ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು 5,205 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಮಳೆಯ ಅಭಾವ, ಹಸಿಯ ಕೊರತೆಯಿಂದ ಹಲವಾರು ಕೀಟ ಮತ್ತು ರೋಗಗಳು ತಗುಲಿವೆ. ಈ ಹಿನ್ನೆಲೆಯಲ್ಲಿ ರೈತರ ಮೆಣಸಿನಕಾಯಿ ಬೆಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಲಕ್ಷ್ಮೇಶ್ವರ ತಾಲೂಕಿನ ಎಳವತ್ತಿ, ಮಾಡಳ್ಳಿ, ಯಳವತ್ತಿ ಗ್ರಾಮಗಳ ಮೆಣಸಿನಕಾಯಿ ಕ್ಷೇತ್ರಗಳಿಗೆ ಭೇಟಿ ಶನಿವಾರ ನೀಡಿ ಪರಿಶೀಲಿಸಿದರು.
ಪ್ರಮುಖ ರಸ ಹೀರುವ ಕೀಟಗಳಾದ ಥ್ರಿಪ್ಸ್ ನುಸಿ, ಸಸ್ಯ ಹೇನು ಕಾಯಿಕೋಶ ಮುಂತಾದವುಗಳು ಪ್ರಮುಖ ರೋಗಗಳಾದ ಎಲೆ ಮುಟುಗು ರೋಗ, ಎಲೆ ಚುಕ್ಕಿ ರೋಗ, ಕಾಯಿ ಕೊರಕ, ಬೇರು ಕೊಳೆ ರೋಗ, ಮುಂತಾದ ರೋಗಗಳು ಕಂಡು ಬಂದವು. ತೀವ್ರ ತರಹದ ತೇವಾಂಶದ ಕೊರತೆ, ಸರಿಯಾದ ವೇಳೆಗೆ ಮಳೆಯಾಗದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
“ಮೆಣಸಿನಕಾಯಿ ಬೆಳೆದ ರೈತರು ಇವುಗಳ ನಿರ್ವಹಣೆಗಾಗಿ ಮುಂಜಾಗೃತೆ ಕೈಗೊಳ್ಳುವುದು ಅವಶ್ಯಕವಾಗಿದೆ. 3 ಗ್ರಾಂ ಡೈಯಾಮಿಥೋಕ್ಸಾಮ್ (ಅಕ್ಟರಾ), 10 ಗ್ರಾಂ ಪೆಗಾಸಿಸ್, 20 ಮಿ.ಲೀ ಬೇವಿನ ಎಣ್ಣೆಯನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಒಂದು ವಾರದ ನಂತರ 15 ಮಿ.ಲೀ ಬೆನೆಮಿಯಾ 10 ಗ್ರಾಂ ಸ್ಪೈರೋಮೆಸಿಪಿನ್ (ಓಜಿರಾನ್), 20 ಮಿ.ಲೀ ಬೇವಿನ ಎಣ್ಣೆಯೊಂದಿಗೆ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು 4ರಿಂದ 5 ದಿನಗಳ ನಳಿಕ 25 ಮಿ.ಲೀ ಡಿಕೋಫಾಲ್ 10 ಗ್ರಾಂ ಕಾರ್ಬನ್ ಡೈಜಿಂ, 20 ಮಿಲೀ ಬೇವಿನ ಎಣ್ಣೆಯೊಂದಿಗೆ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು” ಎಂದು ರೈತರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಮರ್ಪಕ ವಿದ್ಯುತ್, ನೀರು ಪೂರೈಕೆ ಮಾಡಿದರೆ ಸರ್ಕಾರವನ್ನು ನಾವೇ ಸಾಕುತ್ತೇವೆ: ರೈತ ಮುಖಂಡ
“ರಸ ಹೀರುವ ಕೀಟಗಳು, ಮುಟುಗು ರೋಗ ಕಂಡು ಬಂದಲ್ಲಿ 3 ಮಿಲೀ ಇಮಿಡಾಕ್ಲೋಪ್ರಿಡ್, 30 ಗ್ರಾಂ ನೀರಿನಲ್ಲಿ ಕರಗುವ ಗಂಧಕ, 20 ಮಿಲೀ ಬೇವಿನ ಎಣ್ಣೆಯಲ್ಲಿ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಪೋಷಕಾಂಶಗಳ ಕೊರತೆ ಇರುವುದರಿಂದ ಕೂಡಲೇ 50 ಗ್ರಾಂ ಲಘುಕೋಶಗಳ ಮಿಶ್ರಣ ಅಥವಾ ತರಕಾರಿ ಸ್ಪೇಶಲನ್ನು 10 ಲೀಟರ್ ನೀರಿನಲ್ಲಿ ಬೆರೆಸಿ 2ರಿಂದ 3 ಬಾರಿ, 15 ದಿನಗಳ ನಂತರದಲ್ಲಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ” ಎಂದು ಸುರೇಶ ಕುಂಬಾರ ಅವರು ತಿಳಿಸಿದ್ದಾರೆ.





