ಸಂವಿಧಾನ ದಿನದ ಪ್ರಯುಕ್ತ ಭಾರತ ಸಂವಿಧಾನದ ಮೇಲೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಗದಗ ನಗರದ ಕೆ. ಎಲ್. ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು.
ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಸುಮಾರು 315 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂವಿಧಾನ ಕುರಿತಾದ ಕ್ವಿಜ್ ಸ್ಪರ್ಧೆಯ ಪ್ರಥಮ ಸ್ಥಾನವನ್ನು ಗಣೇಶ ಕಿನ್ನರಿ, ಸ. ಪ. ಪೂ. ಕಾಲೇಜು ಸಿದ್ದಲಿಂಗ ನಗರ ಗದಗ. ದ್ವಿತೀಯ ಸ್ಥಾನ ಜಗದೀಶ್ ಕುರಿ, ಸ. ಪ. ಪೂ. ಕಾಲೇಜು ಸಿದ್ದಲಿಂಗ ನಗರ ಗದಗ. ತೃತೀಯ ಸ್ಥಾನ ವಿದ್ಯಾಶ್ರೀ ಲಕ್ಕಣ್ಣವರ, ಸ. ಪ. ಪೂ. ಕಾಲೇಜು ಕುರ್ತಕೋಟಿ ಇವರು ಪಡೆದುಕೊಂಡರು.
ಈ ಸುದ್ದಿ ಓದಿದ್ದೀರಾ? ರೋಣ ತಹಶೀಲ್ದಾರ್ ಕಚೇರಿಯಲ್ಲಿ ನಿರ್ವಹಣೆ ಕೊರತೆ: ದುರ್ನಾತ ಬೀರುತ್ತಿವೆ ಶೌಚಾಲಯಗಳು
ವಿಜೇತರಿಗೆ ನವೆಂಬರ್ 26 ರಂದು ಮಹಾವಿದ್ಯಾಲಯದಲ್ಲಿ ಜರುಗುವ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





