ಐತಿಹಾಸಿಕ ಲಕ್ಕುಂಡಿಯಲ್ಲಿ 12ನೇ ದಿನದ ಉತ್ಖನನ ಕಾರ್ಯ ನಡೆಯುತ್ತಿದ್ದು, ವೇಳೆ ಅಪರೂಪದ ಮೂರು ಹೆಡೆಯುಳ್ಳ ನಾಗಶಿಲ್ಪ ಶಿಲೆ ಪತ್ತೆಯಾಗಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಈ ಸುದ್ದಿ ಒದಿದ್ದೀರಾ? ಲಕ್ಕುಂಡಿಯಲ್ಲಿ ಇತಿಹಾಸವನ್ನು ಅಗೆಯುವ ಕೆಲಸ, ಕೀಳಡಿಯಲ್ಲಿ ಹೂಳಲು ಪ್ರಯತ್ನ; ಸಾಂಸ್ಕೃತಿಕ ದ್ರೋಹ
ಗದಗ ಜಿಲ್ಲೆಯ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಪನನ ಕಾರ್ಯ ಮುಂದುವರಿದಿದ್ದು, ಈ ವೇಳೆ ಪ್ರಾಚೀನ ನಾಗರ ಕಲ್ಲುಗಳು ಪತ್ತೆಯಾಗಿವೆ. ಈ ನಾಗಶಿಲ್ಪ ಶಿಲೆಯನ್ನು ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ. ಜತೆಗೆ ಕಳಸದ ಮೇಲ್ಬಾಗದಲ್ಲಿ ಇರುವ ರಚನೆಯ ಅವಶೇಷ, ಮೂಳೆ ತುಂಡುಗಳು ಸಿಕ್ಕಿವೆ” ತಿಳಿದು ಬಂದಿದೆ.





