ಗದಗ | ದೇವದಾಸಿ ತಾಯಂದಿರ ಮಕ್ಕಳು ಒಳ್ಳೆ ಶಿಕ್ಷಣ ಪಡೆಯಬೇಕು: ರಮೇಶ ಕಡೆಮನಿ

Date:

“ಶೋಷಣೆಗೆ ಒಳಗಾಗಿ ಎಷ್ಟೋ ಅವಮಾನಗಳನ್ನ  ಕಷ್ಟ ಕಾರ್ಪರ್ಯಗಳನ್ನ ಎದುರಿಸತ್ತಿದ್ದೀರಿ. ಇನ್ನು ಮುಂದೆಯಾದರು ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಅನೇಕ ನಿಗಮಗಳಿಂದ ಬರುವ  ಸಾಲ ಮತ್ತು ಭೂಮಿ ಅನೇಕ ಸೌಲಭ್ಯಗಳನ್ನ ಪಡೆದುಕೊಳ್ಳಿರಿ. ನಾನು ಸದಾ ಈ ಒಂದು ವಿಮುಕ್ತ ದೇವದಾಶಿ ತಾಯಿಂದಿರ ಸಂಘಟನೆಯಲ್ಲಿ ಪದಾಧಿಕಾರಿಯಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ” ಎಂದು ದಲಿತ ಯುವ ಮುಖಂಡರು ರಮೇಶ ಎಂ.ಕಡೇಮನಿ ಹೇಳಿದರು.

 ಗದಗ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ .ಮಹಿಳಾ ಅಭಿವ್ರದ್ದಿ ನಿಗಮ. ವಿಮುಕ್ತ ದೇವದಾಸಿ ಮಹಿಳಾ ವೇಧಿಕೆ ಸಂಯುಕ್ತ ಆಶ್ರಯದಲ್ಲಿ ವಿಮುಕ್ತ ದೇವದಾಸಿ ತಾಯಂದಿರ ಮತ್ತು ಮಕ್ಕಳ ವಿಮೋಚನಾ ಕಾರ್ಯಾಗಾರ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ, ಮಾಜಿ ದೇವದಾಸಿ ತಾಯಂದಿರ ಪ್ರಮಾಣ ಪತ್ರ ವಿತರಣೆ ಹಾಗೂ ವಿಮುಕ್ತ ಧ್ವನಿ ದಿನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಾಡಲಾಯಿತು.

“ದೇವದಾಶಿ ತಾಯಿಂದಿರು ಬಹಳ ಹಿಂದಿನ ಕಾಲದಿಂದಲೂ ತುಳಿತಕ್ಕೆ ಒಳಗಾಗಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜೊತೆಗೆ ತಾವುಗಳು ಮೂಡನಂಬಿಕೆಗೆ ಒಳಗಾಗಿದ್ದೀರಿ. ದೇವರುಗಳ ಹೆಸರಿನಲ್ಲಿ ಮುತ್ತು ಕಟ್ಟುವುದರ ಮೂಲಕ ದೇವದಾಸಿಯರನ್ನಾಗಿ ಮಾಡುವರು. ಇದರಿಂದ ಹೊರ ಬರಬೇಕು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅತಿಥಿಗಳು ಜಿಲ್ಲಾ ವಿಭಾಗ ಮಟ್ಟದ ಎಸ್‌ಸಿ. ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರು ಬಸವರಾಜ ಮುಳ್ಳಾಳ ಮಾತನಾಡಿ, “ವಿಮುಕ್ತ ದೇವದಾಶಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಗದಗ ಈ ಒಂದು ಕಾರ್ಯಕ್ರಮ ದೇವದಾಶಿ ತಾಯಿಂದಿರ ನೋವು ನಲಿವುಗಳನ್ನ ಆಲಿಸುವುದರಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದು, ತಾಯಂದಿರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

ಗದಗ ಜಿಲ್ಲಾಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ದೇವದಾಶಿ ತಾಯಂದಿರಿಗೆ ಸಂಘಟನೆ ಅವಶ್ಯಕ. ಸಮಾಜದಲ್ಲಿ ಬದುಕನ್ನು ಕಟ್ಟಿ ಕೊಳ್ಳುವುದಕ್ಕೆ ಮತ್ತು ಹಾರ್ಥಿಕ ಸಾಮಾಜಿಕವಾಗಿ ಮುಂದುವರೆಲು ಸರ್ಕಾರ ಇವತ್ತು ಸಾಕಷ್ಟು ಯೋಜನೆ ಗಳನ್ನ ರೋಪಿಸಿದೆ. ಇವತ್ತಿನ ದಿನ ಸೌಲಭ್ಯಗಳನ್ನ ಪಡೆದುಕೊಳ್ಳಬೇಕಾದ್ರೆ ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕಾದ್ರೆ ನವೆಲ್ಲ ಒಂದಾಗಬೇಕು” ಎಂದರು.

ವಿಮುಕ್ತ ದೇವದಾಸಿ ಮಹಿಳಾ ವೇಧಿಕೆಯ ಜಿಲ್ಲಾ ಮುಖಂಡ ಅಭಿಷೇಕ ಕೊಪ್ಪದ ಮಾತನಾಡಿ” ಎಲ್ಲಾ ತಾಯಿಂದಿರಿಗೆ ಈ ಮೂಲಕ ಕೇಳಿವುದೇನೆಂದರೆ ನಾವು ಈಗಾಗಲೇ ಅನೇಕ ಹಿರಿಯ ಸಂಘಟಿತರ ಮಾರ್ಗದರ್ಶನದಲ್ಲಿ ಸಂಘಟನೆ ಕಟ್ಟುವ ನಿಟ್ಟಿನಲ್ಲಿದ್ದೇವೆ. ನಮ್ಮ ಉದ್ದೇಶ ನಮ್ಮ ದೇವದಾಶಿ ತಾಯಿಂದಿರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದಿಂದ ಭೂಮಿ ಮತ್ತು ಅನೇಕ ಸೌಲಭ್ಯಗಳನ್ನ ಪಡೆದುಕೊಳ್ಳಬೇಕು. ಪಡೆದುಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರೆಯುವ ಉದ್ದೇಶ ನಮ್ಮದು ” ಎಂದರು.

ಈ ಸಂದರ್ಭದಲ್ಲಿ ವಿಮುಕ್ತ ದೇವದಾಶಿ ತಾಯಿಂದಿರ ಗದಗ ಜಿಲ್ಲಾ ಮಟ್ಟದ ಪದಾಧಿಕಾರಿಳ ಪದಗ್ರಹಣ ಕಾರ್ಯಕ್ರಮ ಮತ್ತು ದೇವದಾಶಿ ತಾಯಿಂದಿರಿಗೆ ದೇವದಾಶಿ ದೃಡೀಕರಣ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಮೇಶ ನಂದಿ ಸೇರಿದಂತೆ ವಿಮುಕ್ತ ದೇವದಾಶಿ ತಾಯಿಂದಿರ ನೂತನ ಸಂಘಟನೆಯ ಪದಾಧಿಕಾರಿಗಳು ಮತ್ತು ದೇವದಾಶಿ ತಾಯಿಂದಿರು ಉಪಸ್ಥಿತರಿದ್ದರು

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...