ಗದಗ ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಅಂದಯ್ಯ ಅರವಟಗಿಮಠರವರು ರಚಿಸಿದ ‘ದೈವ ದೈವಗಳಾಚೆ’ ಕಥೆಗೆ ಪ್ರಥಮ ಬಹುಮಾನ ದೊರೆತಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡವು ನಾಡೋಜ ಡಾ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡದ ಯುವ ಲೇಖಕರಿಗಾಗಿ ಹಮ್ಮಿಕೊಂಡಿದ್ದ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡದ ಬಹುಮುಖ್ಯ ಕಥೆಗಾರರರು ನಿರ್ಣಯಿಸಿದ ಬಹುಮಾನವನ್ನು ಹಿರಿಯ ಬರಹಗಾರ ಡಾ. ಲೋಹಿತ್ ಡಿ ನಾಯ್ಕರ್ ಮತ್ತು ವಿಮರ್ಶಕ ಎಸ್ ಆರ್ ವಿಜಯಶಂಕರ ಅವರು ವಿತರಿಸಲಿದ್ದಾರೆ.
ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷೆ ರಜನಿ ಪಾಟೀಲ್, ಪ್ರಾಚಾರ್ಯ ಡಾ. ಎ ಕೆ ಮಠ, ಉಪ ಪ್ರಾಚಾರ್ಯರಾದ ಡಾ. ವೀಣಾ ಈ ಮತ್ತು ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದವು ಬಹುಮಾನಿತರನ್ನು ಅಭಿನಂದಿಸಿದೆ.





