ಗದಗ | ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ದೇಶದ ಸಾರ್ವಭೌಮತ್ವದ ಮೇಲಿನ ದಾಳಿ: ಎಮ್ ಎಸ್ ಹಡಪದ

Date:

“ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಎಮ್ ಎಸ್ ಹಡಪದ ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕೆ.ಕೆ ವೃತ್ತದಲ್ಲಿ ರೈತ ಕಾರ್ಮಿಕರ ವಿದ್ಯಾರ್ಥಿ-ಯುವಜನ ಸಂಘಟನೆಯ ಮುಖಂಡರು, ವಿವಿಧ ಸಾಮೂಹಿಕ ಸಂಘಟನೆಗಳಿಂದ ರಾಜ್ಯ, ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ಕೃಷಿ ಕೂಲಿಕಾರರ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

 ಪಟ್ಟಣದ ಕೆ.ಕೆ ವೃತ್ತದ ಮಾರ್ಗವಾಗಿ ಬರುವ ಅಂಗಡಿಗಳಿಗೆ ಫೆಬ್ರುವರಿ 12ರ ಅಖಿಲ ಭಾರತ ಮುಷ್ಕರದ ಕರಪತ್ರ ಹಂಚಿ  ಕೆ ಕೆ ವೃತ್ತದಲ್ಲಿ ಪ್ರತಿಭಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅಂದು ಕೇಂದ್ರವನ್ನು ಟೀಕಿಸಿದ ಪಕ್ಷವು, ಅಮೇರಿಕ ಜೊತೆಗಿನ ಒಪ್ಪಂದವು ‘ಬಿಜೆಪಿ ನೇತೃತ್ವದ ಸರ್ಕಾರದ ನಾಚಿಕೆಗೇಡಿನ ಶರಣಾಗತಿ’ ಎಂದು ಹೇಳಿತ್ತು ಎಂದರು.

“ಈ ವ್ಯಾಪಾರ ಒಪ್ಪಂದವು ನಮ್ಮ ಸಾರ್ವಭೌಮತ್ವಕ್ಕೆ ಒಂದು ಹೊಡೆತವಾಗಿದೆ. ಏಕೆಂದರೆ ಅಮೆರಿಕವು ರಷ್ಯಾದಿಂದ ತೈಲ ಖರೀದಿಯ ನಿರ್ಧಾರಗಳನ್ನು ಒಳಗೊಂಡಂತೆ ನಮ್ಮ ನೀತಿಗಳನ್ನು ನಿರ್ದೇಶಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶವು ಈ ಆದೇಶಗಳೊಂದಿಗೆ ನಮ್ಮ ಅನುಸರಣೆಯನ್ನು ನಿರ್ಣಯಿಸಲು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ. ಅವುಗಳನ್ನು ಉಲ್ಲಂಘಿಸಿದರೆ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕುತ್ತದೆ’ ಎಂದು ಅದು ಹೇಳಿದೆ. ಇತಂಹ ಪರಿಸ್ಥಿತಿಯನ್ನು ಅರಿತು ಮೊದಿ ಸರ್ಕಾರ ಒಪ್ಪಂದ ಘೋಷಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಮುಖಂಡರು ಬಾಲು ರಾಠೋಡ ಮಾತನಾಡಿ, “ಒಪ್ಪಂದದ ವಿವರಗಳು ಹೊರಬರುತ್ತಿದ್ದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಮಧ್ಯಂತರ ಒಪ್ಪಂದ’ ಎಂದು ಕರೆಯಲ್ಪಡುವಲ್ಲಿ ಅಮೆರಿಕಕ್ಕೆ (ಯುಎಸ್) ವ್ಯಾಪಕ ರಿಯಾಯಿತಿಗಳನ್ನು ನೀಡಿದೆ ಎಂಬುದು ಸ್ಪಷ್ಟವಾಗುತ್ತಿದೆ. ಮೊದಿ ಸರ್ಕಾರ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದೆ. ಕೇವಲ ರೋಡ್ ಶೋ ಗಳಿಗೆ ಮಾತ್ರ ಸಿಮಿತವಾಗಿದ್ದಾರೆ” ಎಂದು ಹೇಳಿದರು.

ಪೀರು ರಾಠೋಡ ಮಾತನಾಡಿ, “ಮೊದಿ-ಟ್ರಂಪ್ ಅವರ ಈ ರಿಯಾಯಿತಿ ಒಪ್ಪಂದ ಭಾರತದ ಆರ್ಥಿಕತೆ, ಕೃಷಿ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ. ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಭಾಗಶಃ ಮಾಹಿತಿಯ ಪ್ರಕಾರವೂ, ಭಾರತ ಸರ್ಕಾರವು ಹಣ್ಣುಗಳು, ಹತ್ತಿ, ಮರದ ಬೀಜಗಳು, ಸೋಯಾಬೀನ್ ಎಣ್ಣೆ ಮತ್ತು ಇತರ ಕೆಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಅಮೆರಿಕದ ರಫ್ತಿನ ಮೇಲೆ ಯಾವುದೇ ಸುಂಕವನ್ನು (ಶೂನ್ಯ ಸುಂಕ) ವಿಧಿಸದಿರಲು ಒಪ್ಪಿಕೊಂಡಿದೆ. ಈ ನಿರ್ಧಾರವು ದೇಶಾದ್ಯಂತ ಲಕ್ಷಾಂತರ ಸೇಬು ಬೆಳೆಗಾರರು, ಹತ್ತಿ ಮತ್ತು ಸೋಯಾ ರೈತರ ಜೀವನೋಪಾಯವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮೆಹಬೂಬ ಹವಾಲ್ದಾರ, ಚಂದ್ರು ರಾಠೋಡ, ಬಾಲು ರಾಠೋಡ, ಅನಿಲ್ ಆರ್, ವಿರೇಶ ರಾಠೋಡ, ಮೈಸೂರು ಲಮಾಣಿ, ರೂಪಲೇಶ ಮಾಳೊತ್ತರ, ಶರಣಮ್ಮ, ಅಭಿಲಾಷ್ ರಾಠೋಡ, ಹಾಗೂ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ, ಬೀದಿ ಬದಿ ವ್ಯಾಪಾರಿಗಳು, ಬಗರ್ ಹುಕ್ಕುಂ ಸಾಗುವಳಿದಾರರು ಭಾಗವಹಿಸಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...