ಗದಗ | ಕಡ್ಡಾಯವಾಗಿ ದೇವದಾಸಿ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು ಬಸವರಾಜ

Date:

“ದೇವದಾಸಿ ಮಹಿಳೆಯರು, ಮಕ್ಕಳು, ಮರಿ ಮೊಮ್ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿಯಬಾರದು. ಸರಕಾರ ಮತ್ತೊಮ್ಮೆ ಸರ್ವೇ ಮಾಡುವುದಿಲ್ಲವೆಂದು ಸರಕಾರ ಹೇಳಿದೆ. ಹಾಗಾಗಿ ಇದೇ ತಿಂಗಳು 15ರಿಂದ ಸರ್ವೇ ಆರಂಭವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು” ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಧ್ಯಕ್ಷ ಯು ಬಸವರಾಜ ಹೇಳಿದರು.

ಗದಗ ಪಟ್ಟಣದ ನಗರಭೆ ಪಕ್ಕದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಾವೇಶದಲ್ಲಿ ವತಿಯಿಂದ ಸಭೆಯಲ್ಲಿ ಮಾತನಾಡಿದರು.

“ಈ ಹಿಂದೆ ದೇವದಾಸಿ ಪದ್ಧತಿಯನ್ನು ಅನಿಷ್ಟ  ಪದ್ಧತಿ ಎಂದು ಸರಕಾರ ಕರೆಯುತ್ತಿದೆ. ದೇವದಾಸಿ ಆದರೆ ಅವರನ್ನು ಜೈಲಿಗೆ ಹಾಕುತ್ತವೆಂದು ಕಾನೂನು ಹೇಳುತ್ತದೆ. ದೇವದಾಸಿ ನವಾಗಿಲ್ಲ, ಸಾಮಾಜಿಕ ವ್ಯವಸ್ಥೆ ದೇವದಾಸಿಯನ್ನಾಗಿ ಮಾಡಿ ದೌರ್ಜನ್ಯ ಎಸಗುತ್ತಿದೆ. ಚಂದ್ರಗುತ್ತಿ ದೇವಸ್ಥಾನದಲ್ಲಿ ಬೆತ್ತಲೆ ಸೇವೆ ಆಚರಣೆಗೆ ಈ ದೇವದಾಸಿ ಪದ್ಧತಿ ಉಳಿಸಿಕೊಂಡು ಬಂದಿದೆ. ಹರಪನಹಳ್ಳಿ ಒಂದರಲ್ಲಿ ದೇವದಾಸಿಯರು ಸಿಡಿಗಂಬವನ್ನು ಸುತ್ತುವರಿಸಬೇಕಿತ್ತು. ಹೀಗೆ ಮಾಡಿದರೆ ನಮ್ಮಗೆ ಒಳ್ಳೇದು ಆಗುತ್ತೆ ಎಂದು ದೇವದಾಸಿ ಪದ್ದತಿಯನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದುವರಿಸುತ್ತಾ ಬಂದಿದ್ದಾರೆ. ಇಂತಹವುಗಳನ್ನು ನಾವು ಸಂಘಟನೆ ಮೂಲಕ ವಿರೋಧಿಸಿ ತಡೆಗುಟ್ಟುತ್ತಾ ಬಂದಿದ್ದೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸರಕಾರ ದೇವದಾಸಿ ನಿಷೇದ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಅವರ ಹೆಣ್ಣು ಮಕ್ಕಳು ಮದುವೆ ಆದರೆ ಇನ್ನೂ ಅಪಮಾನ, ಅವಮಾನ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರು ಹೆಣ್ಣುಮಕ್ಕಳು ಮಕ್ಕಳಿಗೂ ದೇವದಾಸಿ ಸೌಲಭ್ಯಗಳು ದೊರೆಯಬೇಕು” ಎಂದರು.

“ದೇವದಾಸಿ ಮಹಿಕೆಯರಿಗೆ ಅಷ್ಟೇ ಅಲ್ಲ, ಅವರ ಮಕ್ಕಳಿಗೂ ದೌರ್ಜನ್ಯ ಎಸಗುತ್ತಿದ್ದಾರೆ. ಇದರ ವಿರುದ್ಧ ಕಾನೂನು ತಿದ್ದುಪಡಿ ಆಗಬೇಕು. ತಂದೆಯಾದ ಆಸ್ತಿಯಲ್ಲಿ ಪಾಲು ಸಿಗಬೇಕು” ಎಂದು ಕಾಯ್ದೆಯಲ್ಲಿ ಹೇಳುತ್ತದೆ ಎಂದರು.

