ಗದಗ | ವಯೋಸಹಜ ಕಾಯಿಲೆಯಿಂದ ವೃದ್ಧ ಸಾವು : ಸರ್ವಧರ್ಮದ ಯುವಕರಿಂದ ಅಂತ್ಯ ಸಂಸ್ಕಾರ

Date:

ಗದಗ ಜಿಲ್ಲೆಯ ನರಗುಂದ ಪಟ್ಟಣದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿ ವಯೋಸಹಜ ಕಾಯಿಲೆಯಿಂದ ಮುಸ್ಲಿಂ ಧರ್ಮಕ್ಕೆ ಸೇರಿದ ವೃದ್ಧ ಸಾವನಪ್ಪಿದ್ದು, ಎಲ್ಲ ಧರ್ಮದವರು ಸೇರಿ ಅವರ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ದಲಿತ ಮುಖಂಡರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಮಾನವ ಧರ್ಮ ಶ್ರೇಷ್ಠ, ಮಾನವನಿಗೆ ಮಾನವನ ಸಹಾಯ ಹಸ್ತವನ್ನು ನೀಡಬಲ್ಲ. ಮಾನವನನ್ನು ಜಾತಿ ಧರ್ಮಗಳಿಂದ ಅಳಿಯಬಾರದು. ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ನಾವು ಇವತ್ತಿನ ದಿನಮಾನದಲ್ಲಿ ಜಾತಿ ಧರ್ಮ ಮೇಲು ಕೇಳು ಎಂದು ಹೊಡೆದಾಡಕ್ಕೊಂದು ಜೀವನ ಸಾಗಿಸುತ್ತಿದ್ದೇವೆ.  ಇವೆಲ್ಲವನ್ನು ತೊರೆದು ಮಾನವ ಕುಲವು ಒಂದೇ ಎಲ್ಲ ಜಾತಿ ಧರ್ಮಗಳು ಒಂದೇ ಎಂಬುವುದನ್ನು ಅರಿತುಕೊಂಡು ಜೀವನ ನಡೆಸಬೇಕು. ಎಂದರು.

“ಯಾವುದೇ ಧರ್ಮದಲ್ಲಿ ಅಥವಾ ಜಾತಿಯಲ್ಲಾಗಲಿ ಹಿಂಸೆ ಮತ್ತು ಕೆಟ್ಟ ಕಾರ್ಯಗಳಿಗೆ ಅವಕಾಶ ನೀಡಿಲ್ಲ. ಇಂತಹ ವಿಚಾರಗಳನ್ನು ನಾವೆಲ್ಲರೂ ಜೀವನದಲ್ಲಿ ತೆಗೆದುಕೊಂಡು ಜೀವನ ನಡೆಸಬೇಕು. ವೃದ್ಧಾಶ್ರಮಗಳಲ್ಲಿ ಕುಟುಂಬದಿಂದ ದೂರ ಉಳಿದ ಎಷ್ಟು ವೃದ್ಧರು ಜಾತಿ ಧರ್ಮದ ಬಗ್ಗೆ ಅರಿವೇ ಇಲ್ಲದೆ ಜೀವನವನ್ನು ನಟಿಸುತ್ತಿದ್ದಾರೆ.  ಆದರೆ ಇವತ್ತು ಯುವ ಸಮೂಹ ಜಾತಿ ಧರ್ಮದ ಗೀಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳುದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮ ಸಂಸ್ಥೆಯ ಅಧ್ಯಕ್ಷರು ಶಶಿಕುಮಾರ್ ಮಾತನಾಡಿ, “ಇವತ್ತಿನ ದಿನಗಳಲ್ಲಿ ವೃದ್ಧಾಶ್ರಮದಲ್ಲಿ ಯಾವುದೇ ಜಾತಿ ಲಿಂಗಬೇದ ಭಾವ ಇಲ್ಲದೆ ಹಿರಿಯರ ಜೀವನ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ಜಾತಿ ಧರ್ಮ ಎಂದು ಬಡದಾಡಿಕೊಂಡು ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರೊಟ್ಟಿಗೆ ಇವತ್ತಿಗೆ ಹಿರಿಯರ ಬಗೆಗಿನ ಕಾಳಜಿ, ಗೌರವ ನಶಿಸಿಹೋಗಿ, ಹಿರಿಯರನ್ನು ವೃದ್ಧಾಶ್ರಮದತ್ತ ನೂಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ

ಅಂತ್ಯ ಸಂಸ್ಕಾರದಲ್ಲಿ ನಗರದ ಸರ್ವಧರ್ಮದ ಯುವಕರು ಅಭಿಷೇಕ್ ಹಡಪದ, ಜಹಾಂಗೀರಖಾನ ಪಠಾಣ,ಎಂ. ಎಚ್ ಧಾರವಾಡ, ಹಯಾಜ ಪಠಾಣ, ದಾವೂದ ಪಠಾಣ, ಸಲೀಮ್ ಬಿಜಾಲಿಖಾನ, ಜಮಾಲ್ಬೇಗ್ ಮುಲ್ಲಾ, ಮಾಜಿದ್ ಮುಲ್ಲಾ, ರಿಯಾಜ್ ಲೋಧಿ, ನವೀನ್ ಜೋಗಣ್ಣವರ, ಬಸು ಜೋಗಣ್ಣವರ, ಕುಮಾರ್ ಮೊರೆ, ಮುಬಾರಕ್ ಪರಾಸ, ನಾಗರಾಜ್ ಕಡೆಮನಿ,ಖಾಜು ಕಿಲ್ಲೆದಾರ, ದಾವಲ ರಾಜೇಖಾನ, ಶಿವು ದೊಡ್ಡಮನಿ, ಶಾರುಖ ಪಠಾಣ, ಆಶಿಫ ಪಠಾಣ, ಆಶೀಪ, ಮಾರುತಿ ಗುಡಿಯನ್ನವರ, ಮೌಲಾ ಕಾಶಿಮ್ ಖಲೀಫ, ಇಸ್ಮಾಯಿಲ್ ಜಮಾದಾರ, ಸಮೀರ್ ಸಕಲಿ, ಇನ್ನೂ ಅನೇಕ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...