ಗದಗ | ಸರಕಾರದ ವ್ಯಾಪ್ತಿಯಲ್ಲಿ ಸಾಧ್ಯತೆಗಳನ್ನು ಬಳಸಿಕೊಂಡು RSS ಚಟುವಟಿಕೆಗಳನ್ನು ನಿರ್ಬಂಧಿಸಬೇಕು: ಚಿಂತಕ ಬಸವರಾಜ ಸೂಳಿಬಾವಿ

Date:

“ಸಮಾಜದ ಸೌಹಾರ್ದ ಕದಡುವ, ಲಾಠಿ ಹಿಡಿದುಕೊಂಡು ಸಮಾಜದಲ್ಲಿ ಭಯ ಹುಟ್ಟಿಸುವ ಸಂಘಟನೆಗಳನ್ನು ನಿಷೇದ ಮಾಡುವಂತ ಕೆಲಸ ಕೇಂದ್ರ ಸರಕಾರಕ್ಕೆ ಇದೆ. ಹಿಂದೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ನಿಷೇದ ಮಾಡಿದ್ದು ಅದರಿಂದ ಪಾರಾಗಿ ಬಂದ ಆರ್ ಎಸ್ ಎಸ್ ಧಾರ್ಮಿಕವಾಗಿ ಏನು ಮಾಡುತ್ತಿಲ್ಲ, ಇವತ್ತು ಸಮಾಜದಲ್ಲಿ ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಸಾಧ್ಯತೆಗಳನ್ನು ಬಳಸಿಕೊಂಡು ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು” ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಒತ್ತಾಯಿಸಿದರು.

ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಭಯೋತ್ಪದನಾ ಸಂಘಟನೆ ಆರ್ ಎಸ್ ಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇದ ಮಾಡುವ ಕುರಿತು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

“ಆರ್ ಎಸ್ ಎಸ್ ಸಂಘಟನೆ ಹುಟ್ಟಿ ನೂರು ವರ್ಷ ಆಗಿದೆ. ನೂರು ವರ್ಷ ಪೂರೈಸಿದ ಈ ಸಂಘಟನೆ ಯಾಕೆ ಇನ್ನೂ ನೋಂದಣಿ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಈ ದೇಶದ ಸಹಕಾರಿ ಇಲಾಖೆ ಕಾಯ್ದೆ ಅನುಗುಣವಾಗಿ ಈ ಸಂಸ್ಥೆ ನೋಂದಣಿ ಆಗಬೇಕಿತ್ತು, ಇದುವರೆಗೂ ಆಗಿಲ್ಲ. ಹಾಗಾಗಿ ಈ ದೇಶದ ಸಹಕಾರಿ ಕಾಯ್ದೆಗಳ ಅಡಿಯಲ್ಲಿ ಈ ಆರ್ ಎಸ್ ಎಸ್ ಸಂಘಟನೆ ಬರುವುದಿಲ್ಲ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈ ದೇಶಕ್ಕಿಂತ ನಾನೇ ಶ್ರೇಷ್ಠ ಅನ್ನೋ ಭಾವನೆ ಆರ್ ಎಸ್ ಎಸ್ ಸಂಘಟನೆ ಹೊಂದಿದೆ. ಹೀಗಾಗಿ ಈ ದೇಶದ ಸಂವಿಧಾನಕ್ಕೆ, ಕಾಯ್ದೆಗಳಿಗೆ ಅಗೌರವ ತೋರುವ ಕಾರಣಕ್ಕೆ ಆರ್ ಎಸ್ ಎಸ್ ಸಂಘಟನೆ ಇಲ್ಲಿವರೆಗೂ ನೋಂದಣಿಯಾಗಿಲ್ಲ. ಸಂಸ್ಥೆಗೆ ಎಲ್ಲಿಂದ ಹಣ ಬರುತ್ತೆ, ಎಲ್ಲಿ ಹೋಗುತ್ತೆ, ಎಷ್ಟು ಖರ್ಚು ಆಯ್ತು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಿಲ್ಲ. ಯಾಕೆಂದರೆ ಈ ದೇಶದ ಸಹಕಾರಿ ಇಲಾಖೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿಲ್ಲ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದರು.