“ದೇವದಾಸಿ ಮಕ್ಕಳು ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ಮದುವೆ ಆದ ಹೆಣ್ಣುಮಕ್ಕಳು ದೇವದಾಸಿ ಮುಂದುವರೆಸುತ್ತಿದ್ದಾರೆ. ದೇವದಾಸಿ ಹೆಣ್ಣುಮಕ್ಕಳಿಗೂ ಸೌಲಭ್ಯಗಳು ಸರಕಾರ ಕೊಡಬೇಕು” ಎಂದರು.  

“ನಿರಂತರ ಹೋರಾಟ, ಚಳುವಳಿಗಳನ್ನು ಮಾಡಿದ್ದರ ಪರಿಣಾಮ ದೇವದಾಸಿ ಮಗಳು, ದೇವದಾಸಿ ಮಗ ಮದುವೆ ಆದರೆ ಸರಕಾರದಿಂದ ಎಂಟು ಲಕ್ಷ ಕೊಡುತ್ತದೆ” ಎಂದು ಹೇಳಿದೆ ಎಂದರು.

“ಮೂರು ತಲೆಮಾರಿನ ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಆಗ ಸರಕಾರದಿಂದ ಜಮೀನು, ಜಾಗ, ಪುನರ್ವಸತಿ, ಉದ್ಯೋಗ, ಸಾಲ ಸೌಲಭ್ಯ, ಪರಿಹಾರ ಪಡೆಯಲು ಅನುಕೂಲ ಆಗುತ್ತದೆ”  ಎಂದು ಹೇಳಿದರು.

“ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ ಪ್ರಸ್ತಾವಿಕ ಮಾತನಾಡಿ, “ದೇವದಾಸಿ ಕುಟುಂಬಕ್ಕೆ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಸರಕಾರದ ಮೇಲೆ ಹೋರಾಟದ ಮೂಲಕ ಮತ್ತೆ ಮತ್ತೆ ಒತ್ತಡ ಹೇರವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ದೇವದಾಸಿಯ ಹೆಣ್ಣುಮಕ್ಕಳ ಮಕ್ಕಳು, ಮಗ, ಮಗಳು, ಮರಿಮಕ್ಕಳು ಎಲ್ಲರನ್ನು ಸಮೀಕ್ಷೆ ಮಾಡಿಸಬೇಕು. ಸಮೀಕ್ಷೆಯಲ್ಲಿ ಎಲ್ಲರ ಹೆಸರನ್ನು ಕಡ್ಡಾಯವಾಗಿ ದಾಖಲಿಸಬೇಕು” ಎಂದು ಹೇಳಿದರು.

ಸಮಾವೇಶದಲ್ಲಿ ಸಂಯೋಜನೆ ಸಂಘಟನಾ ಅಧಿಕಾರಿ ನಾಗರತ್ನಾ, ಸಮೀರ ಗಾಡಿವಾಲೆ, ಪ್ರದೀಪ ಬಾರಕೇರ, ಮುಖಂಡರು ಫಕೀರಮ್ಮ ಪೂಜಾರ, ಅಡಿವ್ವಮ್ಮ ಹರಿಜನ, ಮಲ್ಲಿಕಾರ್ಜುನ ಮಾದರ, ಶರಣಪ್ಪ ಲಕ್ಕಲಕಟ್ಟಿ, ಪಡಿಯಪ್ಪ ಮಾದರ, ರಮೇಶ ಮಾದರ, ಶಿದ್ದು ಪೂಜಾರ,  ದಂಡಮ್ಮ ಮಾದರ, ಕಲ್ಲವ್ವ ಮಾದರ, ಶಿವವ್ವ ಹರಿಜನ, ಕೆಂಚವ್ವ ಹಳ್ಳಿಕೇರಿ, ಗಣೇಶ ರಾಠೋಡ ಹಾಗೂ ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...