ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಷಿಗೇರಿ ಗ್ರಾಮದಲ್ಲಿ ಉಂಟಾಗಿದೆ.
ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ಜನರು ಕುಡಿಯುವ ನೀರಿಗಾಗಿ ನಿತ್ಯ ಅಲೆದಾಡುವಂತ ಪರಿಸ್ಥಿತಿ ಉಂಟಾಗಿದೆ. ನಿತ್ಯವೂ ನೀರಿಗಾಗಿ ಕೆಲಸ ಬಿಟ್ಟು ಸರತಿಸಾಲು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ದಲಿತ ಕಾಲೋನಿಯಲ್ಲಿನ ಜನರು ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಕುರಿತು ಗ್ರಾಮ ಪಂಚಾಯತಿಗೆ ತಿಳಿಸಿದರು. ಪಿಡಿಓ ಆಗಲಿ, ಗ್ರಾಮ ಪಂಚಾಯತಿ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಲೋನಿಯಲ್ಲಿ ಜಲ ಜೀವನ್ ಮಿಶನ್ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ. ಈ ಯೋಜನೆಯ ಎಳ್ಳಷ್ಟು ಪ್ರಯೋಜನೆ ಆಗಿಲ್ಲ. ಸರಿಯಾಗಿ ಕುಡಿಯುವ ನೀರು ಬರುವುದೇ ಇಲ್ಲ. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ಗ್ರಾಮದಲ್ಲಿ ಯಾವುದೇ ಅಬಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಕಾಲೋನಿಯ ಶರಣು ದೊಡ್ಡಮನಿ ಆರೋಪಿಸಿದ್ದಾರೆ.




