ಗದಗ | ಕಾರ್ಮಿಕ ಚಳುವಳಿ ವ್ಯಕ್ತಿತ್ವದ ಬೆಳವಣಿಗೆಯ ಆಶಯವಾಗಿದೆ : ಎಂ. ಎಸ್. ಹಡಪದ

Date:

“ಬಹು ದೊಡ್ಡ ಸಂಖ್ಯೆಯಲ್ಲಿರುವ ದುಡಿಯುವ ಜನರನ್ನು ಕಾರ್ಪೊರೇಟ್ ಹುನ್ನಾರಗಳನ್ನು ಅರಿತು ವಿಫಲಗೊಳಿಸುವ ಸಾಮರ್ಥ್ಯ ಪಡೆದು ರಾಜಕೀಯ, ಸಾಂಸ್ಕೃತಿಕ ಪ್ರಜ್ಞಾವಂತರಾಗಬೇಕು. ಕಾರ್ಮಿಕ ಚಳುವಳಿ ವ್ಯಕ್ತಿತ್ವದ ಬೆಳವಣಿಗೆಯ ಆಶಯ ಎದೆಯಲ್ಲಿದೆ” ಎಂದು ಸಿ.ಐ.ಟಿ.ಯು ಮುಖಂಡ ಎಂ ಎಸ್ ಹಡಪದ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ಸಮುದಾಯ ಭಾವನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

“ಕಾರ್ಮಿಕರ ಕುಟುಂಬದಲ್ಲಿ ಮಕ್ಕಳು, ಗಂಡ ಹೆಂಡತಿ ನಡುವಿನ ಸಂಬಂಧಗಳು ಹೆಚ್ಚು ಆರೋಗ್ಯಕರವಾಗುವಂತೆ ಮಾಡುವುದು ಮೇ ದಿನದ ಆಶಯ. ಆದರೆ ದುಡಿಯುವ ಜನರನ್ನು ಹೆಚ್ಚು ಹೆಚ್ಚು ದುಡಿಸಿಕೊಂಡು, ದಿನಕ್ಕೆ ಹನ್ನೊಂದು, ಹನ್ನೆರಡು ಗಂಟೆ ಯುವಕರು ದುಡಿಯಬೇಕು ಎಂದು ಹೇಳುವ ನಾರಾಯಣ ಮೂರ್ತಿಯಂತಹ ಬಂಡವಾಳಶಾಹಿಗಳ ದುರಾಸೆಯಾಗಿದೆ. ಜಗತ್ತಿನ ಬಹುಭಾಗದ ಜನರನ್ನು ಸಾಂಸ್ಕೃತಿಕ ಕುಬ್ಜರನ್ನಾಗಿಸುವ ಹುನ್ನಾರ, ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತರಾಗಿ ಇರುವ ಅವಕಾಶವನ್ನು ಕಸಿಯುವುದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಾರ್ಪೊರೇಟ್ ದಬ್ಬಾಳಿಕೆ, ಪ್ರಜಾಪ್ರಭುತ್ವ ನಾಶಪಡಿಸುವ ಮುಂದುವರೆದ ಹೇಳಿಕೆಗಳ ಭಾಗವಾಗಿದೆ. ಮುಂದಿನ ತಲೆಮಾರು ಕೇವಲ ಯಂತ್ರಗಳಾಗಿ ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಕೋಲೆ ಬಸವಗಳಾಗುವಂತೆ ಮಾಡಿ‌ ಅಪರಿಮಿತ ಸಂಪತ್ತನ್ನು ತಮ್ಮಲ್ಲಿಯೇ ಕೇಂದ್ರಿಕರಿಸುವುದು ಅವರ ಉದ್ದೇಶವಾಗಿದೆ” ಎಂದು ಹೇಳಿದರು.

“ಕೇಂದ್ರೀಕರಿಸುವ ವ್ಯವಸ್ಥೆಯನ್ನು ಸಂಘಟನಾತ್ಮಕವಾಗಿ ನಾವೆಲ್ಲರೂ ಎದುರಿಸಿ ಬದುಕನ್ನು ಕಟ್ಟಿಕೊಳ್ಳಬೇಕಿದೆ” ಎಂದು ಎಂ. ಎಸ್. ಹಡಪದ ಹೇಳಿದರು.

ಈ ಸುದ್ದಿ ಓದಿದ್ದೀರಾ? ಗುಬ್ಬಿ | ತಾಲೂಕು ಆಡಳಿತದಿಂದ ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿ ಆಚರಣೆ

ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು ಮುಖಂಡರು ಬಾಲು ರಾಠೋಡ್, ಪೀರು ರಾಠೋಡ್, ದಾವಲಾಸಾಬ ತಾಳಿಕೋಟಿ, ಮೆಹಬುಬ ಹವಾಲ್ದಾರ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...