ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಆಸ್ಪತ್ರೆ ಗದಗ, ಸ್ಮೈಲ್ ಫೌಂಡೇಶನ್ ಗದಗ, ಅಂಬಿಕಾ ಬ್ಲಡ್ ಬ್ಯಾಂಕ್ ಗದಗ ಹಾಗೂ ದೊಡ್ಡೂರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗತ್ತು.
ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಿಯಾಜ ಖತೀಬ್ ಮಾತನಾಡಿ ಆರೋಗ್ಯವೇ ಭಾಗ್ಯ, ಭಾಗ್ಯವಂತರಾಗಲು ಆರೋಗ್ಯ ಮುಖ್ಯ ,ಆರೋಗ್ಯವಂತ ಗ್ರಾಮೀಣ ಸಮಾಜ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.
ನಂತರದಲ್ಲಿ ಮಾತನಾಡಿದ ಡಾ: ವೆಂಕಟೇಶ್ ರಾಥೋಡ್ ಅವರು ಇಂದಿನ ಅಧುನಿಕ ದಿನಮಾನದಲ್ಲಿ ಯಾರು ಆರೋಗ್ಯದ ಬಗ್ಗೆ ಖಾಳಜಿ ತಗೆದುಕೊಳ್ಳುತ್ತಿಲ್ಲಾ, ಅತಿಯಾದ ಒತ್ತಡದಿಂದ ಬದುಕು ಸಾಗಿಸುತ್ತಿದ್ದಾರೆ, ಇದರಿಂದ ಬಿಪಿ, ಶುಗರ್ ಬರುತ್ತದೆ, ಆದ್ದರಿಂದ ಅದಷ್ಟು ಒತ್ತಡ ರಹಿತ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ” ಎಂದರು
ಈ ಶಿಬಿರದಲ್ಲಿ ಚಿಕ್ಕ ಮಕ್ಕಳ ತಜ್ಞರಾದ ಡಾ. ವೆಂಕಟೇಶ್ ರಾಠೋಡ, ಸ್ತ್ರೀರೋಗ ತಜ್ಞರಾದ ಡಾ. ಸುನಿತಾ, ಹೃದಯರೋಗ ಹಾಗೂ ಮಧುಮೇಹ ತಜ್ಞರಾದ ಡಾ. ಸುನಿಲ್ ಹಬೀಬ, ಹಾಗು ಡಾ. ರವಿ ಕಡಗಾವಿ ಅವರು ಭಾಗವಹಿಸಿ ಗ್ರಾಮಸ್ಥರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಸಲಹೆಗಳನ್ನು ನೀಡಿದರು. ಮಕ್ಕಳ ಆರೋಗ್ಯ, ಮಹಿಳೆಯರ ಆರೋಗ್ಯ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಮಧುಮೇಹ ಕುರಿತು ಸಮಗ್ರ ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಯ್ಯ ಗುರವಿನರವರು ಕಾರ್ಯಕ್ರಮದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಎನ್.ಎಚ್. ಹಡಪದರವರು, ಶ್ರೀ ಗುಡ್ಡಪ್ಪ ಹಡಪದರವರು, ಶ್ರೀ ಅಮರಪ್ಪ ಗುಡಗುಂಟಿರವರು, ಶ್ರೀ ರವಿ ಭಜಕ್ಕನವರು, ಮಲ್ಲೇಶ ಮಣ್ಣಮ್ಮನವರ ಸೇರಿದಂತೆ ಅನೇಕ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀ ಕೃಷ್ಣಾ ಲಮಾಣಿ, ಶ್ರೀ ನಾನಪ್ಪ ಲಮಾಣಿ, ಶ್ರೀ ಶಂಕ್ರಣ್ಣ ಲಮಾಣಿ, ಶ್ರೀ ನಿಂಗಪ್ಪ ಬಂಕಾಪೂರ, ಶ್ರೀ ಫಕ್ಕೀರಗೌಡ್ರ ಭರಮಗೌಡ್ರ ಉಪಸ್ಥಿತರಿದ್ದರು.
ವರದಿ: ಮಲ್ಲೇಶ ಮಣ್ಣಮ್ಮನವರ





