ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿಗ್ಲಿ ನಾಕಾದ ಹತ್ತಿರದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡು ಮಾತನಾಡಿದರು.
“ನಮ್ಮ ನಾಡಿನಲ್ಲಿ ಊಟದ ಸಂಸ್ಕೃತಿ ಇದೆ. ಆ ಸಂಸ್ಕೃತಿಯನ್ನು ನಮ್ಮ ಸರಕಾರ ಇಂದಿರಾ ಕ್ಯಾಂಟೀನ್ ಮೂಲಕ ಮುಂದುವರೆಸಿದ್ದೇವೆ. ಇದರ ಸದುಪಯೋಗ ಜನಸಾಮಾನ್ಯರು ಪಡೆದುಕೊಳ್ಳಬೇಕು” ಸಚಿವರು ಎಚ್ ಕೆ ಪಾಟೀಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಚಂದ್ರು ಲಮಾಣಿ ವಹಿಸಿದ್ದರು. ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್, ಎಸ್ ಪಿ ರೋಹನ್ ಜಗದೀಶ್, ಕಾಂಗ್ರೆಸ್ ಮುಖಂಡರು ಸುಜಾತ ದೊಡ್ಡಮನಿ, ಜಗದೀಶ ಹುಲಿಗೆಮ್ಮನವರ, ಆನಂದಸ್ವಾಮಿ ಗಡ್ಡದೇವರಮಠ, ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ರಾಜಣ್ಣ ಮಡಿವಾಳರ, ಕಾಂಗ್ರೆಸ್ ಮುಖಂಡರು ಗುರುನಾಥ ದಾನಪ್ಪನವರ, ಫಕಿರೇಶ ಮ್ಯಾಟಣ್ಣನವರ, ಪುರಸಭೆ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ





