“ಅಂಚೆ ಇಲಾಖೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ” ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಪಿ.ಚಿದಾನಂದ ಅಭಿಪ್ರಾಯಪಟ್ಟರು.
ಪ್ರಧಾನ ಅಂಚೆ ಕಚೇರಿಯಯಲ್ಲಿ ಬುಧವಾರ ನಡೆದ ಗದಗ ವಿಭಾಗದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪ್ರಸ್ತುತ ಪತ್ರ ವ್ಯವಹಾರ ಜೊತೆಗೆ ಅಂಚೆ ಇಲಾಖೆ ಡಿಜಟಲೀಕರಣ, ಬ್ಯಾಂಕಿಂಗ್,ವಿಮಾ, ಉಳಿತಾಯ ಖಾತೆ, ಠೇವಣಿ, ಅಪಘಾತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಅಂಚೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.
“ಈಗಾಗಲೇ ಹಲವು ವಿಭಾಗದಲ್ಲಿ ಗದಗ ವಿಭಾಗ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿದೆ” ಎಂದರು.
“ಮಿಷನ್ ಸುರಕ್ಷ ಇದೇ ನ.1ರಿಂದ ಆರಂಭವಾಗಿದೆ. ಈ ವಿಭಾಗದಲ್ಲಿ ನಿರೀಕ್ಷಿತ ಗುರಿ ಸಾಧಿಸುವ ಹಿನ್ನಲೆ ಇನ್ನೂ 48 ದಿನ ಕಾಲಾವಕಾಶ ಇದೆ. ಹಾಗಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದರು.
“ನಾಳೆಯಿಂದ 3 ದಿನಗಳ ವಿಶೇಷ ಮೇಳ ಆಯೋಜಿಸಲಾಗಿದೆ. ಹೆಚ್ಚೆಚ್ಚು ಪಾಲಿಸಿಯನ್ನು ಜನರು ಪಡೆದುಕೊಳ್ಳಬೇಕು. 8ಕ್ಕೂ ಹೆಚ್ಚು ವಿಮೆ ಯೋಜನೆ ಒಳಗೊಂಡಿವೆ. ಇದರಿಂದ ಗದಗ ವಿಭಾಗ ಸಾಧನೆ ವಲಯ ಮತ್ತು ರಾಜ್ಯ,ರಾಷ್ಟ ಮಟ್ಟದ ಮುಂಚೂಣಿ ಸಾಧನೆ ಸಹಕಾರಿಯಾಗಲಿದೆ” ಎಂದರು.
“ಮುಂಬರುವ ದಿನಗಳಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವ ಸಲುವಾಗಿ ಹಲವು ಬಹುಮಾನ ಸಹಿತ ಸ್ಥಾನ ಗಿಟ್ಟಿಸಿಕೊಳ್ಳಲು ಸದಾವಕಾಶವನ್ನು ಸದ್ಭಳಕೆಗೆ ಮುಂದಾಗಬೇಕು” ಎಂದರು.
“ಎರಡು ವಾರ ವಿಶೇಷ ಉಳಿತಾಯ ಪಾಕ್ಷಿಕ. ಅಂಚೆ ಇಲಾಖೆ ಗದಗ ವಿಭಾಗದಿಂದ ಉಳಿತಾಯ ಪಾಕ್ಷಿಕ. ಎರಡು ವಾರ ವಿಶೇಷ ಮೇಳ ನಡೆಯಲಿದೆ. ಹಾಗಾಗಿ ಎಲ್ಲರೂ ಹೆಚ್ಚೆಚ್ಚು ಖಾತೆ ತೆರೆಯಲು ಮುಂದಾಗಬೇಕು ಜೊತೆಗೆ ಗ್ರಾಹಕರಿಗೆ ಖಾತೆ ತೊರೆಯುವದನ್ನು ಬಿಡುವಂತೆ ಮನವೊಲಿಸಲು ಮುಂದಾಗಬೇಕು” ಎಂದರು.
“ಗದಗ ವಿಭಾಗ ನಿಗದಿತ ಗುರಿ ಸಾಧನೆ ಹಿನ್ನಲೆಯಲ್ಲಿ ರಾಜ್ಯ ಮಟ್ಟದಲ್ಲಿ ಉಳಿತಾಯ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಮುಂಚೂಣಿ ಸ್ಥಾನದ ಹಿನ್ನಲೆ ಹೊಂದಿದೆ. ಆದರೇ, ಪ್ರಸ್ತುತ ಇನ್ನೂ ಹೆಚ್ಚೆಚ್ಚು ಖಾತೆ ಆರಂಭಕ್ಕೆ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ₹3300 ಕಬ್ಬಿನ ದರ ನಿಗದಿ ಮಾಡಲು ರೈತರು ಧರಣಿ
ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಗದಗ ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ, ಗದಗ ಉಪ ವಿಭಾಗದ ಸಹಾಯಕ ಅಧೀಕ್ಷಕರಾದ ಶ್ರೀಕಾಂತ ಜಾದವ, ರೋಣ ಉಪ ವಿಭಾಗದ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಬಸವರಾಜ ಮಡಿವಾಳರ ಮಾತನಾಡಿದರು.
ಇದೇ ವೇಳೆ ಅಂಚೆ ಪೇದೆಯಿಂದ ಪದೋನ್ನತಿ ಪಡೆದ ಸರೋಜಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಿಲಾಯಿತು.ಅನೀತಾ ಕುರಿ ಸ್ವಾಗತಿಸಿದರು.ಅಂಚೆ ಸಹಾಯಕ ಬಸವರಾಜ ಶೇಡದ, ಶ್ರೀದೇವಿ ಕಲಕೇರಿ ನಿರೂಪಿಸಿದರು. ಭೀಮಣ್ಣ ದೊಡ್ಡಮನಿ ವಂದಿಸಿದರು.





