಯೋಪಾಧ್ಯಾಯ ಡಾ.ನಿಂಗು‌ ಸೊಲಗಿ ಮಾತನಾಡಿ, “ಶಾಲೆಯಲ್ಲಿ ಪೋಷಣ್ ಅಭಿಯಾನದಡಿ ನಿತ್ಯ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸಲಾಗುತ್ತಿದೆ, ನಿಯಮಿತ ಕಬ್ಬನಾಂಶ ಮಾತ್ರೆ ಕೊಡಲಾಗುತ್ತಿದೆ. ಆದರೂ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸುತ್ತಿದ್ದೆವು. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮೂಲಕ ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಲು ಅನುಕೂಲವಾಗುವುದೆಂದು ಎಸ್ಡಿ.ಎಂ.ಸಿ. ಯವರ ಸಹಕಾರದಲ್ಲಿ  ಶಿಬಿರ ಸಂಘಟಿಸಲಾಗಿದೆ. ಸದೃಢ-ಸಮರ್ಥ ಮಕ್ಕಳಿಂದ ಸಮಾಜ ಕುಟುಂಗಳು ಸದೃಡವಾಗಿ ಬೆಳೆಯುತ್ತವೆ” ಎಂದರು. 

ಇದೇ ಸಂದರ್ಭದಲ್ಲಿ  ಮಕ್ಕಳಿಗಾಗಿ ಮಲ್ಟಿ ಮಿಡಿಯಾ ತರಗತಿಗಾಗಿ ಡಾ. ಗೋಣೇಶ ಮೇವುಂಡಿಯವರು ಎರಡು ಟಿ.ವಿ. ಗಳನ್ನು ನೀಡಿ ಪ್ರೋತ್ಸಾಹಿಸಿದ್ದನ್ನು ಸ್ಮರಿಸಿಕೊಂಡರು. 

ಮಕ್ಕಳ ಆರೋಗ್ಯ ತಪಾಸಣೆ ಮಾಡಿದ ಡಾ.ಗೋಣೆಶ ಮೇವುಂಡಿ ಹಾಗೂ ಡಾ.ಲಕ್ಷ್ಮಣ ಪೂಜಾರ,  ನ್ಯೂ ನಳಂದ ಹೋಟೆಲ್ ಮಾಲೀಕ ಜಗದೀಶ ಸಂಗಟಿ, ಡಾ. ಪ್ರಶಾಂತ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಸೇತುರಾಮಾಚಾರ್ಯ ಕಟ್ಟಿ ಮಾತನಾಡಿದರು.

ಈ ಶಿಬಿರದಲ್ಲಿ ತಮ್ಮ ಮಕ್ಕಳೊಂದಿಗೆ ತಾಯಂದಿರೂ, ಹಿರಿಯ ನಾಗರಿಕರೂ ಸಹ ಶಾಲೆಗೆ ಆಗಮಿಸಿ‌ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜತೆಗೆ ಭೀಮಾಂಬಿಕಾ‌ನಗರದ ಡಾ.ಬಿ.ಎಸ್.ಮೇಟಿ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ‌ ಸಹ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಾಲಾ‌ ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ‌ವಹಿಸಿದ್ದರು

ಕಾರ್ಯಕ್ರಮದಲ್ಲಿ ಬಸವರಾಜ ತಿಗರಿ,  ರಂಗಪ್ಪ ಮೇಟಿ, ಸಿದ್ದರಾಮಗೌಡ ಪಾಟೀಲ, ಯಲ್ಲಪ್ಪ‌ ಅಬ್ಬೀಗೇರಿ, ಅಶೋಕ ಕೋಳಿ, ವಿಠಲ ಜಂಬಿಗಿ, ಪರಮೇಶ ದಂಡಿನ, ಜಿತೇಂದ್ರ ಬಾಗಳಿ,  ಪ್ರಭಾವತಿ ಆರ್. ಗಾಡದ, ಶಿವಲೀಲಾ ಅಬ್ಬಿಗೇರಿ, ಬಸವರಾಜ ಹೆಬಲಿ , ಲಕ್ಷ್ಮಣ ಸಂಗಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎಚ್.ಹಲವಾಗಲಿ ಸ್ವಾಗತಿಸಿ, ಪಿ.ಎಂ.ಲಾಂಡೆ ನಿರೂಪಿಸಿ, ಎಂ.ಆರ್.ಗುಗ್ಗರಿ ವಂದನಾರ್ಪನೆ ಮಾಡಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...