ಗದಗ | ಲೋಕಾಯುಕ್ತ ದಾಳಿ ಪ್ರಕರಣ; ಶಾಸಕ ಚಂದ್ರು ಲಮಾಣಿ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿ ಕಾಂಗ್ರೆಸ್ ಆಗ್ರಹ

Date:

“ಗುತ್ತಿಗೆದಾರನಿಂದ 5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ ದಾಳಿಗೆ ರೆಂಡ್‌ಹ್ಯಾಂಡ್ ಸಿಕ್ಕಿರುವ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಶಾಸಕ ಸದಸ್ಯತ್ವದಿಂದ ಅನರ್ಹಗೊಳಿಸಬೇಕು” ಎಂದು ಲಕ್ಷ್ಮೇಶ್ವರ ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸಣ್ಣ ನೀರಾವರಿ  ಇಲಾಖೆಯ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದ್ದಕ್ಕೆ 11ಲಕ್ಷ ಕಮಿಷನ್‌ಗೆ ಬೇಡಿಕೆಯಿಟ್ಟಿದ್ದು, ಕಮಿಷನ್ ರೂಪದಲ್ಲಿ ರೂ.5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದದ್ದು ಶಾಸಕರನ್ನು ಅನರ್ಹಗೊಳಿಸಲು ಸಭಾಪತಿ ಹಾಗೂ ರಾಜ್ಯಪಾಲರಿಗೆ ಲಕ್ಷ್ಮೇಶ್ವರ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಕಾಂಗ್ರೇಸ್‌ ಆಕಾಂಕ್ಷಿ ಅಭ್ಯರ್ಥಿ ಸುಜಾತ ದೊಡ್ಡಮನಿ ಮಾತನಾಡಿ, “ಗುತ್ತಿಗೆದಾರ ವಿಜಯರಾಜ್ ಪೂಜಾರ ಅವರಿಂದ 11 ಕಮಿಷನ್‌ಗೆ ಬೇಡಿಕೆ ಇಟ್ಟಿದ್ದು, ಗುತ್ತಿಗೆದಾರನಿಂದ ರೂ. 5 ಲಕ್ಷ ಲಂಚ ತೆಗೆದುಕೊಳ್ಳುವಾಗಲೇ ಲೋಕಾಯುಕ್ತರು ದಾಳಿ ಮಾಡಿ ರೆಂಡ್‌ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಎಂದೂ ಆಗದ ಇಂತಹ ಘಟನೆ. ಚಂದ್ರು ಲಮಾಣಿ ಅವರು ಆದ ಶಾಸಕರಾದ ಮೇಲೆ ಹಣದ ದುರಾಸೆಯಿಂದ ಬಡಪಾಯಿ ಗುತ್ತಿಗೆದಾರರಿಂದ ಕಮಿಷನ್‌ಗೆ ಒತ್ತಡವೇರಿದ್ದರೆ. ಒಂದು ವೇಳೆ ‘ಕಮಿಷನ್ ಕೊಡ್ದೆ ಇದ್ದರೆ ಟೆಂಡರ್ ಕ್ಯಾನಸಲ್ ಮಾಡಿಸುವೆ ಇದೆಲ್ಲ ಇಟಕೊಬೇಡ ನಮ್ಮ ತಾಲೂಕಿನಲ್ಲಿ ‘ನಡ ಮುರಿಸುವೆ” ಎಂದು ಬೇದರಿಕೆ ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜನಪ್ರತಿನಿಧಿಯಾದಂತವರಿಗೆ ಈ ನಡವಿಕೆ ಸರಿಯಲ್ಲ. ಹಾಗಾಗಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಕಾಂಗ್ರೇಸ್‌ ಆಕಾಂಕ್ಷಿ ಅಭ್ಯರ್ಥಿ ಸುಜಾತ ದೊಡ್ಡಮನಿ ಆಗ್ರಹಿಸಿದರು.

ಯಲ್ಲಪ್ಪ ಸುರಣಗಿ ಮಾತನಾಡಿ, “ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಡಾ.ಚಂದ್ರು ಲಮಾಣಿ ಅವರು ಶಾಸಕರಾದಾಗಿನಿಂದ ತಾಲೂಕಿನ ಅಧಿಕಾರಿಗಳು ಅತಿ ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಕಾರಣ ತಿಳಿದಾಗ ಶಾಸಕರಿಗೆ ಕಮಿಷನ್ ಕೊಡಲೇಬೇಕೆಂಬ ಕಟ್ಟಳೆ ಇತ್ತು; ಎಂಬುದು ಗಮನ ಬರುತಿತ್ತು. ಇದರಿಂದ ಅಧಿಕಾರಿಗಳು ಸಾರ್ವಜನಿಕರು ಶಾಸಕರ ಈ ದುಷ್ಟ ಭ್ರಷ್ಟಾಚಾರದಿಂದ ಬೆಸತ್ತು ಹೋಗಿದ್ದರು. ಇಂತಹ ಒಬ್ಬ ಭ್ರಷ್ಟ ಶಾಸಕ ಭಾರತ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಭಾಗದಲ್ಲಿ ಕಂಡಿರಲಿಲ್ಲ. ಆದ್ದರಿಂದ ಲಂಚಕೋರ ಶಾಸಕ ಈ ತಾಲೂಕಿಗೆ ಅವರನ್ನು ಸದಸ್ಯತ್ವ ಕೂಡಲೇ ವಜಾಗೊಳಿಸಿ” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಚನ್ನಪ್ಪ ಜಗಲಿ, ಗುಡ್ಡಪ್ಪ ಕೊಪ್ಪದ, ಫಕ್ಕೀರೇಶ ಮ್ಯಾಟಣವರ, ಸದ್ಧಮ್ ಹಾಲಗಿ, ಶಿವು ಕಬ್ಬೇರ್, ಲಕ್ಷ್ಮೇಶ್ವರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...