ಗದಗ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್.ಕಾದ್ರೋಳ್ಳಿ ಬಣ ಇಂದು (ಡಿ.28) ಸಂಘಟನೆ ಸಭೆ ನಡೆಸಿದ್ದು, ಜಿಲ್ಲೆಯಲ್ಲಿ 50ಜೋಡಿಗಳ ಸಾಮೂಹಿಕ ವಿವಾಹ ಮಾಡಲು ತೀರ್ಮಾನಿಸಿದರು.
ಸಭೆಯಲ್ಲಿ ರಾಜ್ಯಾದ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಸಂಸ್ಥಾಪಕ ರಾಜ್ಯಾದ್ಯಕ್ಷರನ್ನು ಗದಗ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳಿಂದ ಗೌರವಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ರಾಜ್ಯಾದ್ಯಕ್ಷರಿಗೆ ಗದಗ ಜಿಲ್ಲಾ ಅದ್ಯಕ್ಷ ನಿಂಗರಾಜ ದೊಡಮನಿ ರಾಜ್ಯಾದ್ಯಕ್ಷರಿಗೆ ಒಂದು ಮನವಿ ಸಲ್ಲಿಸಿ, ಗದಗ ಜಿಲ್ಲೆಯಲ್ಲಿ ಒಂದು ಸಮಾವೇಶ ಮಾಡಲು ವಿನಂತಿಸಿಕೊಂಡರು.
ಈ ವಿಷಯವಾಗಿ ಸಭೆಯಲ್ಲಿ ಚರ್ಚಿಸಿ, ಗದಗ ಜಿಲ್ಲೆಯಲ್ಲಿ 50ಜೋಡಿಗಳ ಸಾಮೂಹಿಕ ವಿವಾಹ ಮಾಡಲು ತಿರ್ಮಾನಿಸಿದ್ದಾರೆ. ರಾಜ್ಯ ಮಟ್ಟದ ಸಮಾವೇಶವನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾಡಲು, ಹಾವೇರಿ ಜಿಲ್ಲೆಯಲ್ಲಿ ಕೂಡ 50 ಜೋಡಿಗಳ ಸಾಮೂಹಿಕ ವಿವಾಹ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಹೋರಾಟಗಳು, ಹಾಗೂ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. ಮುಂದಿನ ಸಭೆಯನ್ನು ಕೊಪ್ಪಳ, ರಾಯಚೂರು, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ದಾರವಾಡ, ಚಿಕ್ಕಮಗಳೂರು ಬೆಂಗಳೂರು ಸೇರಿದಂತೆ ಇನ್ನೂ ಹಲವಾರ ಜಿಲ್ಲೆಗಳಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಿದರು.
ಸಂಸ್ಥಾಪಕ ರಾಜ್ಯಾದ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ರಾಜ್ಯ ಕಾರ್ಯಾದ್ಯಕ್ಷ ಯಲ್ಲಪ್ಪ ಹಂದ್ರಾಳ, ರಾಜ್ಯ ಗೌರವಾದ್ಯಕ್ಷ ಬಸವರಾಜ ಮಾರಡಗಿ, ರಾಜ್ಯ ಕೋಶ್ಯದ್ಯಕ್ಷ ಮರಿಯಪ್ಪ ಪೂಜಾರ, ಸಂತೋಷ ಗುಡ್ಡಪ್ಪನವರ, ಶ್ರೀಕಾಂತ ಮ. ಮಾದರ, ದುರಗಪ್ಪ ಹೆಡಗಿಬಾಳ, ರಾಜ್ಯ ಸಮಿತಿ ಪದಾಧಿಕಾರಿಗಳು, ಮಿಲಿಂದ ಐಹೊಳೆ, ಬಸವರಾಜ ಲಗಮವ್ವನವರ, ಪ್ರಕಾಶ ಸರನಾಯಕ, ಲಿಂಗರಾಜ ದೊಡಮನಿ, ನಾಗೇಶ ಹರಿಜನ, ರಮೇಶ ಪೋತರಾಜ, ಚಂದ್ರು ಪೋತರಾಜ ಸಭೆಯಲ್ಲಿ ಹಾಜರಿದ್ದರು.
ಸಭೆಯನ್ನು ಉದ್ದೇಶಿಸಿ ಮರಿಯಪ್ಪ ಪೂಜಾರ, ಯಲ್ಲಪ್ಪ ಹಂದ್ರಾಳ, ಬಸವರಾಜ ಮಾರಡಗಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಮರಿಯಪ್ಪ ಪೂಜಾರ ಸ್ವಾಗತಿಸಿದರು, ಲಿಂಗರಾಜ ದೊಡಮನಿ ವಂದಿಸಿದರು.





