ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ವತಿಯಿಂದ ಗದಗ ಜಿಲ್ಲೆಯ ನರಗುಂದ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 3ರಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಮಕ್ಕಳಿಗೆ ನೋಟ ಬುಕ್ ಮತ್ತು ಪೆನ್ ನೀಡುವುದರ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಸಂಚಾಲಕರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ನಮ್ಮ ದೇಶದ ಮಹಾನ್ ನಾಯಕ ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಚೇತನ. ಮಹಿಳಾ ಸಮಾನತೆಯ ಹರಿಕಾರ.
“ಮೇರು ವ್ಯಕ್ತಿತ್ವದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69 ನೇ ಮಹಾಪರಿನಿರ್ವಾಣ ದಿನದಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತೇವೆ. ಅವರಿಗೆ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ” ಎಂದರು.
“ಬಡತನ ಹಾಗೂ ಅಸ್ಪೃಶ್ಯತೆ ನಡುವೆ ಬೆಳೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ನಮ್ಮ ದೇಶದ ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿ ರೂಪಗೊಂಡಿದ್ದಾರೆ. ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದರು.
“ದೇಶದ ನಾಗರಿಕರಲ್ಲಿ ಮೇಲು ಕೀಳೆನ್ನದೇ ಎಲ್ಲರೂ, ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರು. ನಮ್ಮ ಹೆಮ್ಮೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು
ನಮ್ಮ ದೇಶದಲ್ಲಿನ ಅಸಮಾನತೆಯನ್ನು ಹೊಡೆದೊಡಿಸಿ, ಸಾಮಾಜಿಕ ಸಮಾನತೆಯನ್ನು ಜಾರಿಗೊಳಿಸುವ ಮೂಲಕ ನಮ್ಮೆಲ್ಲರಲ್ಲಿ ಸ್ಪೂರ್ತಿ ತುಂಬಿದ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ” ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮಂಜುನಾಥ ಮೆಣಸಿನಕಾಯಿ, ಪುರಸಭೆ ಉಪಾಧ್ಯಕ್ಷರು ಬಸನಗೌಡ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ನಬಿಸಾಬಾ ಕಿಲ್ಲದಾರ, ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರು ವಿಜಯ ಬಡಿಗೇರ, ದಲಿತ ಯುವ ಮುಖಂಡರು ಪುನೀತ್ ಜೋಗಣ್ಣವರ, ದತ್ತಾತ್ರೇಯ ಹಿರೇಕೋಪ್ಪ, ಕಿರಣ ಜೋಗಣ್ಣವರ, ವಿಕ್ರಮ್ ಹೊನ್ನಕೇರಿ, ಕುಮಾರ್ ಜೋಗಣ್ಣವರ, ಉಮೇಶ್ ಕಾಳೆ, ಖಾಜು ಕೀಲೆದಾರ ಯುವ ರೈತ ಮುಖಂಡರು ನವೀನ ಜೋಗಣ್ಣವರ, ಬಸುರಾಜ ಜೋಗಣ್ಣವರ,ನಜೀರ ಕೀಲೆದಾರ, ಗುರು ಕೆಂಗಾರಕರ್, ಶಾಲಾ ಮುಖ್ಯೋಪಾಧ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಇದ್ದರು.
ವರದಿ: ಗುರುನಾಥ ಕೆಂಗಾರಕರ ಸಿಟಿಜನ್ ಜರ್ನಲಿಸ್ಟ್ ನರಗುಂದ





