ಗದಗ | ಮುಖ್ಯದ್ವಾರದ ರಸ್ತೆಗೆ ಮಾಜಿ ಶಾಸಕ ಮುತ್ತಿನಪೆಂಡಿಮಠ ನಾಮಕರಣ‌

Date:

ಗದಗ ನಗರದ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಹೋಗುವ ಮುಖ್ಯದ್ವಾರದಲ್ಲಿ ರಸ್ತೆಗೆ ಮಾಜಿ ಶಾಸಕ ಸಿ ಎಸ್ ಮುತ್ತಿನಪೆಂಡಿಮಠ ಹೆಸರನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟಿಲ್‌ ನಾಮಕರಣ ಮಾಡಿದರು.

“ಅತ್ಯಂತ ಮುಖ್ಯ ಸುಂದರ ರಸ್ತೆಗೆ ನಾಮಕರಣ ಆಗಿರೋದು ಎಲ್ಲರಿಗೂ ಸಂತೋಷ ತಂದಿದೆ. ಮಾಜಿ ಶಾಸಕ ಸಿ ಎಸ್ ಮುತ್ತಿನಪೆಂಡಿಮಠ ಅವರ ರಾಜಕೀಯ ಜೀವನ ನಂತರದ ಒಡನಾಟ ಬಾಂಧವ್ಯ ಅನ್ಯೋನ್ಯವಾಗಿತ್ತು. ಅವರೊಂದಿಗೆ ಡಿ ಎರ್ ಪಾಟೀಲ ಒಡನಾಟ ಸ್ನೇಹ ಸಂಬಂಧ ತುಂಬಾ ಚೆನ್ನಾಗಿತ್ತು. ಮುತ್ತಿನಪೆಂಡಿಮಠ ಅವರ ಸ್ನೇಹಿತರನ್ನು ನಾನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದೆ. ಅವರ ತತ್ವ ಸಿದ್ದಾಂತ ಮೆಚ್ಚುವಂತಹವು. ಅವರು ನಮ್ಮ ಹಿತೈಷಿಗಳು ಎಂಬುದು ಸಂತೋಷ ಎನಿಸಿತು” ಎಂದು ಸಚಿವ ಎಚ್ ಕೆ ಪಾಟಿಲ್‌ ಹೇಳಿದರು.

ರಾಜಕಾರಣದಲ್ಲಿ ಸಕ್ರಿಯವಾಗಿ ಸ್ವಲ್ಪದಿನ ಇದ್ದರೂ ಸಹ ಬಹಳಷ್ಟು ಜನರನ್ನು ಗಳಿಸಿಕೊಂಡಿದ್ದರು. ಅನೇಕ ಆತ್ಮೀಯ ಗೆಳೆಯರನ್ನು ಸಂಪಾದಿಸಿದ್ದರು. ಅವರದ್ದು ಸ್ನೇಹಪರ ಬದುಕಾಗಿತ್ತು. ಅವರ ಸಂಸ್ಕೃತಿ ಮೇಲುಸ್ಥರದ ವ್ಯಕ್ತಿತ್ವ ಎಲ್ಲರನ್ನು ಸೆಳೆಯುತ್ತಿತ್ತು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾಜಿ ಸಚಿವ ಎಸ್ ಎಸ್ ಪಾಟಿಲ್ ಮಾತನಾಡಿ, “ಸಿ‌ ಎಸ್ ಮುತ್ತಿನಪೆಂಡಿಮಠ ಅವರು ವಕೀಲರಾಗಿ ಜನಸೇವೆ ಮಾಡಿದ್ದಾರೆ. ನಾನು ಶಾಸಕನಾಗಲು ಪ್ರಮುಖ ಕಾರಣ ಸಿ ಎಸ್ ಮುತ್ತಿನಪೆಂಡಿಮಠ ಎಂದರೆ ತಪ್ಪಾಗದು” ಎಂದು ಹೇಳಿದರು.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, “ಈ ರಸ್ತೆಗೆ ಸಿ ಎಸ್‌ ಮುತ್ತಿನಪೆಂಡಿಮಠ ಹೆರಸರಿಡಲು ನಗರಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ, ಅಂಗೀಕರಿಸಲಾಗಿದೆ. ಅವರು ಎರಡು ಬಾರಿ ಶಾಸಕರಾಗಿ ಉತ್ತಮ ಕಾರ್ಯಗಳ‌ ಮೂಲಕ ಗಮನ ಸೆಳೆದಿದ್ದಾರೆ. ಅವರ ಕಾರ್ಯಗಳ‌ ಮೂಲಕ ಜನಸಾಮಾನ್ಯರಲ್ಲಿ ಇಂದಿಗೂ ಅವರು ಅಜರಾಮರರಾಗಿದ್ದಾರೆ” ಎಂದರು.

ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ, “ಜನಸೇವೆ, ನ್ಯಾಯವಾದಿಗಳಾಗಿ ಮಾಡಿದ ಅವರ ಸೇವೆ ಅಗಾಧವಾದದು. ನಾಡನ್ನು ಸಮೃದ್ಧವಾಗಿ ಕಟ್ಟಲು ಮುತ್ತಿನಪೆಂಡಿಮಠ ಅಂತಹವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುವಾಗ ಅನೇಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನ್ಯಾಯನಿಷ್ಠುರಿಯಾಗಿ ತಮ್ಮ ಕೆಲಸ ನಿರಂತರವಾಗಿ ಮಾಡುತ್ತಾ ಮುಂದೆ ಸಾಗಿದರು. ಅದಕ್ಕಾಗಿಯೇ ಅವರು ಇಂದಿಗೂ ಜನಮಾನಸದಲ್ಲಿ ಇದ್ದಾರೆ. ವ್ಯಕ್ತಿ ವಿಕಾಸಕ್ಕೆ ಅಸ್ಥಿತ್ವಕ್ಕೆ ಸಮಾಜ ಅಗತ್ಯ. ಅಂತಹ ಸಮಾಜದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದವರು ಸಿ ಎಸ್‌ ಮುತ್ತಿನಪೆಂಡಿಮಠ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ನೇರ ಹಣಾಹಣಿ ಇರುವ ದಕ್ಷಿಣ ಕನ್ನಡದಲ್ಲಿ ಈ ಬಾರಿ ಯಾರಿಗೆ ಸಿಗಲಿದೆ ಟಿಕೆಟ್?

ಕಾರ್ಯಕ್ರಮದಲ್ಲಿ ಸದಸ್ಯರಾದ ಎಲ್ ಡಿ ಚಂದಾವರಿ, ಪದ್ಮಾ ಕಟಗಿ, ಅನಿಲ್ ಅಬ್ಬಿಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ‌ ಐ ಹಿರೇಮನಿ ಪಾಟಿಲ್, ಡಾ. ಎಂ‌ ಬಿ ಪಾಟಿಲ್, ವಿಶ್ವನಾಥ ಪಾಟಿಲ್, ಪ್ರತಿ‌ಷ್ಠಾನದ ಅಧ್ಯಕ್ಷ ವಸಂತ ಮೇಟಿ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...