“ಭಾರತದ ಮಹಾನ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾನ್ ಸಮಾಜ ಸೇವಕ ಬಾಪೂಜಿ ಜಗಜೀವನ್ ರಾವ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಾರ್ವಜನಿಕ ದೇಣಿಗೆ ಮೂಲಕ ನಿರ್ಮಾಣ ಮಾಡಲಾಗುವುದು” ಎಂದು ಸರ್ವ ಜನಾಂಗದ ಸಂಘ ಸಂಸ್ಥೆಗಳ ಸಭೆಯಲ್ಲಿ ತಿರ್ಮಾನಿಸಲಾಯಿತು.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರ್ವ ಜನಾಂಗದ ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ “ಸಾರ್ವಜನಿಕರಿಂದ ಸಹಕಾರ ಪಡೆಯುವ ಉದ್ದೇಶದಿಂದ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಲು ಪುಸ್ತಕಗಳನ್ನು (ರಶೀದಿ ಬುಕ್) ಬಿಡುಗಡೆ ಮಾಡಲಾಗಿದೆ”
ಈ ಕಾರ್ಯವು ಸಮಾಜದ ಏಕತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು, ಎಲ್ಲಾ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಣಿಗೆ ನೀಡುವ ಮೂಲಕ ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸುವಂತೆ ಸರ್ವ ಜನಾಂಗದ ಸಂಘ ಸಂಸ್ಥೆಗಳು ಮನವಿ ಮಾಡಿದವು.
“ದೇಣಿಗೆ ಸಂಗ್ರಹ ಕಾರ್ಯವನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಸಂಗ್ರಹಿಸಲಾದ ಮೊತ್ತವನ್ನು ಮೂರ್ತಿ ನಿರ್ಮಾಣ ಮತ್ತು ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಬಳಸಲಾಗುತ್ತದೆ. ಸಾರ್ವಜನಿಕರು ಈ ಮಹತ್ವದ ಸಾಮಾಜಿಕ ಕಾರ್ಯಕ್ಕೆ ಸಹಕಾರ ನೀಡಬೇಕು” ಎಂದು ಸಭೆಯ ಚರ್ಚಿಸಲಾಯಿತು.
ಸಭೆಯಲ್ಲಿ ಹಿರಿಯರು ರವಿಕುಮಾರ್ ಚಿಂತಾಲ ಮೋದಿನ ಸಾಬ್ ಮುಳುಗುಂದ, ಕಿರಣ ಜೋಗಣ್ಣವರ, ಮೈಲಾರಪ್ಪ ಹಳೆಮನೆ, ಲಕ್ಷ್ಮಪ್ಪ ಮ್ಯಾಗೇರಿ, ಈರಪ್ಪ ಮ್ಯಾಗೇರಿ, ಮುತ್ತು ಸುರಕೋಡ್, ಹೊರೆಕೇರಿ ಗ್ರಾಮದ ವೆಂಕಟೇಶ್ ಕಾನ್ ಪೇಟ್, ಫಾರೂಕ್ ಮಜ್ಜಿದ್ಮನಿ, ಮಂಜುನಾಥ್ ಕಟ್ಟಿಮನಿ, ದತ್ತು ಜೋಗಣ್ಣವರ್, ಗುರುನಾಥ್ ಕೆಂಗಾರ್ಕರ್, ಇಬ್ರಾಹಿಂ ಸವಟಿಗಿ, ಪ್ರಶಾಂತ್ ತಡಿಸಿ, ಅಣ್ಣಪ್ಪ ಅರಕೇರಿ ಇನ್ನೂ ಅನೇಕರು ಉಪಸ್ಥಿತರಿದ್ದರು.





