ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಜ್ಯಶಾಸ್ತ್ರ ವಿಭಾಗದಿಂದ ಪ್ರವೀಣ ಚಪ್ಪರಮನಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.
ಡಾ. ಎನ್. ಎಮ್ ಸಾಲಿ ಅವರ ಮಾರ್ಗದರ್ಶನದಲ್ಲಿ ಪ್ರವೀಣ ಚಪ್ಪರಮನಿ ಅವರು “ಕರ್ನಾಟಕದಲ್ಲಿ ನಗರಾಭಿವೃದ್ಧಿ ಮತ್ತು ಪಕ್ಷ ರಾಜಕಾರಣ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧ್ಯಯನ” ಸಂಶೋಧನಾ ಮಹಾ ಪ್ರಬಂದಕ್ಕೆ ಕವಿವಿ ರಾಜ್ಯಾಶಾಸ್ತ್ರ ವಿಭಾಗದಿಂದ ಪಿಎಚ್.ಡಿ ಪದವಿ ಘೋಷನೆ ಮಾಡಲಾಗಿದೆ.
ಪ್ರವೀಣ ಅವರಿಗೆ ಕವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ವಿಭಾಗದ ಡಾ. ಎನ್. ಎಂ. ಸಾಲಿ ಅವರು ಮಾರ್ಗದರ್ಶನ ಮಾಡಿದ್ದರು.
ಪ್ರವೀಣ ಚಪ್ಪರಮನಿ ಅವರು ಗದಗ ಪಟ್ಟಣದವರು. ಗಂಗಾಧರ ನಗರದ ಶ್ರೀ ಶರಣ ನುಲಿಯ ಚಂದಯ್ಯ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾಗಿದ್ದಾರೆ.





