“ಬೆಂಬಲ ಬೆಲೆಯಡಿ ಪ್ರತಿ ರೈತನಿಂದ 5 ಕ್ವಿಂಟಾಲ ಮೆಕ್ಕೆಜೋಳವನ್ನು ಖರೀದಿ ಮಾಡಲು ನಿರ್ಧರಿಸಿತ್ತು. ಈ ಆದೇಶವನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಕನಿಷ್ಠ 12 ರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್ ಗೆ 2400 ರೂಗಳಂತೆ ಖರೀದಿಸಲು ಪ್ರಾರಂಭಿಸಲಾಗುವುದು” ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಮುಳಗುಂದ ಸಮೀಪದ ಕಣಿವಿ ಗ್ರಾಮದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.
“ಈಗಾಗಲೇ ಗದಗ ತಾಲೂಕು ಮಲಸಮುದ್ರ ಗ್ರಾಮದಲ್ಲಿ ಧಾರವಾಡ ಹಾಲು ಒಕ್ಕೂಟದ ಹಾಲು ಸಂಗ್ರಹಣ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ನೋಂದಣಿ ಪ್ರಕ್ರಿಯೆ ಮಂಗಳವಾರ ಪ್ರಾರಂಭಿಸಲಾಗಿದೆ” ಎಂದರು.
“ಪ್ರಸಕ್ತ ವರ್ಷ ರಾಜ್ಯದಲ್ಲಿ ಅಂದಾಜು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬಿತ್ತನೆ ಮಾಡಿ ಬೆಳೆ ಬೆಳೆದಿದ್ದು ಈ ಖರೀದಿ ಪ್ರಕ್ರಿಯೆಯನ್ನು ಹೇಗೆ ಮಾಡಬೇಕೆಂಬುದು ಸರಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ರೈತರ ನೆರವಿಗೆ ಸರ್ಕಾರ ಹೇಗಾದರೂ ಮಾಡಿ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಪ್ರತಿ ರೈತನಿಂದ ಕನಿಷ್ಠ 12 ಕ್ವಿಂಟಲ್ ಗರಿಷ್ಠ 20 ಕ್ವಿಂಟಲ್ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಮಾಡಲಾಗುವುದು” ಎಂದರು.
ಕಣವಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಮೈದಾನ ಹಾಗೂ ಹೈ ಮಾಸ್ಕ್ ವಿದ್ಯುತ ದೀಪ ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳೆಗೆ ಪ್ರಶಸ್ತಿ ವಿತರಿಸಲಾಯಿತು. ಅಂದಾಜು 16 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಗ್ರಾಮ ಪಂಚಾಯಿತಿ ಉಪಕಾರ್ಯಾಲಯವನ್ನು ಸಚಿವರಾದ ಹೆಚ್ ಕೆ ಪಾಟೀಲ ಉದ್ಘಾಟಿಸಿದರು.
ಕಣವಿ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ 41 ಲಕ್ಷ ರೂಗಳ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ಉದ್ಘಾಟಿಸಲಾಯಿತು. ಅಂದಾಜು 18 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ ಉದ್ಘಾಟಿಸಿದರು.
ಅಂದಾಜು 33 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಹಳ್ಳಿ ಗ್ರಾಮೀಣ ಸಂತೆ ಕಟ್ಟಡದ ಉದ್ಘಾಟನೆ, ರಂಗ ಮಂದಿರ ಹಾಗೂ ನಾಟಕ ಮನೆಯನ್ನು ಉದ್ಘಾಟಿಸಿದರು.
ವಿಪ ಶಾಸಕರಾದ ಎಸ್ ವಿ ಶಂಕನೂರ ಅವರ ಅನುದಾನದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರು ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಪ ಶಾಸಕರಾದ ಎಸ್. ವಿ. ಸಂಕನೂರ, ಜಿಪಂ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲ, ಗ್ರಾ ಪಂ ಅಧ್ಯಕ್ಷೆ ಹಾಲವ್ವ ಕುರಿ, ಉಪಾಧ್ಯಕ್ಷೆ ರೇಣವ್ವ ತಳವಾರ, ಗದಗ ತಾಪಂ ಮಾಜಿ ಅಧ್ಯಕ್ಷರಾದ ಶರಣ ಬಸನಗೌಡ ಪಾಟೀಲ, ಬಾಬುಸಾಬ ಕಿಲ್ಲೆದಾರ, ಬಸವರಾಜ ಬಂದಕ್ಕನವರ, ಪರಪ್ಪ ಕೋಳಿವಾಡ, ಯಲ್ಲಪ್ಪ ಕೋರಿ ಪ್ರಕಾಶ ಕುರ್ತಕೋಟಿ, ಗಂಗಣ್ಣ ಗಡಾದ, ಕೃಷ್ಣ ನಾಗಲೋಟಿ, ಎಸ್. ವಾಯ್. ಕೋರಿ, ಶರೀಫ ದೊಡ್ಮನಿ, ಅಕ್ಕಮಹಾದೇವಿ ಬಳಿಗಾರ, ಪಾರವ್ವ ಕುರ್ತುಕೋಟಿ, ಮಂಜುನಾಥ ಕೋರಿ, ಶಂಕ್ರಪ್ಪ ಕೋಳಿವಾಡ, ಪ್ರಭು ಹುಡೆದ, ಬಿ.ಟಿ. ಸೋಮರಡ್ಡಿ, ಶಿವಾನಂದ ಮಾದಣ್ಣವರ, ನಿಂಗಪ್ಪ ಛಲವಾದಿ ಮತ್ತಿತರರು ಇದ್ದರು