“ಈ ದೇಶದ ರಾಷ್ಟ್ರಧ್ವಜವನ್ನೇ ಆರ್ ಎಸ್ ಎಸ್ ಒಪ್ಪಿಕೊಂಡಿಲ್ಲ. ತಮ್ಮದೇ ಆದ ಲಾಂಛನವನ್ನು ಹೊಂದಿದೆ. ಇಡೀ ರಾಜ್ಯದ್ಯಂತ ಪಥಸಂಚಲನ ಮಾಡಿದರೂ ಎಲ್ಲೂ ರಾಷ್ಟ್ರಧ್ವಜ ಕಾಣುವುದಿಲ್ಲ. ರಾಷ್ಟ್ರಧ್ವಜಕ್ಕಿಂತ, ಸಂವಿಧಾನಕ್ಕಿಂತ, ಸರಕಾರಕ್ಕಿಂತ, ಕಾಯ್ದೆಗಳಿಗಿಂತ ದೊಡ್ಡದು ಎಂಬ ಆರ್ ಎಸ್ ಎಸ್ ಧೋರಣೆಯನ್ನು ಪ್ರಶ್ನೆ ಮಾಡಬೇಕಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಸಚಿವ ಪ್ರಿಯಾಂಕ ಖರ್ಗೆ ಅವರು ಬರೆದ ಪತ್ರದಲ್ಲಿ ‘ಆರ್ ಎಸ್ ಎಸ್ ನಿಷೇದ ಮಾಡಿ ಎಂಬುದಿಲ್ಲ. ಸಾರ್ವಜನಿಕ ಸ್ಥಳ, ಶಾಲೆ, ಮೈದಾನಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧಿಸಬೇಕು’ ಎಂದಿದ್ದಾರೆ. ಹೀಗೆ ಹೇಳಿದ್ದಕ್ಕೆ ವೈಯಕ್ತಿಕ ದಾಳಿ, ನಿಂದನೆ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ” ಎಂದು ಕಿಡಿಕಾರಿದರು.

“ಈ ದೇಶದ ಪ್ರಜೆಗಳಾದ ನಾವು ಈ ದೇಶದ ಎಲ್ಲ ಕಾಯ್ದೆಗಳನ್ನು ಸಂವಿಧಾನಕ್ಕೆ ಒಪ್ಪಿತ ಕೆಲಸ ಮಾಡಬೇಕು. ಎಲ್ಲ ಸಂಘಟನೆಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಸರಕಾರದಿಂದ, ಸಂವಿಧಾನದಿಂದ ಆಚೆ ಇರುತ್ತೇನೆ ಎನ್ನುವ ಧೋರಣೆ ದೇಶದ್ರೋಹಿ ಕೆಲಸ ಆಗುತ್ತದೆ. ದೇಶದ್ರೋಹ ಪಟ್ಟ ಹೊರುವುದಾದರೆ ಈ ಆರ್ ಎಸ್ ಎಸ್ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? RSS ನಿಷೇಧ; ಪ್ರಿಯಾಂಕ್ ಖರ್ಗೆ ಹೇಳುವುದರಲ್ಲಿ ತಪ್ಪೇನಿದೆ: ಸಿಎಂ ಸಿದ್ದರಾಮಯ್ಯ

“ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಲಾಠಿ ಹಿಡಿದುಕೊಂಡು ಆರ್ ಎಸ್ ಎಸ್ ಪಥಸಂಚಲನ ಮಾಡಿದರೆ ಅಡೆತಡೆ ಆಗುವುದಿಲ್ಲ. ಆದರೆ, ಜನರ ಸಮಸ್ಯೆಗಳಿಗಾಗಿ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಿದರೆ ಅಡತಡೆ ಆಗುತ್ತದೆ. ಇದನ್ನು ಹೈಕೋರ್ಟ್ ಗಮನಿಸಬೇಕು. ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಸಂಘಟನೆಗಳಿಗೆ ಧಾರ್ಮಿಕ ಪ್ರಚಾರ ಮಾಡಲು ಅವಕಾಶವಿಲ್ಲ ಎಂದು ಆದೇಶ ಹೊರಡಿಸಬೇಕು. ಹೋರಾಟಕ್ಕೆ ಪ್ರೀಡಂಪಾರ್ಕ್ ಸ್ಥಳವನ್ನು ಸೂಚಿಸಿದ್ದಾರೆಯೋ ಹಾಗೆಯೇ ಈ ಸಂಘಟನೆಗಳಿಗೆ ಸ್ಥಳ ನಿಗದಿಪಡಿಸಬೇಕು” ಎಂದು ಬಸವರಾಜ ಸೂಳಿಬಾವಿ ಹೇಳಿದರು.

ಲಿಂಗಾಯುತ ಮುಖಂಡರು ಅಶೋಕ ಬರಗುಂಡಿ ಅವರು ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ದಲಿತಪರ ಮುಖಂಡರು ಡಿ. ಕೆ. ಪೂಜಾರ, ಮುತ್ತು ಬಿಳಿಯಲಿ, ಬಾಲರಾಜ್ ಅರಬರ, ಆನಂದ ಶಿಂಗಾಡಿ, ಯಲ್ಲಪ್ಪ ರಾಮಗಿರಿ, ಪರಶು ಕಾಳೆ ಅನಿಲ ಕಾಳೆ, ಶಿವಾನಂದ ತಮ್ಮಣ್ಣವರ, ಬಸು ಬಿಳಿಯಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...