“ತತ್ವಜ್ಞಾನಿ, ಶ್ರೇಷ್ಠ ಶಿಕ್ಷಕ, ರಾಷ್ಟಪತಿಯಾಗಿ ಡಾ. ರಾಧಾಕೃಷ್ಣನ್‌ರವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿಯಾಗಿದೆ” ಎಂದು ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಅವರು ಅಭಿಪ್ರಾಯ ಪಟ್ಟರು.
ಗದಗ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಅವರ ಶಿಸ್ತು ಶ್ರದ್ದೆಯಿಂದ ಕಾರ್ಯ ನಿರ್ವಹಿಸಿ, ಉನ್ನತಮಟ್ಟ ತಲುಪಿದರು. ಅವರಂತೆ ನಾವೆಲ್ಲರೂ ಸಹ ಶ್ರದ್ಧೆ ಪ್ರಾಮಾಣಿಕತೆ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು” ಎಂದರು.
“ಬಹಳ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮಾಡ್ತಿದ್ದೇವೆ. ರಾಧಾಕೃಷ್ಣನ್‌ರವರ ಅವರಿಗೆ ಶಿಕ್ಷಕರ ಮೇಲೆ ಅಪಾರ ಪ್ರೀತಿ ಗೌರವ ಇದ್ದುದರಿಂದ ತಮ್ಮ ದಿನಾಚರಣೆ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದರು” ಎಂದರು.
“ಪ್ರಾನ್ಸ್ ದೇಶದ ಕೋಟರ್ನಲ್ಲಿ ಶಿಕ್ಷಕರ ಹೇಳಿಕೆ ವಿಚಾರಣೆಯನ್ನು ಗೌರವಯುತವಾಗಿ ಕುರಿಸಿ ವಿಚಾರಣೆ ಮಾಡುತ್ತಾರೆ. ಅಂದರೆ ಪ್ರಾನ್ಸ್ ದೇಶದಲ್ಲಿ ಗುರುಗಳಿಗೆ ಉನ್ನತಮಟ್ಟದ ಗೌರವಯುತ ಸ್ಥಾನ ನೀಡಿದ್ದಾರೆ ಎಂದು ವಿವಿಧ ದೇಶಗಳಲ್ಲಿ ಶಿಕ್ಷಕರಿಗೆ ನೀಡುವ ಗೌರವಗಳ ಕುರಿತು” ಎಂದು ವಿವರಿಸಿದರು.
“ದೇಶದ ಭವಿಷ್ಯ ನಾಲ್ಕು ಕೊಟಡಿಗಳ ಒಳಗೆ ನಿರ್ಮಾಣ ಆಗುತ್ತದೆ. ತಾಯಿ ಮಗುವಿಗೆ ಜನ್ಮ ನಿಡುತ್ತಾಳೆ, ಆ ಮಗುವಿನ ಜೀವನ ಉನ್ನತ ಗುಣಮಟ್ಟದಲ್ಲಿ ಸಾಗಲು ಶಿಕ್ಷಕರ ಶ್ರಮ ನಿರಂತರವಾಗಿ ಅಡಗಿರುತ್ತದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ಹಲವು ಪ್ರಯತ್ನ ಮಾಡಬೇಕು” ಎಂದು ಹೇಳಿದರು.
ಹೆಚ್ಚು ಜ್ಞಾನ ಸಂಪಾದಿಸದ ಶಿಕ್ಷಕ ಮಕ್ಕಳ ಮೇಲೆ ಕಲಿಯುವದಿಲ್ಲ ಎಂದು ದೂರುತ್ತಾನೆ. ಉತ್ತಮ ಶಿಕ್ಷಕನಾದವನು ಪಾಠ ಆರಂಬಕ್ಕೂ ಮೊದಲು ಕಲಿಸುವ ವಿಷಯದ ಮೇಲೆ ಆಸಕ್ತಿ ಕರ ವಿಷಯದಿಂದ ಪಾಠದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ ನಂತರ ಪಾಠ ಆರಂಭ ಮಾಡುತ್ತಾರೆ. ಶಿಕ್ಷಕರಾದವರಿಗೆ ಜ್ಞಾನ ಸಂಪತ್ತು ಅಧಿಕವಾಗಿರಬೇಕು” ಎಂದರು.
“ಕೊಟಾರಿ ಕಮಿಷನ್ ಪ್ರಕಾರ ತ್ರಿಬಾಷಾ ಸೂತ್ರ ಇರಬೇಕು ಎಂಬ ನಿಯಮವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಯಾವಾಗಲು ಹೇಳುವುದು ತ್ರಿಬಾಷಾ ಸೂತ್ರ ಇರಲಿ ಎಂದು. ಇಷ್ಟೇಲ್ಲಾ ಇರುವಾಗ ರಾಜ್ಯದಲ್ಲಿ ದ್ವಿಬಾಷಾ ಸೂತ್ರ ಬೇಕಾ? ಎಂದರು. ಉತ್ತರ ಭಾರತದಲ್ಲಿ ಹೋಗಿ ಕೆಲಸ ಮಾಡಲು, ವ್ಯವಹರಿಸಲು ಹಿಂದಿ ಅಗತ್ಯವಾಗಿದೆ. ದ್ವಿಬಾಷಾ ಸೂತ್ರ ಜಾರಿ ತರುವ ನಿರ್ದಾರವನ್ನು ಮರುಪರಿಶೀಲಿಸಬೇಕು” ಎಂದು ಶಾಸಕ ಎಸ್. ವಿ.ಸಂಕನೂರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ : ಚಿನ್ನದ ಸರ ಕಳ್ಳತನ ಆರೋಪಿ ಬಂಧನ
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್ ಎನ್ ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ ಆರ್, ಜಿಪಂ ಉಪಕಾರ್ಯರ್ಶಿ ಸಿ ಆರ್ ಮುಂಡರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಡಯಟ್‌ದ ಉಪನಿರ್ದೇಶಕರಾದ ( ಅಭಿವೃದ್ಧಿ) ಮಂಗಳಾ ತಾಪಸ್ಕರ್ , ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಸಿ ಕೊರವನವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಗದಗ ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟೆಪ್ಪನವರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.





