ಗದಗ | ಅಪಘಾತ ವಿಮೆಯ ಪರಿಹಾರ ಚೆಕ್ ವಿತರಣೆ

Date:

ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಟಾಟಾ ವಿಮೆ ಕಂಪನಿಯು 10 ಲಕ್ಷ ರೂಪಾಯಿಯ ವಿಮಾ ಚೆಕ್ ವಿತರಣೆ ಮಾಡಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಅಂಚೆ ಸೇವಾನಗರ ನಿವಾಸಿ ರವಿ ಲಮಾಣಿ ನಾಲ್ಕು ತಿಂಗಳ ಹಿಂದೆ 399 ರೂ.ಗಳ ಅಪಘಾತ ವಿಮೆ ಪಾಲಿಸಿ ತೆಗೆದುಕೊಂಡಿದ್ದರು. ಇತ್ತೀಚೆಗೆ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪತ್ನಿ ಲಕ್ಷ್ಮೀ ಲಮಾಣಿ ಅವರಿಗೆ ವಿಮಾ ಕಂಪನಿಯು 10 ಲಕ್ಷ ರೂ.ಗಳ ಚೆಚ್‌ ವಿತರಿಸಿದ್ದಾರೆ.

ಚೆಚ್‌ ಹಸ್ತಾಂತರಿಸಿ ಮಾತನಾಡಿದ ಗದಗ ಅಂಚೆ ವಿಭಾಗದ ಅಧೀಕ್ಷಕ ಚಿದಾನಂದ ಪದ್ಮಶಾಲಿ, “ಅತೀ ಕಡಿಮೆ ಮೊತ್ತದ ವಿಮಾ ಕಂತನ್ನು ತೆಗೆದುಕೊಂಡು 10 ಲಕ್ಷ ಮೊತ್ತದ ವಿಮಾ ಹಣವನ್ನು ವಾರಸುದಾರರಿಗೆ ನೀಡುತ್ತಿರುವುದು ಅಂಚೆ ಇಲಾಖೆಯ ಸಾರ್ಥಕ ಸೇವೆಯಾಗಿದೆ. ಮೃತರ ಕುಟುಂಬದ ಮುಂದಿನ ನಿರ್ವಹಣೆಗೆ ಸಹಾಯವಾಗಲಿದೆ. ಈ ಪಾಲಿಸಿಯಿಂದ ಕೇವಲ ಮರಣ ಹೊಂದಿದವರಿಗೆ ಮಾತ್ರವಲ್ಲದೇ ಅಪಘಾತದಿಂದ ಗಾಯಗೊಂಡವರಿಗೂ ಆಸ್ಪತ್ರೆಯ ಖರ್ಚನ್ನು ವಿಮಾ ಪಾಲಿಸಿಯು ನೀಡುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಡಿಯಾ ಪೊಸ್ಟ್ ಪೇಮೆಂಟ್ ಬ್ಯಾಂಕ್‌ನ ಉತ್ತರ ಕರ್ನಾಟಕ ವಲಯದ ಮುಖ್ಯ ಪ್ರಭಂದಕ ರಾಣು ಅಗರವಾಲ್ ಮಾತನಾಡಿ, “ಟಾಟಾ ಅಪಫಾತ ವಿಮೆ ಅತೀ ಕಡಿಮೆ ಕಂತನ್ನು ಹೊಂದಿದ್ದು, ಅತೀ ಹೆಚ್ಚಿನ ಮೊತ್ತದ ವಿಮೆಯನ್ನು ನೀಡುತ್ತಿದೆ. ಈ ರೀತಿಯ ಉತ್ತಮ ವಿಮಾ ಸೌಲಭ್ಯ ಬೇರೆ ಯಾವ ವಿಮಾ ಸಂಸ್ಥೆಗಳಲ್ಲಿ ಕೂಡಾ ಇರುವುದಿಲ್ಲ. ಅಂಚೆ ಇಲಾಖೆಯಿಂದ ಈ ವಿಮಾ ಪಾಲಿಸಿ ಸೌಲಭ್ಯವು ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ” ಎಂದು ತಿಳಿಸಿದರು.

ಗದಗ ಐಪಿಬಿಬಿಯ ಮೇನೇಜರ್ ಆನಂದಸಾಗರ ಮಾತನಾಡಿ, “ಗದಗ ಶಾಖೆಯಲ್ಲಿ ಮೊದಲ ಅಪಘಾತ ವಿಮೆಯನ್ನು ನೀಡುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಈ ಸೌಲಭ್ಯ ಪಡೆದುಕೊಳ್ಳಬೇಕು” ಎಂದರು. ವಿಮಾ ಪಾಲಿಸಿಯನ್ನು ಮಾಡಿಸಿ ಬಡ ಕುಟುಂಬಕ್ಕೆ ಸಹಾಯ ಮಾಡಲು ಕಾರಣರಾದ ತಾರೀಕೊಪ್ಪ ಶಾಖಾ ಅಂಚೆ ಪಾಲಕ ಬಸವರಾಜ ಮಡಿವಾಳರ್ ಅವರನ್ನು ಪ್ರಶಂಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...