ಗದಗ | ಸತ್ತರ ಹೂಳಲು ಸುಡುಗಾಡಿಗಿಲ್ಲ ದಾರಿ; ಜಮೀನುಗಳಿಗೆ ಹೋಗಲು ರೈತರ ಪರದಾಟ

Date:

ಊರಲ್ಲಿ ಯಾರಾದ್ರೂ ಸತ್ತರೆ ಅವರನ್ನು ಹೂಳಲು, ಸುಡಲು ಸುಡುಗಾಡಿಗೆ ದಾರಿ ಇಲ್ಲ. ರೈತರಿಗೆ ಸುಡುಗಾಡು ದಾರಿ ಮೂಲಕ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲ. ಸ್ಮಶಾನಕ್ಕೆ, ಜಮೀನಿಗೆ ಹೋಗಲು ರೈತರು, ಗ್ರಾಮಸ್ಥರು ಪರದಾಡುತ್ತಿದ್ದಾರೆ – ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ಜನರ ಪರಿಸ್ಥಿತಿ.

ಗ್ರಾಮದ ರೈತರು ಜಮೀನಿಗೆ ಮತ್ತು ಸ್ಮಶಾನಕ್ಕೆ ಹೋಗಲು ಸರ್ವೇ ನಂಬರ್ 112 ಹಾಗೂ ಸರ್ವೇ ನಂಬರ್ 1ರಲ್ಲಿರುವ ಜಮೀನುಗಳ ನಡುವೆ ಇದ್ದ ದಾರಿಯನ್ನು ಬಳಸುತ್ತಿದ್ದರು. ಹಲವಾರು ವರ್ಷಗಳಿಂದ ಎಲ್ಲರಿಗೂ ದಾರಿ ಮುಕ್ತವಾಗಿತ್ತು. ಇದೇ ದಾರಿಯನ್ನು ಇಡೀ ಗ್ರಾಮದ ಜನರು ಬಳಸುತ್ತಿದ್ದರು.

ಆದರೆ, ಇತ್ತೀಚೆಗೆ, ಆ ಜಮೀನಿನ ಮಾಲೀಕರು 7 ಅಡಿ, 6 ಇಂಚು ಅಳೆಯ ದಾರಿ ಬಿಟ್ಟು, ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಈ ಕಿರಿದಾದ ದಾರಿಯಲ್ಲಿ ಗ್ರಾಮಸ್ಥರು ಮೃಹದೇಹವನ್ನು ಹೊತ್ತುಕೊಂಡು ಹೊಗಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಎತ್ತಿನ ಗಾಡಿಗಳಲ್ಲಿ ಜಮೀನಿಗೆ ಹೋಗಲೂ ಸಾಗುತ್ತಿಲ್ಲ. ಸರಿಯಾದ ದಾರಿ ಇಲ್ಲದೆ, ಗ್ರಾಮದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸುಡುಗಾಡು ದಾರಿಯಲ್ಲಿ ಊರಿನ ಸಾಕಷ್ಟು ರೈತರ ಜಮೀನುಗಳಿವೆ. ಸುಮಾರು ವರ್ಷಗಳಿಂದ ರೈತರು ಇದೆ ದಾರಿಯಲ್ಲಿ ಜಮೀನುಗಳಿಗೆ ಹೋಗುತ್ತಿದ್ದರು. ಆದರೆ, ಹುಬ್ಬಳ್ಳಿಯವರು ಗ್ರಾಮದಲ್ಲಿ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ದಾರಿಯನ್ನೂ ಸೇರಿಸಿ ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲು, ಸುಡುಗಾಡು ಗಟ್ಟಿಗೆ ಹೋಗಲು ದಾರಿ ಬಿಡುತ್ತಿಲ್ಲ” ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

“ಊರಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಹೂಳಲು ಗ್ರಾಮದ ಜನರು ಇದೇ ದಾರಿ ಮೂಲಕ ಸುಡುಗಾಡು ಗಟ್ಟಿಗೆ ಹೋಗುತ್ತಿದ್ದರು. ಆದರೆ, ಈಗ ದಾರಿ ಇಲ್ಲದೆ, ಸ್ಮಶಾನಕ್ಕೆ ಹೋಗುವುದೂ ಕಷ್ಟವಾಗಿದೆ. ಹಲವಾರು ಜಮೀನುಗಳನ್ನು ಬಳಸಿಕೊಂಡು ಸ್ಮಶಾನಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥ ಅಮರಪ್ಪ ಗುಡುಗುಂಟಿ ಈದಿನ.ಕಾಮ್‌ ಜೊತೆ ಮಾತನಾಡಿ, “ಬಹಳ ಹಿಂದಿನಿಂದಲೂ ಸುಡಗಾಡ ದಾರಿಯಲ್ಲಿಯೇ ಹೊಲಗಳಿಗೆ ಹೋಗಿ ಬದುಕು ನಡಿಸುತ್ತಿದ್ದೆವು. ಯಾರೋ ಹುಬ್ಬಳ್ಳಿಯವರಂತೆ ಹೊಲ ಖರೀದಿಸಿ, ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಸುಡುಗಾಡ ಗಟ್ಟಿಗೆ ಮತ್ತು ಹೊಲಕ್ಕೆ ಹೋಗಲು ದಾರಿ ಬಿಡುತ್ತಿಲ್ಲ. ನಮಗೆ ದಾರಿ ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಕೊಟ್ಟು ಸಾಕಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ರೈತ ಸಂಘದ ಅಧ್ಯಕ್ಷರಾದ ಸುರೇಶಪ್ಪ ಬಾಗಲದ ಮಾತನಾಡಿ, “ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲಿಕ್ಕೆ ಇದೇ ದಾರಿ ಬಳಸುತ್ತಿದ್ದರು. ಆದರೆ, ಈಗ ರೈತರು ಬೆಳೆದ ಫಸಲನ್ನು ಹೊಲದಿಂದ ಮನೆಗೆ ತರಲು ಆಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದ್ದ ಲಕ್ಷ್ಮೇಶ್ವರ ತಹಶೀಲ್ದಾರ್ ವಾಸುದೇವ ಸ್ವಾಮಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, “ನಕಾಶೆಯಲ್ಲಿ ಇರುವಂತೆ ಗ್ರಾಮದ ಜನರಿಗೆ ದಾರಿಯನ್ನು ಒದಗಿಸುತ್ತೇವೆ. ಅಲ್ಲಿಯವರೆಗೆ ಇದೇ ದಾರಿಯನ್ನು ಉಪಯೋಗಿಸಬಹುದು” ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮಲ್ಲೇಶ್ ಮಣ್ಣಮ್ಮನವರ
ಮಲ್ಲೇಶ್ ಮಣ್ಣಮ್ಮನವರ
ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...