ಐತಿಹಾಸಿಕ ಲಕ್ಕುಂಡಿಯ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಉತ್ಖನನ ಕಾರ್ಯ ನಡೆದಿದ್ದು, ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಸುರಕ್ಷಾ ಕಿಟ್ ವಿತರಿಸುವಂತೆ ಕಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಉತ್ಖನನ ಸ್ಥಳದಲ್ಲಿ ನೆರವು ಕಟ್ಟಡ & ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾದ್ಯಕ್ಷ ಅಶ್ವಥ್ ಮರಿಗೌಡ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಉತ್ಖನನ ಕಾರ್ಮಿಕರಿಗೆ ಕನಿಷ್ಠ ಕೂಲಿ, ಶೂ, ಗ್ಲೌಸ್, ನೆರಳಿನ ವ್ಯವಸ್ಥೆ ಸೇರಿ ಕಾರ್ಮಿಕ ಸೌಲಭ್ಯ ಒದಗಿಸಲು ಉತ್ಖನನ ಸ್ಥಳದಲ್ಲಿ ಧರಣಿ ನಡೆಸಿದ್ದಾರೆ.
ಆದರೆ ಪ್ರತಿಭಟನಾಕಾರರನ್ನು ಗ್ರಾಮಸ್ಥರು “ಲಕ್ಕುಂಡಿಯ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ. ಈ ಅಭಿವೃದ್ಧಿ ಕಾರ್ಯವನ್ನು ಕೆಡಿಸುವ ಉದ್ದೇಶದಿಂದಲೇ ನೀವು ಬಂದಿದ್ದೀರಿ’ ಎಂದು ಸ್ಥಳೀಯರು ಕಿಡಿಕಾರಿರುವ ಘಟನೆಯು ನಡೆದಿದೆ.
ಉತ್ಖನನ ಕಾರ್ಯದಲ್ಲಿ ಸುಮಾರು 35ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮುಂಜಾನೆ 8ಗಂಟೆಯಿಂದ ಸಂಜೆ 5ಗಂಟೆ ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಮಿಕರಿಗೆ ಶೂ, ಗ್ಲೌಸ್, ನೆರಳಿನ ವ್ಯವಸ್ಥೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ.
ಈ ವಿಷಯ ಪತ್ರಿಕಾ ವರದಿಯಲ್ಲಿ ಓದಿ, ಬೆಂಗಳೂರಿನಿಂದ ಇಲ್ಲಿಗೆ ಬಂದಿರುವೆ. ಹರಿದ ಮೆಡಿಕಲ್ ಗ್ಲೌಸ್ ತೋರಿಸಿ ಇದೇನಾ ಸೌಲಭ್ಯ ಅಂತಾ ಅಶ್ವಥ್ ಮರಿಗೌಡ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರಾಮಾಣಿಕ ಮೆರೆದ ರಿತ್ತಿ ಕುಟುಂಬಕ್ಕೆ 30×40 ನಿವೇಶನ; ಲಕ್ಕುಂಡಿ ಗ್ರಾಪಂ ನಿರ್ಧಾರ
ಸ್ಥಳಕ್ಕೆ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ್ & ಗ್ರಾಮಸ್ಥರ ಭೇಟಿ, ಪ್ರತಿಭಟನೆ ಮಾಡದಂತೆ ಮನವೊಲಿಕೇ ಮಾಡಿದಾಗಲೂ ಪ್ರತಿಭಟನೆ ಮುಂದಾದಾಗ ಪೊಲೀಸರು ಅಶ್ವಥ್ ಮರಿಗೌಡ್ರ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು, ಕರೆದೋಯ್ದರು.





